Mysore Dasara 2021: ಕೊರೊನಾದಿಂದ ಜಟ್ಟಿ‌ ಕಾಳಗಕ್ಕೆ ಬ್ರೇಕ್: ಅರಮನೆಯ ಪಾರಂಪರಿಕ ದಸರಾ ಕಾರ್ಯಕ್ರಮ ಲಿಸ್ಟ್​ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Sep 25, 2021 | 10:35 AM

ಅಕ್ಟೋಬರ್ 15ರಂದು ಅರಮನೆಯಲ್ಲಿ ವಿಜಯ ದಶಮಿ ಆಚರಿಸಲಾಗುವುದು. 5.45ಕ್ಕೆ ಆನೆ, ಕುದುರೆ, ಹಸುಗಳ ಆಗಮನವಾಗಲಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನಡೆಯಲಿದೆ. 7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದೆ.

Mysore Dasara 2021: ಕೊರೊನಾದಿಂದ ಜಟ್ಟಿ‌ ಕಾಳಗಕ್ಕೆ ಬ್ರೇಕ್: ಅರಮನೆಯ ಪಾರಂಪರಿಕ ದಸರಾ ಕಾರ್ಯಕ್ರಮ ಲಿಸ್ಟ್​ ಇಲ್ಲಿದೆ
ದಸರಾ
Follow us on

ಮೈಸೂರು: ಮುಂದಿನ ತಿಂಗಳು ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ಅಂಗವಾಗಿ ಪಾರಂಪರಿಕ ಕಾರ್ಯಕ್ರಮಗಳು ನಿಗದಿಯಾಗಿವೆ. ಅರಮನೆಯಲ್ಲಿ ಪಾರಂಪರಿಕ ದಸರಾ ಕಾರ್ಯಕ್ರಮ ನಿಗದಿಯಾಗಿದ್ದು, ಕೊವಿಡ್ ಹಿನ್ನೆಲೆ ಈ ಬಾರಿಯೂ ಜಟ್ಟಿ‌ ಕಾಳಗಕ್ಕೆ ಬ್ರೇಕ್ ಹಾಕಲಾಗಿದೆ. ಅಕ್ಟೋಬರ್ 1ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುವುದು. ಹಾಗಾಗಿ ಅ. 1ರಂದು ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ಅರಮನೆ ಕಾರ್ಯಕ್ರಮದ ಪಟ್ಟಿ ಟಿವಿ9 ಗೆ ಲಭ್ಯವಾಗಿದೆ.

ಅಕ್ಟೋಬರ್ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಕ್ಟೋಬರ್ 7ರಂದು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಔಪಚಾರಿಕವಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕಳೇದ ಬಾರಿ ಮೈಸೂರು ದಸರಾ 2020  ಮಹೋತ್ಸವವನ್ನು ಖ್ಯಾತ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್​ ಅವರು ಉದ್ಘಾಟನೆ ಮಾಡಿದ್ದರು. ಆದರೆ ಈ ಬಾರಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ.

ಅಕ್ಟೋಬರ್ 14ರಂದು ಅರಮನೆಯಲ್ಲಿ ಆಯುಧ ಪೂಜೆ ಏರ್ಪಡಿಸಲಾಗಿದೆ. ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭಗೊಳ್ಳಲಿದೆ. 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಗುವುದು. ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣ ಮಂಟಪಕ್ಕೆ ತರಲಾಗುವುದು. 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುವುದು. ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ ನಡೆಯಲಿದೆ.

ಅಕ್ಟೋಬರ್ 15ರಂದು ಅರಮನೆಯಲ್ಲಿ ವಿಜಯ ದಶಮಿ ಆಚರಿಸಲಾಗುವುದು. 5.45ಕ್ಕೆ ಆನೆ, ಕುದುರೆ, ಹಸುಗಳ ಆಗಮನವಾಗಲಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನಡೆಯಲಿದೆ. 7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದೆ. ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ದೇಗುಲದ ಬನ್ನಿ ಮರಕ್ಕೆ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಪೂಜೆ ನಡೆಸಲಿದ್ದಾರೆ. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ಸು ಆಗಲಿದ್ದಾರೆ.

ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ವಾಪಸ್ ರವಾನೆ ಮಾಡಲಾಗುವುದು. ಅಂದೂ ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿರಲಿದೆ.

ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ದರ ಏರಿಕೆ:

ಮೈಸೂರು ಅರಮನೆ ಪ್ರವೇಶ ದರ ಏರಿಕೆ ಮಾಡಲಾಗಿದ್ದು, ಅರಮನೆ ಮಂಡಳಿಯು ಹೊಸ ದರ ನಿಗದಿ ಮಾಡಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿವೆ. ಹಳೆಯ ಪ್ರವೇಶ ದರ 70 ರೂ ಇದ್ದಿದ್ದು, ಈಗ ಹೊಸ ಪ್ರವೇಶದ ದರ 100 ರೂಪಾಯಿಗೆ ಏರಿಸಲಾಗಿದೆ. ಪೋಷಕರ ಜೊತೆ ಬರುವ ಮಕ್ಕಳಿಗೆ ಹಳೆಯ ದರ 30 ರೂ ಇದ್ದರೆ, ಈಗ ಮಕ್ಕಳಿಗೆ ಹೊಸ ದರ 50 ರೂ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50 ರೂ ಮಾತ್ರವೇ ಇದೆ.

ಇನ್ನು ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರದಲ್ಲಿ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂ ಇದೆ.

Also Read:
Dasara 2021: ಮೈಸೂರು ದಸರಾಗೆ ಪ್ರಾಥಮಿಕ ಹಂತದಲ್ಲಿ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಆಯ್ಕೆ

Also Read:
ಮೈಸೂರು ದಸರಾ 2020: ಡಾ. ಸಿ.ಎನ್. ಮಂಜುನಾಥ್​ರಿಂದ ಮಹೋತ್ಸವ ಉದ್ಘಾಟನೆ

ಷೇರು ಮಾರುಕಟ್ಟೆ ಹೂಡಿಕೆ ಮಾಡದವ್ರು ಏನು ಮಾಡಬೇಕು?|Balaji Rao D.G.|Tv9 Investment Tips

(mysore dasara 2021 celebrations conventional programme list announced)

 

Published On - 9:20 am, Sat, 25 September 21