ಮೈಸೂರು: ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮೆಗಾ ಟ್ವಿಸ್ಟ್ ಕಂಡಿದೆ. ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದು, ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ ಮಹಾನಗರ ಪಾಲಿಕೆ ಮೇಯರ್ ಗಿರಿ ಒಲಿದಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಸದಸ್ಯರು ಜೆಡಿಎಸ್ಗೆ ಬೆಂಬಲ ನೀಡಿದ್ದಾರೆ.
ಮೈಸೂರಿನ 23ನೇ ಮೇಯರ್ಆಗಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಮೇಯರ್ ಗಿರಿ ತಪ್ಪಿಸಲು ಕಾಂಗ್ರೆಸ್ ಉಪಾಯ ಮಾಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ತಮಗೆ ಲಾಭ ಇಲ್ಲದಿದ್ದರೂ ಬಿಜೆಪಿಗೆ ಮೇಯರ್ ಗಿರಿ ಧಕ್ಕದಂತೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡಗೆ 43 ಮತಗಳು ಲಭಿಸಿವೆ. ಮೈಸೂರಿನ 23ನೇ ಉಪಮೇಯರ್ಆಗಿ ಕಾಂಗ್ರೆಸ್‌ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಗೆ 26 ಮತ ಲಭಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಂತಕುಮಾರಿಗೆ ಯಾವುದೇ ಮತ ಲಭ್ಯವಾಗಿಲ್ಲ.
ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ: BJP, JDS ಮೈತ್ರಿ ಬಹುತೇಕ ಖಚಿತ
Published On - 12:59 pm, Wed, 24 February 21