ಭಲೇ! ಗಲಭೆ ಮಧ್ಯೆಯೂ ಹನುಮನ ರಕ್ಷಿಸಲು ಮಾನವ ಸರಪಳಿ ನಿರ್ಮಿಸಿದರು!
ಬೆಂಗಳೂರು: ಇಡೀ ಡಿಜೆ ಹಳ್ಳಿ ನಿನ್ನೆ ರಾತ್ರಿ ನಡೆದ ಗಲಭೆಯ ಸುಳಿಯಲ್ಲಿದ್ದಾಗ ಅದೇ ಏರಿಯಾದಲ್ಲಿ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿಯೊಂದು ಬೆಳಕಿಗೆ ಬಂದಿದೆ. ದುಷ್ಕೃತ್ಯ ತಡೆದಿದ್ದು ಬರೋಬ್ಬರಿ 100 ಮುಸ್ಲಿಂ ಯುವಕರ ಮಾನವ ಸರಪಳಿ ಹೌದು, ಡಿಜೆ ಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಗಲಭೆಕೋರರು ಬಳಿಕ ಬಡಾವಣೆಯ ಶಾಂಪುರ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇವಸ್ಥಾನದತ್ತ ಹೆಜ್ಜೆಹಾಕಿದ್ದರು. ಕಿಡಿಗೇಡಿಗಳ ಮನಸ್ಸಲ್ಲಿ ಏನಿತ್ತು ಅನ್ನೋದು ಇಷ್ಟೊತ್ತಿಗೆ ನೀವೆಲ್ಲರೂ ಊಹಿಸಿರಬಹುದು. ಆದರೆ, ಪವಾಡ ಸದೃಶವೆಂಬಂತೆ ದುಷ್ಕರ್ಮಿಗಳು ತಮ್ಮ ಯೋಜನೆಯಲ್ಲಿ ಸಫಲವಾಗಲಿಲ್ಲ. […]
Follow us on
ಬೆಂಗಳೂರು: ಇಡೀ ಡಿಜೆ ಹಳ್ಳಿ ನಿನ್ನೆ ರಾತ್ರಿ ನಡೆದ ಗಲಭೆಯ ಸುಳಿಯಲ್ಲಿದ್ದಾಗ ಅದೇ ಏರಿಯಾದಲ್ಲಿ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿಯೊಂದು ಬೆಳಕಿಗೆ ಬಂದಿದೆ.
ದುಷ್ಕೃತ್ಯ ತಡೆದಿದ್ದು ಬರೋಬ್ಬರಿ 100 ಮುಸ್ಲಿಂ ಯುವಕರ ಮಾನವ ಸರಪಳಿ ಹೌದು, ಡಿಜೆ ಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಗಲಭೆಕೋರರು ಬಳಿಕ ಬಡಾವಣೆಯ ಶಾಂಪುರ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇವಸ್ಥಾನದತ್ತ ಹೆಜ್ಜೆಹಾಕಿದ್ದರು. ಕಿಡಿಗೇಡಿಗಳ ಮನಸ್ಸಲ್ಲಿ ಏನಿತ್ತು ಅನ್ನೋದು ಇಷ್ಟೊತ್ತಿಗೆ ನೀವೆಲ್ಲರೂ ಊಹಿಸಿರಬಹುದು. ಆದರೆ, ಪವಾಡ ಸದೃಶವೆಂಬಂತೆ ದುಷ್ಕರ್ಮಿಗಳು ತಮ್ಮ ಯೋಜನೆಯಲ್ಲಿ ಸಫಲವಾಗಲಿಲ್ಲ. ಅವರ ದುಷ್ಕೃತ್ಯಕ್ಕೆ ಅಡ್ಡವಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 100 ಮುಸ್ಲಿಂ ಯುವಕರು.
ಇಡೀ ರಾತ್ರಿ.. ಹನುಮನ ರಕ್ಷಣೆಗೆ ಅಕ್ಷರಶಃ ನಿಂತುಬಿಟ್ಟರು
ಗಲಭೆಕೋರರ ಉದ್ದೇಶವನ್ನ ಅರಿತ ಈ ಯುವಕರು ಕೂಡಲೇ ದೇವಸ್ಥಾನದತ್ತ ತೆರಳಿ ಪುಂಡರನ್ನು ಅಲ್ಲಿಂದ ಓಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಡೀ ರಾತ್ರಿ ದೇಗುಲದ ಮುಂದೆ ಮಾನವ ಸರಪಳಿ ರಚಿಸಿ ಹನುಮನ ರಕ್ಷಣೆಗೆ ನಿಂತರು. ಆಂಜನೇಯನ ರಕ್ಷಣೆಗೆ ನಿಂತ ಯುವಕರ ಕಾರ್ಯದ ವಿಡಿಯೋ ಇದೀಗ ಬೆಳಕಿಗೆ ಬಂದು ಸಖತ್ ವೈರಲ್ ಆಗಿದೆ. ಒಟ್ನಲ್ಲಿ, ಪ್ರಸಿದ್ಧ ಕವಿ ಮಹಮ್ಮದ್ ಇಕ್ಬಾಲ್ರ ಸಾರೆ ಜಹಾಂಸೆ ಅಚ್ಛಾ ಕವನದ ಸಾಲಿನಂತೆ ‘‘ಬೋಧಿಸುವುದಿಲ್ಲ ಧರ್ಮ ಮಾನವರ ನಡುವೆ ದ್ವೇಷ. ಭಾರತೀಯ ಸುತರು ನಾವು, ಭಾರತವು ನಮ್ಮ ದೇಶ’’ ಎಂದು ಈ ಯುವಕರು ತಮ್ಮ ನಡೆ-ನುಡಿಯ ಮುಖಾಂತರ ತೋರಿಸಿಕೊಟ್ಟಿದ್ದಾರೆ.