[lazy-load-videos-and-sticky-control id=”hdX6t-VLgRQ”]
ಬೆಂಗಳೂರು: ದೇವರ ದರ್ಶನವಿಲ್ಲದೆ ಕಂಗಾಲಾಗಿರೋ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಹೌದು, ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಇನ್ಮುಂದೆ ದೇವರ ದರ್ಶನ ಇರುವುದರ ಜೊತೆಗೆ ಎಲ್ಲಾ ಸೇವೆಗಳೂ ಸಹ ಲಭ್ಯ ಮಾಡಿಕೊಡಲಿದೆ. ಲಾಕ್ಡೌನ್ನಿಂದ ದೇವಾಲಯದ ಆದಾಯದಲ್ಲಿ ಸಾಕಷ್ಟು ಇಳಿಕೆಯಾಗಿರುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ನಷ್ಟ ಭರಿಸಿಕೊಳ್ಳೋಕೆ ಈ ಯೋಜನೆ ರೂಪಿಸಿದೆ.
ಶೀಘ್ರದಲ್ಲೇ ಎಲ್ಲಾ ದೇಗುಲಗಳಲ್ಲಿ ದೇವರ ದರ್ಶನ ಜೊತೆಗೆ ಸೇವೆ ಲಭ್ಯವಾಗಲಿದ್ದು ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೆಲ ವಿಶೇಷ ಸೇವೆಗಳಿಗೂ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ನಿಂದ ಎಲ್ಲಾ ಸೇವೆಗಳನ್ನು ಪ್ರಾರಂಭಿಸುವ ಚಿಂತನೆಯಲ್ಲಿರುವ ಇಲಾಖೆ ಸದ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದೆ. ಸೇವೆಗಳಲ್ಲಿ ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ ಹಾಗೂ ಮುಡಿ ಸೇವೆಗಳು ಪುನಾರಂಭಗೊಳ್ಳುವ ಸಾಧ್ಯತೆಯಿದೆ.
Published On - 9:08 am, Sat, 29 August 20