CAA: ಮತ್ತೆ ಪ್ರತಿಭಟನೆಗೆ ಸಜ್ಜು, ಬೆಂಗಳೂರಲ್ಲಿ ಎಲ್ಲೆಲ್ಲಿ ಸಂಚಾರ ಬದಲು

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಕಿಚ್ಚಿಗೆ ಇಡೀ ದೇಶ ಧಗಧಗಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಕಾಯ್ದೆ ವಿರುದ್ಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಂದು ಮತ್ತೆ ಸಿಎಎ ವಿರುದ್ಧದ ಕಿಚ್ಚು ಜೋರಾಗಲಿದೆ. ಬೆಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಬೃಹತ್ ಱಲಿ: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು, ಆಕ್ರೋಶ ಕಿಡಿ ತೀವ್ರಗೊಳ್ಳುತ್ತಿರೋ ನಡುವೆಯೇ ರಾಜಧಾನಿಯಲ್ಲಿಂದು ಸಿಎಎ ಕಿಚ್ಚು ಮತ್ತಷ್ಟು ಜೋರಾಗಲಿದೆ. ಬರೋಬ್ಬರಿ 35ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ನಗರದಲ್ಲಿ ಬೃಹತ್ ಱಲಿಯನ್ನ […]

CAA: ಮತ್ತೆ ಪ್ರತಿಭಟನೆಗೆ ಸಜ್ಜು, ಬೆಂಗಳೂರಲ್ಲಿ ಎಲ್ಲೆಲ್ಲಿ ಸಂಚಾರ ಬದಲು
Follow us
ಸಾಧು ಶ್ರೀನಾಥ್​
|

Updated on:Dec 23, 2019 | 10:04 AM

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಕಿಚ್ಚಿಗೆ ಇಡೀ ದೇಶ ಧಗಧಗಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಕಾಯ್ದೆ ವಿರುದ್ಧ ಜನ ಬೀದಿಗಿಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಂದು ಮತ್ತೆ ಸಿಎಎ ವಿರುದ್ಧದ ಕಿಚ್ಚು ಜೋರಾಗಲಿದೆ.

ಬೆಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳ ಬೃಹತ್ ಱಲಿ: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು, ಆಕ್ರೋಶ ಕಿಡಿ ತೀವ್ರಗೊಳ್ಳುತ್ತಿರೋ ನಡುವೆಯೇ ರಾಜಧಾನಿಯಲ್ಲಿಂದು ಸಿಎಎ ಕಿಚ್ಚು ಮತ್ತಷ್ಟು ಜೋರಾಗಲಿದೆ. ಬರೋಬ್ಬರಿ 35ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ನಗರದಲ್ಲಿ ಬೃಹತ್ ಱಲಿಯನ್ನ ಆಯೋಜಿಸಿವೆ.

ಪ್ರತಿಭಟನೆಯ ನೇರ ಪರಿಣಾಮ ಸಂಚಾರ ವ್ಯವಸ್ಥೆ ಮೇಲೆ ಬೀರಲಿದೆ. ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಖುದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿದ್ದು, ನಗರದ ವಿವಿಧೆಡೆಯಿಂದ ಸಾವಿರಾರು ಜನ ಆಗಮಿಸಲಿದ್ದಾರೆ. ಈ ಹಿನ್ನೆಲೆ ಮಹಾನಗರಿಯ ನಾಲ್ಕೂ ದಿಕ್ಕುಗಳ ಸಂಚಾರ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವೆಡೆ ಸಂಚಾರ ನಿರ್ಬಂಧ ಹೇರಿದ್ರೆ, ಇನ್ನೂ ಹಲವೆಡೆ ಮಾರ್ಗವನ್ನೇ ಬದಲಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಪಕ್ಕಾ.

ಎಲ್ಲೆಲ್ಲಿ ಬಂದ್​..? ಎಲ್ಲೆಲ್ಲಿ ಮಾರ್ಗ ಬದಲು..? ಅಂದ್ಹಾಗೆ ಬೃಹತ್ ಱಲಿ ಹಿನ್ನೆಲೆ ಕಂಟೋನ್ಮೆಂಟ್ ರಸ್ತೆಯಿಂದ ಹೇನ್ಸ್ ಜಂಕ್ಷನ್‌ವರೆಗೆ ಸಂಚಾರ ಬಂದ್ ಮಾಡಲಾಗಿದೆ. ಅದೇ ರೀತಿ ನಂದಿ ದುರ್ಗ ರಸ್ತೆಯ ಹಜ್ ಕ್ಯಾಂಪ್​ನಿಂದ ಜಯಮಹಲ್​ವರೆಗೂ ವಾಹನ ಸಂಚಾರ ಬಂದ್ ಆಗಿರಲಿದೆ. ಇನ್ನುಳಿದಂತೆ ನಾಗವಾರ, ಥಣಿಸಂದ್ರ, ಬಾಣಸವಾಡಿ, ಕೆ.ಆರ್​. ಪುರಂ, ಕೆಂಗೇರಿ, ಬನ್ನೇರುಘಟ್ಟ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಅಂಜನಾಪುರ, ಕನಕಪುರ ರಸ್ತೆ, ತಿಲಕ್​ನಗರ, ಜಯನಗರ, ಜಾಲಹಳ್ಳಿ, ಪೀಣ್ಯದಲ್ಲಿ ಮಾರ್ಗವನ್ನ ಬದಲಿಸಲಾಗಿದೆ.

ಅಲ್ಪಸಂಖ್ಯಾತರ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣಿಡಲು ಒಂದು ಸಾವಿರ ಕ್ಯಾಮರಾ, 60 ಸಿಎಆರ್ ಹಾಗೂ 53 ಕೆಎಸ್​ಆರ್​ಪಿ ತುಕಡಿಯನ್ನ ನಿಯೋಜಿಸಲಾಗಿದೆ. ಜೊತೆಗೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರುವುದು, ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಅಂತ ನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

ಸಿಎಂ ಬಿಎಸ್​​ವೈ ಭೇಟಿಯಾದ ಗೃಹಸಚಿವ, ಡಿಜಿ&ಐಜಿಪಿ: ಇನ್ನು ಸಿಎಎ ವಿರೋಧಿಸಿ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಯುತ್ತಿರೋ ಹಿನ್ನೆಲೆ ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಜಿ&ಐಜಿಪಿ ನೀಲಮಣಿರಾಜು ತಡರಾತ್ರಿ ಸಿಎಂ ಭೇಟಿಯಾಗಿದ್ದಾರೆ. ಈ ವೇಳೆ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿ, ಭದ್ರತೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಅದ್ರಲ್ಲೂ ಮಂಗಳೂರಿನಲ್ಲಿ ನಡೆದ ಘಟನೆ ಮರುಕಳಿಸದಂತೆ ಡಿಜಿ&ಐಜಿಪಿಗೆ ಸಿಎಂ ಬಿಎಸ್​ವೈ ಸೂಚನೆ ನೀಡಿದ್ದಾರೆ.

ಒಟ್ನಲ್ಲಿ, ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ಗಂಟೆವರೆಗೆ ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವಾಗಲಿದ್ದು ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

Published On - 8:10 am, Mon, 23 December 19