ಬಾಯ್ತುಂಬ ನಗುವುದರ ಮೂಲಕ ಆರೋಗ್ಯವನ್ನೂ ಸುಧಾರಿಸಿಕೊಳ್ಳಿ; ಉತ್ತಮ ಸ್ನೇಹವನ್ನೂ ಕಾಪಾಡಿಕೊಳ್ಳಿ

Health Benefits of Laughing: ನಗು, ಆರೋಗ್ಯದ ಮೇಲೂ ಕೂಡಾ ಪರಿಣಾಮ ಬಿರುತ್ತದೆ. ನಗುತ್ತಿರುವುದು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಹಾಗೂ ಶ್ವಾಸಕೋಶ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬಾಯ್ತುಂಬ ನಗುವುದರ ಮೂಲಕ ಆರೋಗ್ಯವನ್ನೂ ಸುಧಾರಿಸಿಕೊಳ್ಳಿ; ಉತ್ತಮ ಸ್ನೇಹವನ್ನೂ ಕಾಪಾಡಿಕೊಳ್ಳಿ
ನಗು
Follow us
TV9 Web
| Updated By: shruti hegde

Updated on: Jun 17, 2021 | 9:53 AM

ನಗುವುದು ಒಂದು ಕಲೆ. ಪ್ರತಿಯೊಬ್ಬರೂ ಕೂಡಾ ನಗುವಿನ ಮೂಲಕ ತಮ್ಮ ಸಂತೋಷವನ್ನು ಹೊರಹಾಕುತ್ತಾರೆ. ಅದೆಷ್ಟೋ ಮನಸ್ಸುಗಳನ್ನು ಗೆಲ್ಲಲು ನಗುವೇ ಕಾರಣವಾಗಿದೆ. ಪ್ರತಿಯೊಂದು ಸ್ನೇಹವೂ ಕೂಡಾ ತುಟಿಯಂಚಿಗೆ ಮೂಡುವ ಆ ನಗುವಿನಿಂದಲೇ ಆರಂಭಗೊಂಡಿದೆ. ಪ್ರೀತಿ, ಸ್ನೇಹದ ಜತೆಗೆ ಆರೋಗ್ಯವೂ ಕೂಡಾ ಸುಧಾರಿಸಿಕೊಳ್ಳಲು ನಗು  ಸಹಾಯಕವಾಗಿದೆ. ಮನಸ್ಸು ಬಿಚ್ಚಿ ಬಾಯ್ತುಂಬ ನಗುವುದರ ಮೂಲಕ ಪ್ರಯೋಜನಗಳೇ ಇದೆ ಹೊರತು ಯಾವುದೇ ಹಾನಿ ಇಲ್ಲ. ಹಾಗಾಗಿ ಮುಖ ಗಂಟು ಹಾಕಿಕೊಳ್ಳದೇ ಒಳ್ಳೆಯ ನಗುವಿನ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಒಬ್ಬೊಬ್ಬರು ಒಂದೊಂದು ರೀತಿಯ ನಗುವಿನ ಶೈಲಿಯನ್ನು ಹೊಂದಿರುತ್ತಾರೆ. ಆ ಮೂಲಕ ತಮ್ಮ ಸಂತೋಷವನ್ನು ಹೊರಹಾಕುತ್ತಾರೆ. ಕೆಲವರು ನಗುವಿನ ಮೂಲಕ ಧ್ವನಿಯನ್ನೂ ಹೊರಡಿಸುತ್ತಾರೆ. ಇನ್ನು ಕೆಲವರು ಧ್ವನಿಯಿಲ್ಲದೇ ಮುಖದ ಭಾವನೆಯೊಂದಿಗೆ ತೋರ್ಪಡಿಸುತ್ತಾರೆ. ಹೀಗಿರುವಾಗ ನಗುವುದರಿಂದ ಪ್ರಯೋಜನಗಳೇನು? ಎಂಬುದರ ಮಾಹಿತಿ ಇಲ್ಲಿದೆ.

ನಮ್ಮ ದೇಹದಲ್ಲಿ ಸುಮಾರು ಶೇ. 70ರಷ್ಟು ರೋಗಗಳು ಒತ್ತಡದಿಂದ ಉಂಟಾಗುತ್ತದೆ. ಮಧುಮೇಹ, ರಕ್ತದೊತ್ತಡ, ಖಿನ್ನತೆ, ನಿದ್ರಾಹೀನತೆ ಮತ್ತು ಮೈಗ್ರೇನ್​ನಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಿರುವಾಗ ಮನಸ್ಸು ಬಿಚ್ಚಿ ನಗುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಮುಖ ಗಂಟು ಮಾಡಿಕೊಂಡು ಒಬ್ಬರೊಂದಿಗೂ ಮಾತನಾಡದೇ ಉಳಿಯುವುದು ಇನ್ನಷ್ಟು ದೇಹಕ್ಕೆ ಒತ್ತಡವನ್ನು ನೀಡುವುದರ ಮೂಲಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಯಾವಾಗಲೂ ನಗುತ್ತಿರುವವರಿಗೆ ಅಧಿಕ ಆಯುಷ್ಯ ಲಭಿಸುತ್ತದೆ ಎಂಬುದನ್ನು ಕೇಳಿಯೇ ಇರುತ್ತೀರಿ. ಒಬ್ಬಂಟಿಯಾಗಿ ಕುಳಿತಿರುವ ವ್ಯಕ್ತಿಗೆ ಹಾಗೂ ಎಲ್ಲರೊಂದಿಗೆ ಮಾತನಾಡುತ್ತಾ ಮೋಜು ಮಾಡುತ್ತಿರುವ ವ್ಯಕ್ತಿಗೆ ತುಂಬಾ ವ್ಯತ್ಯಾಸವಿದೆ. ಜತೆಗೆ ಆರೋಗ್ಯದ ಮೇಲೂ ಕೂಡಾ ಪರಿಣಾಮ ಬಿರುತ್ತದೆ. ನಗುತ್ತಿರುವುದು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಹಾಗೂ ಶ್ವಾಸಕೋಶ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ನಗುವು ಇತರರನ್ನು ಆಕರ್ಷಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು ಯಾವಾಗಲೂ ಚೈತನ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ. ಏಕಾಗ್ರತೆಯನ್ನು ಸುಧಾರಿಸಿಕೊಳ್ಳಲು ನಗು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ನಗುವಿನ ಮೂಲಕ ಯೋಗವನ್ನು ಪ್ರಾರಂಭಿಸುತ್ತಾರೆ. ಇದು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಒಳ್ಳೆಯ ಚಿಕಿತ್ಸೆಯಾಗಿದೆ.

ದಿನಕ್ಕೆ ಕನಿಷ್ಟ 10-20 ನಿಮಿಷಗಳ ಕಾಲ ನಗುವಿಗಾಗಿಯೇ ನಿಮ್ಮ ಸಮಯವನ್ನು ಮೀಸಲಿಡಿ. ಮೆದುಳನ್ನು ಸಕ್ರಿಯವಾಗಿರಿಸಲು ನಗು ಸಹಾಯಕ. ಜತೆಗೆ ಮಾನಸಿಕ ಒತ್ತಡದಂತಹ ಸಮಸ್ಯೆಯಿಂದ ದೂರವಿರಬಹುದು. ಯಾರನ್ನೂ ಕೂಡಾ ದ್ವೇಷದಿಂದ ಗೆಲ್ಲದೇ ನಗುವಿನ ಮೂಲಕ ಗೆಲ್ಲಲು ಪ್ರಯತ್ನಿಸಿ.

ಇದನ್ನೂ ಓದಿ:

Health Tips: ನೀವು ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?