ಆನ್​ಲೈನ್​ ಪೂಜೆ: ಆಸ್ಟ್ರೇಲಿಯಾದಲ್ಲಿರುವ ಹೊಸ ಮನೆಗೆ ಮೈಸೂರಿನಿಂದ ಪೂಜೆ

| Updated By: sandhya thejappa

Updated on: Jun 17, 2021 | 10:16 AM

ಗೃಹಪ್ರವೇಶ ನಡೆದಿದ್ದು ದೂರದ ಆಸ್ಟ್ರೇಲಿಯಾದಲ್ಲಿ. ಮೂಲತಃ ಬೆಂಗಳೂರಿನ ದೀಪ್ತಿ ಎಂಬುವವರ ಮನೆಯಲ್ಲಿ. ದೀಪ್ತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಕೆಲಸದ ನಿಮಿತ್ತ ತೆರಳಿದ್ದರು. ಈಗ ಅಲ್ಲೇ ಒಂದು ಮನೆಯನ್ನು ಖರೀದಿ ಮಾಡಿದ್ದಾರೆ.

ಆನ್​ಲೈನ್​ ಪೂಜೆ: ಆಸ್ಟ್ರೇಲಿಯಾದಲ್ಲಿರುವ ಹೊಸ ಮನೆಗೆ ಮೈಸೂರಿನಿಂದ ಪೂಜೆ
ಆನ್​ಲೈನ್​ ಮೂಲಕ ಪೂಜೆ
Follow us on

ಮೈಸೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲವೂ ಆನ್​ಲೈನ್​ ಮುಖಾಂತರವೇ ಆಗುತ್ತಿದೆ. ಶಿಕ್ಷಣ, ಕೆಲಸ ಆಯ್ತು. ಇದೀಗ ಶುಭ ಕಾರ್ಯಗಳ ಸರದಿ. ವಿದೇಶದ ಗೃಹಪ್ರವೇಶವನ್ನು ಮೈಸೂರಿನಲ್ಲೇ ಕುಳಿತು ಧಾರ್ಮಿಕವಾಗಿ ನೆರವೇರಿಸಿದ್ದಾರೆ. ಮೈಸೂರಿನ ಡಾ.ಭ್ರಮರಾಂಭ ಮಹೇಶ್ವರಿಯವರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ದೇಶದ ಮೊದಲ ಮಹಿಳಾ ಪುರೋಹಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಶ್ರೀರಾಂಪುರದ ತಮ್ಮ ಮನೆಯಲ್ಲೇ ಕುಳಿತು ಆಸ್ಟ್ರೇಲಿಯಾದಲ್ಲಿ ಇರುವ ನೂತನ ಮನೆಯ ಗೃಹಪ್ರವೇಶವನ್ನು ಧಾರ್ಮಿಕವಾಗಿ ಮಾಡಿಕೊಟ್ಟಿದ್ದಾರೆ.

ಗೃಹಪ್ರವೇಶ ನಡೆದಿದ್ದು ದೂರದ ಆಸ್ಟ್ರೇಲಿಯಾದಲ್ಲಿ. ಮೂಲತಃ ಬೆಂಗಳೂರಿನ ದೀಪ್ತಿ ಎಂಬುವವರ ಮನೆಯಲ್ಲಿ. ದೀಪ್ತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಕೆಲಸದ ನಿಮಿತ್ತ ತೆರಳಿದ್ದರು. ಈಗ ಅಲ್ಲೇ ಒಂದು ಮನೆಯನ್ನು ಖರೀದಿ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶವನ್ನು ಧಾರ್ಮಿಕವಾಗಿ ಸಂಪ್ರದಾಯಬದ್ಧವಾಗಿ ಮಾಡಬೇಕು ಅನ್ನೋದು ದೀಪ್ತಿ ಅವರ ಆಸೆ. ಆದರೆ ಕೊರೊನಾದ ಈ ವೇಳೆಯಲ್ಲಿ ಅದು ಅಸಾಧ್ಯವಾಗಿತ್ತು. ಹೀಗಾಗಿ ಆನ್​ಲೈನ್​ ಮೂಲಕವೇ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಮೂರು ದಿನದ ಮೊದಲೇ ದೀಪ್ತಿ ವಿಡಿಯೋ ಕಾಲ್ ಮೂಲಕ ಹೊಸ ಮನೆಯನ್ನು ಭ್ರಮರಾಂಭ ಮಹೇಶ್ವರಿ ಅವರಿಗೆ ತೋರಿಸಿದ್ದಾರೆ. ಅದರಂತೆ ಮನೆಯ ಯಾವ ಜಾಗದಲ್ಲಿ ಪೂಜೆ ಮಾಡಬೇಕು ಎನ್ನುವುದು ನಿರ್ಧಾರವಾಗಿದೆ. ಕೊನೆಗೆ ಪೂಜೆಯ ದಿನ ಗಣ ಹೋಮ ಬಲಿ ಪೂಜೆ ಸೇರಿದಂತೆ ಗೃಹ ಪ್ರವೇಶದ ಎಲ್ಲಾ ಪೂಜಾ ಕೈಂಕರ್ಯಗಳನ್ನು ಮಂತ್ರದೊಂದಿಗೆ ಮಾಡಿಕೊಡಲಾಗಿದೆ.

ಮೈಸೂರಿನ ಡಾ.ಭ್ರಮರಾಂಭ ಮಹೇಶ್ವರಿಯವರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ

ಇದನ್ನೂ ಓದಿ

ಬಾಯ್ತುಂಬ ನಗುವುದರ ಮೂಲಕ ಆರೋಗ್ಯವನ್ನೂ ಸುಧಾರಿಸಿಕೊಳ್ಳಿ; ಉತ್ತಮ ಸ್ನೇಹವನ್ನೂ ಕಾಪಾಡಿಕೊಳ್ಳಿ

ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?

(Mysore priest performs Online House warming which is built in Australia though online Video call)