AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara 2021: ಮೈಸೂರು ದಸರಾಗೆ ಪ್ರಾಥಮಿಕ ಹಂತದಲ್ಲಿ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಆಯ್ಕೆ

ಅಂತಿಮವಾಗಿ ಆಯ್ಕೆಯಾದಲ್ಲಿ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಈ 3 ಆನೆಗಳು ಮೈಸೂರಿಗೆ ಆಗಮಿಸಲಿವೆ.

Dasara 2021: ಮೈಸೂರು ದಸರಾಗೆ ಪ್ರಾಥಮಿಕ ಹಂತದಲ್ಲಿ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಆಯ್ಕೆ
ಆನೆಗಳ ಆಯ್ಕೆ ಪ್ರಕ್ರಿಯೆ
TV9 Web
| Updated By: guruganesh bhat|

Updated on:Aug 31, 2021 | 6:44 PM

Share

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ದಲ್ಲಿ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯಲ್ಲಿ 3 ಆನೆಗಳ ಗುರುತು ಮಾಡಲಾಗಿದೆ. ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಎಂಬ ಆನೆಗಳು ಗುರುತು ಮಾಡಲಾಗಿದ್ದು, ಅಂತಿಮವಾಗಿ ಆಯ್ಕೆಯಾದಲ್ಲಿ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಈ 3 ಆನೆಗಳು ಮೈಸೂರಿಗೆ ಆಗಮಿಸಲಿವೆ. ಆನೆ ಶಿಬಿರಕ್ಕೆ ಡಿಸಿಎಫ್ ಕರಿಕಾಳನ್, ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ವಲಯ ಅರಣ್ಯಾಧಿಕಾರಿ, ಎ.ಎಂ. ಗುಡಿ ನೇತೃತ್ವದ ತಂಡ ಭೇಟಿ ನೀಡಿ 3 ಆನೆಗಳನ್ನು ಆಯ್ಕೆ ಮಾಡಿದೆ.

ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಚಿಂತನೆ‌ ಇದೆ. ಕಳೆದ ವರ್ಷ 5 ಆನೆ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ಈ ವರ್ಷ  ಮೈಸೂರು ದಸರಾ ಆಚರಿಸುವುದಂತೂ ನಿಶ್ಚಿತ. ಆದರೆ ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ನಡೆಸುತ್ತೇನೆ ಎಂದು  ಮೈಸೂರಿನಲ್ಲಿ ಸಚಿವ ಎಸ್. ಟಿ.ಸೋಮಶೇಖರ್ ಆಗಸ್ಟ್ 7 ರಂದು ತಿಳಿಸಿದ್ದರು. ಕೊವಿಡ್ ಹೆಚ್ಚಾಗಲಿದೆಯೋ ಕಡಿಮೆ ಆಗಲಿದೆಯೇ ನೋಡುತ್ತೇವೆ. ಹೈ ಪವರ್ ಕಮಿಟಿಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ. ಕೊರೊನಾ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 9ರಂದು ಹೇಳಿದ್ದರು.

ಇದನ್ನೂ ಓದಿ: 

ಕೂರ್ಗ್, ಚಿಕ್ಕಮಗಳೂರು ಕಾಫಿ, ಮೈಸೂರು ಸೋಪ್, ಸಿಲ್ಕ್, ಅಗರಬತ್ತಿ ಸೇರಿ ಕರ್ನಾಟಕದ 10 ವಿಶೇಷ ಅಂಚೆ ಲಕೋಟೆ ಬಿಡುಗಡೆ

GDP: ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ

(Mysuru Dasara Jamboo Savari 2021 Chaitra Lakshmi and Parthasarathy elephants are selected in primary level)

Published On - 6:39 pm, Tue, 31 August 21

ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ