ಮೈಸೂರು ಪಾಲಿಕೆ ಚುನಾವಣೆ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ್ರಾ ಹೆಚ್.ಡಿ. ಕುಮಾರಸ್ವಾಮಿ!?

| Updated By: ಸಾಧು ಶ್ರೀನಾಥ್​

Updated on: Feb 24, 2021 | 3:20 PM

Mysore Corporation Mayor Election: ಕೊನೆಯ ಕ್ಷಣದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್​ ಜತೆ ಮಾತುಕತೆ ಕುದುರಿಸಿದ್ರಾ ಎಂಬ ಊಹಾಪೋಹಗಳು ಸೃಷ್ಟಿಯಾಗುತ್ತಿವೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ್ರಾ ಎಂಬ ಮಾತು ಕೇಳಿಬರುತ್ತಿದೆ.

ಮೈಸೂರು ಪಾಲಿಕೆ ಚುನಾವಣೆ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ್ರಾ ಹೆಚ್.ಡಿ. ಕುಮಾರಸ್ವಾಮಿ!?
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
Follow us on

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್‌ಗಿರಿ ಹಿಡಿಯಲು ತಂತ್ರ ಹೂಡಿದ್ದ ಜೆಡಿಎಸ್, ಕೊನೆಗೂ ಗೆಲುವಿನ ನಗೆ ಬೀರಿದೆ. ಮೇಯರ್‌ಗಿರಿ ಕಾಂಗ್ರೆಸ್‌ಗೆ ಸಿಗಲೇಬೇಕೆಂದು ಸೂಚಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೂ ಚಳ್ಳೆಹಣ್ಣು ತಿನ್ನಿಸಿದೆ ಜೆಡಿಎಸ್! ಈ ಕುರಿತಂತೆ ಕಾಂಗ್ರೆಸ್, ಜಿಜೆಪಿ ಯಾರೊಂದಿಗೂ ಹೋಗಲ್ಲ ಎಂದು ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್​ ಜತೆ ಮಾತುಕತೆ ಕುದುರಿಸಿದ್ರಾ ಎಂಬ ಊಹಾಪೋಹಗಳು ಸೃಷ್ಟಿಯಾಗುತ್ತಿವೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ್ರಾ ಎಂಬ ಮಾತು ಕೇಳಿಬರುತ್ತಿದೆ. Mysore Corporation Mayor Election

ಸಿದ್ದರಾಮಯ್ಯಗೆ ತವರಿನಲ್ಲಿ ಮುಖಭಂಗ ಮಾಡಿದ್ರಾ ಕುಮಾರಸ್ವಾಮಿ?
ಮೇಯರ್ ಕೊಟ್ಟರೆ ಮಾತ್ರ ಮೈತ್ರಿಯಾಗಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ನಾವು ಯಾರ ಜೊತೆಯೂ ಮೈತ್ರಿ ಇಲ್ಲ ಎಂದು ಹೇಳುತ್ತಲೇ ಜೆಡಿಎಸ್ ಮೇಯರ್ ಪಟ್ಟ ಗಿಟ್ಟಿಸಿಕೊಂಡಿದೆ. ಕಡೆ ಕ್ಷಣದಲ್ಲಿ ಮೈಸೂರು ಪಾಲಿಕೆ ಚುನಾವಣೆ ರಾಜಕೀಯಕ್ಕೆ ಡಿ.ಕೆ.ಶಿವಕುಮಾರ್​ ಎಂಟ್ರಿಯಾಗಿದ್ದಾರೆ. ಕುಮಾರಸ್ವಾಮಿ ಜೊತೆ ಮಾತನಾಡಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯಗೆ ಮುಖಭಂಗ ಮಾಡಲು ಮಾಸ್ಟರ್​ ಪ್ಲಾನ್​ ಮಾಡಲು ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮೇಯರ್ ಆದ ಪತ್ನಿಗೆ ಕೌನ್ಸಿಲ್ ಹಾಲ್‌ನಲ್ಲೇ ಮುತ್ತು ಕೊಟ್ಟ ಪತಿ:
ಜೆಡಿಎಸ್ ಜಿ.ಪಂ ಸದಸ್ಯರಾಗಿರುವ ಮಾದೇಗೌಡ, ಮೇಯರ್​ಆದ ಪತ್ನಿ ರುಕ್ಮಿಣಿ ಕೆನ್ನೆಗೆ ಕೌನ್ಸಿಲ್ ಹಾಲ್‌ನಲ್ಲೇ ಮುತ್ತು ಕೊಟ್ಟು ಅಂತೋಷ ಪಟ್ಟಿದ್ದಾರೆ. ಈ ಅಪರೂಪದ ಸನ್ನಿವೇಶಕ್ಕೆ ಮೈಸೂರು ಪಾಲಿಕೆ ಕೌನ್ಸಿಲ್ ಸಭಾಂಗಣ ಸಾಕ್ಷಿಯಾಯಿತು.

ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಟ್ವಿಸ್ಟ್.. ಕೊನೆಯ ಕ್ಷಣದಲ್ಲಿ ಮೈತ್ರಿ ಮುರಿದ JDS

ಇದನ್ನೂ ಓದಿ: ಮೈಸೂರು ಪಾಲಿಕೆ ಚುನಾವಣೆ: ಕುಮಾರಸ್ವಾಮಿ ಮೈಂಡ್​ ರೀಡ್​ ಮಾಡೋದು ಕಷ್ಟ ಕಷ್ಟ. ಅವರ ಹೇಳಿಕೆಯೇ ಒಂದು, ನಡೆದ ವಾಸ್ತವವೇ ಇನ್ನೊಂದು- ಎಸ್​.ಟಿ. ಸೋಮಶೇಖರ್

Published On - 3:20 pm, Wed, 24 February 21