ಡಿಜೆ ಹಳ್ಳಿ ಗಲಭೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಸಿಬಿ ಟೆಕ್ನಿಕಲ್ ತಂಡ
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಈಗ ಪ್ರಮುಖ ಅರೋಪಿಗಳ ಮೊಬೈಲ್ಗಳನ್ನು ಸಿಸಿಬಿಯ ಟೆಕ್ನಿಕಲ್ ತಂಡಕ್ಕೆ ಹಸ್ತಾಂತರಿಸಲಾಗಿದೆ. ತನಿಖೆಯ ದಿಕ್ಕನೇ ಬದಾಯಿಸುವಂಥ ಸಾಕ್ಷಿಗಳು ದೊರೆಯುವ ಸಾಧ್ಯತೆಗಳಿದ್ದು, ವಶಕ್ಕೆ ಪಡೆದಿರುವ ಮೊಬೈಲ್ನಲ್ಲಿರುವ ಡಾಟಾ ಹೊರತೆಗೆದು ಸಿಸಿಬಿಯ ತಾಂತ್ರಿಕ ತಂಡ ಪರಿಶೀಲನೆ ನಡೆಸಲಿದೆ. ಆದರೆ ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಲು ನವೀನ್ ಬಳಸಿದ್ದ ವಿವೋ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಹೀಗಾಗಿ, ಸಿಸಿಬಿ ತಂಡವು ನವೀನ್ ಬಳಸುತಿದ್ದ ಮೊಬೈಲ್ನಿಂದ ಎಷ್ಟು ಗಂಟೆಗೆ ನಿರ್ದಿಷ್ಟವಾಗಿ ಪೋಸ್ಟ್ […]
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಈಗ ಪ್ರಮುಖ ಅರೋಪಿಗಳ ಮೊಬೈಲ್ಗಳನ್ನು ಸಿಸಿಬಿಯ ಟೆಕ್ನಿಕಲ್ ತಂಡಕ್ಕೆ ಹಸ್ತಾಂತರಿಸಲಾಗಿದೆ.
ತನಿಖೆಯ ದಿಕ್ಕನೇ ಬದಾಯಿಸುವಂಥ ಸಾಕ್ಷಿಗಳು ದೊರೆಯುವ ಸಾಧ್ಯತೆಗಳಿದ್ದು, ವಶಕ್ಕೆ ಪಡೆದಿರುವ ಮೊಬೈಲ್ನಲ್ಲಿರುವ ಡಾಟಾ ಹೊರತೆಗೆದು ಸಿಸಿಬಿಯ ತಾಂತ್ರಿಕ ತಂಡ ಪರಿಶೀಲನೆ ನಡೆಸಲಿದೆ. ಆದರೆ ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಲು ನವೀನ್ ಬಳಸಿದ್ದ ವಿವೋ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ.
ಹೀಗಾಗಿ, ಸಿಸಿಬಿ ತಂಡವು ನವೀನ್ ಬಳಸುತಿದ್ದ ಮೊಬೈಲ್ನಿಂದ ಎಷ್ಟು ಗಂಟೆಗೆ ನಿರ್ದಿಷ್ಟವಾಗಿ ಪೋಸ್ಟ್ ಹಾಕಲಾಗಿತ್ತು ಎಂಬುದರ ಬಗ್ಗೆ ಪರಿಶೀಲನೆ ನೆಡೆಸುತ್ತಿದ್ದಾರೆ. ಸದ್ಯ ವಿವಾದಾತ್ಮಕ ಪೋಸ್ಟ್ನ ಫೇಸ್ಬುಕ್ನಿಂದ ಡಿಲೀಟ್ ಮಾಡಲಾಗಿದೆ.