ಆರ್ಮಿಯಲ್ಲಿ ಡಾಕ್ಟರ್ ಅಂತಾ ಹಾವೇರಿ ಯುವಕನಿಗೆ ಟೋಪಿ ; ಕಾರು ಇಲ್ಲ, ದುಡ್ಡು ಇಲ್ಲ
ಕಳೆದ ಕೆಲವು ದಿನಗಳ ಹಿಂದೆ ಒಎಲ್ಎಕ್ಸ್ ಆ್ಯಪ್ನ ಜಾಹೀರಾತಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ಮಾರಾಟಕ್ಕೆ ಇದೆ ಎಂದು ಶಿವಪುರ ಗ್ರಾಮದ ಯುವಕ ಚೇತನ ಎಂಬಾತ ಗಮನಿಸಿದ್ದಾನೆ. ಜಾಹೀರಾತಿನಲ್ಲಿದ್ದ ನಂಬರ್ ಪಡೆದುಕೊಂಡು ಕಾರು ಬೇಕಿದೆ ಎಂದು ಜಾಹೀರಾತಿನಲ್ಲಿದ್ದ ನಂಬರ್ಗೆ ಕರೆ ಮಾಡಿದ್ದಾನೆ.
ಹಾವೇರಿ: ಪ್ರತಿಯೊಬ್ಬರಿಗೂ ಕಾರು ಖರೀದಿಸಬೇಕು. ಕಾರಿನಲ್ಲಿ ಜಾಮ್ ಜೂಮ್ ಅಂತ ಓಡಾಡಬೇಕು ಎಂಬ ಕನಸುಗಳಿರುತ್ತವೆ. ಕೆಲವರು ಹೊಸ ಕಾರು ಖರೀದಿಸುವ ಕನಸು ಕಂಡಿದ್ದರೆ, ಕೆಲವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಇರುವುದರಲ್ಲೇ ಖುಷಿಪಟ್ಟರೆ ಸಾಕು ಅಂತಿರುತ್ತಾರೆ. ಹೀಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಕಾರಣ ಕಾರು ಖರೀದಿಸುವ ಆಸೆ ಹೊಂದಿದ್ದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿವಪುರ ಗ್ರಾಮದ ಯುವಕನೊಬ್ಬನಿಗೆ ಆರ್ಮಿ ಡಾಕ್ಟರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಹಣ ಹಾಕಿಸಿಕೊಂಡು ಹಣವೂ ಇಲ್ಲದೆ, ಕಾರು ಕೊಡದೆ ಮೋಸ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಒಎಲ್ಎಕ್ಸ್ ಆ್ಯಪ್ನ ಜಾಹೀರಾತಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ಮಾರಾಟಕ್ಕೆ ಇದೆ ಎಂದು ಶಿವಪುರ ಗ್ರಾಮದ ಯುವಕ ಚೇತನ ಎಂಬಾತ ಗಮನಿಸಿದ್ದಾನೆ. ಜಾಹೀರಾತಿನಲ್ಲಿದ್ದ ನಂಬರ್ ಪಡೆದುಕೊಂಡು ಕಾರು ಬೇಕಿದೆ ಎಂದು ಜಾಹೀರಾತಿನಲ್ಲಿದ್ದ ನಂಬರ್ಗೆ ಕರೆ ಮಾಡಿದ್ದಾನೆ. ಆಗ ತಿಮ್ಮನಗೌಡ ಎಂಬ ಹೆಸರಿನವನು ತಾನು ಆರ್ಮಿಯಲ್ಲಿ ಡಾಕ್ಟರ್ ಆಗಿದ್ದಾನೆ. ಜಮ್ಮು ಕಾಶ್ಮೀರ ಆರ್ಮಿ ಕ್ಯಾಂಪ್ಗೆ ವರ್ಗಾವಣೆ ಆಗಿದೆ. ಹೀಗಾಗಿ ಕಾರು ಮಾರಾಟ ಮಾಡುತ್ತಿದ್ದೇನೆ ಎಂದು ಬಣ್ಣ ಬಣ್ಣದ ಮಾತುಗಳನ್ನು ಆಡಿದ್ದಾನೆ. ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ಮೇಲೆ ಯುವಕ ಚೇತನಗೆ ಭರವಸೆ ಮೂಡಿದೆ. ಕೊನೆಗೆ ಫೋನ್ನಲ್ಲಿಯೇ ಒಂದು ಲಕ್ಷದ ಹತ್ತು ಸಾವಿರ ರುಪಾಯಿಗೆ ಕಾರಿನ ವ್ಯವಹಾರ ಮುಗಿದಿದೆ.
ಎಪ್ಪತ್ತು ಸಾವಿರಕ್ಕೂ ಅಧಿಕ ಹಣ ಪಡೆದು ಮೋಸ ಸ್ವಿಫ್ಟ್ ಡಿಸೈರ್ ಕಾರಿನ ವ್ಯವಹಾರ ಒಂದು ಲಕ್ಷ ಹತ್ತು ಸಾವಿರ ರುಪಾಯಿಗೆ ಮುಗಿದಿದೆ. ಕಡಿಮೆ ಬೆಲೆಗೆ ಕಾರು ಸಿಕ್ಕಿತು ಎಂಬ ಖುಷಿಯಲ್ಲಿದ್ದ ಚೇತನ. ಆದರೆ ಆರ್ಮಿ ಡಾಕ್ಟರ್ ಎಂದು ಪರಿಚಯಿಸಿಕೊಂಡ ತಿಮ್ಮನಗೌಡ ಕಾರನ್ನು ಡಿಲಿವರಿ ಮಾಡಲು ಸೆಕ್ಯೂರಿಟಿ ಚಾರ್ಜ್, ಜಿಪಿಎಸ್ ಚಾರ್ಜ್, ಡಾಕ್ಯುಮೆಂಟ್ ಚಾರ್ಜ್, ಎನ್ಓಸಿ ಚಾರ್ಜ್ ಅದು ಇದು ಎಂದು ಬರೋಬ್ಬರಿ 71.798 ರುಪಾಯಿಗಳನ್ನು ಫೋನ್ ಪೇ ನಂಬರ್ ಮೂಲಕ ಚೇತನ ಕಡೆಯಿಂದ ಹಣ ಹಾಕಿಸಿಕೊಂಡಿದ್ದಾನೆ. ನಂತರ ಕಾರು ಇಲ್ಲದೆ, ಹಣವನ್ನೂ ಮರಳಿಸದೆ ಯಾಮಾರಿಸಿದ್ದಾನಂತೆ. ಕಾರಿಗಾಗಿ ಹಣ ಹಾಕಿ ಕಂಗಾಲಾದ ಚೇತನ ತಾನು ಮೋಸ ಹೋಗಿದ್ದೇನೆ ಅಂತ ಅರಿತುಕೊಂಡು ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಿಮ್ಮನಗೌಡ ವಿರುದ್ಧ ದೂರು ನೀಡಿದ್ದಾನೆ.
ಜನರು ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಕಡಿಮೆ ಬೆಲೆಗೆ ಏನಾದರೂ ಸಿಗುತ್ತದೆ ಎಂದು ಯಾರಿಗೂ ಹಣವನ್ನು ಹಾಕಬಾರದು. ಯಾವ್ಯಾವುದೋ ನಂಬರ್, ಯಾವ್ಯಾವುದೋ ಅಕೌಂಟ್ ನಂಬರ್ ಕೊಟ್ಟು ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಹಣ ಹಾಕಿಸಿಕೊಳ್ಳುತ್ತಾರೆ. ನಂತರ ಯಾಮಾರಿಸುತ್ತಾರೆ. ಜನರು ಇಂತಹವರ ಬಗ್ಗೆ ಜಾಗರೂಕತೆಯಿಂದ ಇರಬೇಕು. ಬಣ್ಣದ ಮಾತಿಗೆ ಮರುಳಾಗಿ ಮೋಸ ಹೋಗಬಾರದು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಿಇಎನ್ ಪೊಲೀಸ್ ಠಾಣೆಯ ಸಿಪಿಐ ಸಂತೋಷ ಪವಾರ ತಿಳಿಸಿದರು.
ಇದನ್ನೂ ಓದಿ
TRAI: 4ಜಿ ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೆ ಮೊದಲ ಸ್ಥಾನ, ಕೊನೆಯಲ್ಲಿ ಏರ್‌ಟೆಲ್! ಏನಿದರ ಲೆಕ್ಕಾಚಾರ?
ಅವಧಿಗೂ ಮುನ್ನವೇ ಹರಡಲಿದೆಯಾ ಕೊವಿಡ್ 3ನೇ ಅಲೆ? ಪ್ರತಿ ದಿನ ಶೇ.5ರಷ್ಟು ಮಕ್ಕಳಲ್ಲಿ ಸೋಂಕು
(A mam cheated the young man by getting the car money in haveri)