ಸ್ವಚ್ಛ ಕಿರೀಟ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಮೈಸೂರು ಕಸರತ್ತು: ಮುಂಜಾಗೃತಾ ಕ್ರಮಕ್ಕೆ ಮುಂದಾದ ಮಹಾನಗರ ಪಾಲಿಕೆ

| Updated By: ganapathi bhat

Updated on: Mar 09, 2021 | 11:35 AM

ಕೇವಲ 22 ದಿನ ಮಾತ್ರ. 2100 ಪೌರ ಕಾರ್ಮಿಕರಿಂದ ಬೆಳಗಿನಿಂದ ಸಂಜೆವರೆಗೂ ಸ್ವಚ್ಛತೆ ನಡೆಯುತ್ತಿದ್ದು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛ ನಗರಿಗಾಗಿ ಮೈಸೂರು ಮಹಾನಗರ ಪಾಲಿಕೆ ಪಣ ತೊಟ್ಟಿದೆ. ಪಾಲಿಕೆ ಸಿಬ್ಬಂದಿಗಳು ಮನೆ ಬಾಗಿಲಿಗೆ ತೆರಳಿ ಕರಪತ್ರ ನೀಡಿ ಓಟಿಂಗ್ ಮಾಡಿಸುತ್ತಿದ್ದಾರೆ.

ಸ್ವಚ್ಛ ಕಿರೀಟ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಮೈಸೂರು ಕಸರತ್ತು: ಮುಂಜಾಗೃತಾ ಕ್ರಮಕ್ಕೆ ಮುಂದಾದ ಮಹಾನಗರ ಪಾಲಿಕೆ
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಸ್ವಚ್ಛ ನಗರಿ ಮೈಸೂರು ಮತ್ತೊಮ್ಮೆ ಸ್ವಚ್ಛ ಕಿರೀಟ ಪಟ್ಟವನ್ನು ತನ್ನ ಮುಡಿಗೇರಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಮಹಾನಗರ ಪಾಲಿಕೆ ಈ ಬಗ್ಗೆ ತಯಾರಿ ನಡೆಸುತ್ತಿದೆ. ಮುಂದಿನ ವಾರ ಮೈಸೂರಿಗೆ ಸ್ವಚ್ಛ ಸರ್ವೇಕ್ಷಣಾ ತಂಡ ತ್ಯಾಜ್ಯ ಮುಕ್ತ ನಗರ ಪರಿಶೀಲನೆಗೆ ಆಗಮಿಸಲಿದೆ. ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಇದುವರೆಗೂ 2.80 ಸಾವಿರ ಜನರಿಂದ ಮತದಾನ ನಡೆದಿದ್ದು, 1 ಲಕ್ಷಕ್ಕೂ ಹೆಚ್ಚು ಜನರು ಸ್ವಚ್ಛತಾ ಎಂಬ ಮೊಬೈಲ್‌ ಆ್ಯಪ್‌ ಡೌನ್‌ಲೋಡ್ ಮಾಡಿದ್ದಾರೆ. ಆ ಮೂಲಕ ಸ್ವಚ್ಛ ನಗರಿಗಾಗಿ ಮೈಸೂರಿಗೆ ವೋಟಿಂಗ್ ನಡೆಸುತ್ತಿದ್ದಾರೆ. ವಾಲ್ ಪೈಟಿಂಗ್, ಬೀದಿ ನಾಟಕ, ಕರಪತ್ರ ಹಂಚಿಕೆ ಮೂಲಕ ಈಗಾಗಲೇ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಮಾಡುತ್ತಿದ್ದಾರೆ.

ಉಳಿದಿರುವುದು ಕೇವಲ 22 ದಿನ ಮಾತ್ರ. 2100 ಪೌರ ಕಾರ್ಮಿಕರಿಂದ ಬೆಳಗಿನಿಂದ ಸಂಜೆವರೆಗೂ ಸ್ವಚ್ಛತೆ ನಡೆಯುತ್ತಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛ ನಗರಿಗಾಗಿ ಮೈಸೂರು ಮಹಾನಗರ ಪಾಲಿಕೆ ಪಣ ತೊಟ್ಟಿದೆ. ಪಾಲಿಕೆ ಸಿಬ್ಬಂದಿಗಳು ಮನೆ ಬಾಗಿಲಿಗೆ ತೆರಳಿ ಕರಪತ್ರ ನೀಡಿ ಓಟಿಂಗ್ ಮಾಡಿಸುತ್ತಿದ್ದಾರೆ.

ನಾಗರಿಕರ ಪ್ರತಿಕ್ರಿಯೆ ವಿಭಾಗದಲ್ಲಿ ಕಳೆದ ಬಾರಿ ಮೈಸೂರು ಹಿಂದೆ ಬಿದ್ದಿತ್ತು, ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದ ಇಂದೋರ್ ನಗರವು ಈ ವಿಭಾಗದಲ್ಲಿ 1,416 ಅಂಕಗಳನ್ನು ಪಡೆದಿತ್ತು. ಇನ್ನು ಮೈಸೂರು ಈ ಹಿಂದೆ ಕೇವಲ 1,181 ಅಂಕಗಳಷ್ಟೇ ಪಡೆದಿತ್ತು. ಸ್ವಚ್ಛತಾ ಆ್ಯಪ್ ‌ಬಳಕೆಯಲ್ಲಿ ಇಂದೋರ್‌ 332 ಅಂಕಗಳಿಸಿದ್ದು, ಮೈಸೂರು ಕೇವಲ 100 ಅಂಕಗಳನ್ನಷ್ಟೇ ಗಳಿಸಿತ್ತು. ಈ ಕಾರಣಕ್ಕೆ ಮೈಸೂರು ಸ್ವಚ್ಛ ನಗರಿ ಪಟ್ಟಿಯಲ್ಲಿ ಈ ಬಾರಿಯಾದರೂ ಮೊದಲ ಸ್ಥಾನ ಪಡೆಯಲು ಸಾರ್ವಜನಿಕರ ಸಹಕಾರ ಕೇಳಲು ಪಾಲಿಕೆ ಮುಂದಾಗಿದೆ.

ಇದನ್ನೂ ಓದಿ:ಕ್ರೀಡಾಂಗಣದ ಕನಸು ಕಂಡಿದ್ದ ಜನರಿಗೆ ಕಸ ವಿಲೇವಾರಿ ಘಟಕ ಶಾಕ್.. ಮೈಸೂರು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ