ಅಂಬಾನಿ ವಿರುದ್ಧ ರೈತರ ರಣಕಹಳೆ: ಮೈಸೂರಿನಲ್ಲಿ ಜಿಯೋ ಸಿಮ್​ಗೆ ಉಗಿದು..​ ವಾಪಸ್ ಮಾಡಿದ ಕೃಷಿಕರು

ಅರಮನೆ ನಗರಿಯಲ್ಲಿ ಸಹ ಅಂಬಾನಿ, ಅದಾನಿ ವಿರುದ್ಧ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಬಾನಿಯನ್ನು ವಿರೋಧಿಸಿ ಇಂದು ರೈತರು ಜಿಯೋ ಕಂಪನಿಯ ಸಿಮ್ ಕಾರ್ಡ್​​ ವಾಪಸ್​ ಮಾಡಿದರು.

ಅಂಬಾನಿ ವಿರುದ್ಧ ರೈತರ ರಣಕಹಳೆ: ಮೈಸೂರಿನಲ್ಲಿ ಜಿಯೋ ಸಿಮ್​ಗೆ ಉಗಿದು..​ ವಾಪಸ್ ಮಾಡಿದ ಕೃಷಿಕರು
ಜಿಯೋ ಸಿಮ್​ಗೆ ಉಗಿದು..​ ವಾಪಸ್ ಮಾಡಿದ ಕೃಷಿಕರು
Follow us
KUSHAL V
|

Updated on:Jan 09, 2021 | 8:27 PM

ಮೈಸೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ 3 ಕಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್​ ರೈತರ ದೆಹಲಿ ಚಲೋ ಚಳುವಳಿಯ ಕಾವು ಆರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ, ಮುಕೇಶ್​ ಅಂಬಾನಿ ಪಂಜಾಬ್​ ಮತ್ತು ಹರಿಯಾಣ ರೈತರ ಕೆಂಗಣ್ಣಿಗೆ ಗುರಿಯಾಗಿದ್ದು ಉದ್ಯಮಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆಯ ಮೊಬೈಲ್​ ಟವರ್​ಗಳನ್ನು ರೈತರು ಹಾನಿ ಮಾಡಿದ್ದ ಪ್ರಸಂಗಗಳು ವರದಿಯಾಗಿತ್ತು.

ಇದೀಗ, ಅರಮನೆ ನಗರಿಯಲ್ಲಿ ಸಹ ಅಂಬಾನಿ, ಅದಾನಿ ವಿರುದ್ಧ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಬಾನಿಯನ್ನು ವಿರೋಧಿಸಿ ಇಂದು ರೈತರು ಜಿಯೋ ಕಂಪನಿಯ ಸಿಮ್ ಕಾರ್ಡ್​​ ವಾಪಸ್​ ಮಾಡಿದರು. ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಜಿಯೋ ಮಳಿಗೆ ಮುಂದೆ ಧರಣಿ ಸಹ ನಡೆಸಿದರು. ಈ ವೇಳೆ, ಜಿಯೋ ಕಂಪನಿ ಸಿಮ್​ಗೆ ಉಗಿದು ಪ್ರತಿಭಟಿಸಿದ ರೈತರು ಬಳಿಕ ಅದನ್ನು ವಾಪಸ್​ ಮಾಡಿದರು.

ಅವೈಜ್ಞಾನಿಕ ಕಾಯ್ದೆ ಮೂಲಕ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಿರತ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ರಿಲಾಯನ್ಸ್​ ಕಂಪನಿಗೆ ಲಾಭಮಾಡಿಕೊಡಲು ಇದು ಕೇಂದ್ರದ ಯತ್ನ. ಹಾಗಾಗಿ, ರಿಲಾಯನ್ಸ್​ ಕಂಪನಿಯನ್ನು ಬಾಯ್​ಕಾಟ್ ಮಾಡುತ್ತಿದ್ದೇವೆ. ಜಿಯೋ ಸಿಮ್​ ಹಿಂದಿರುಗಿಸಿ ಬೇರೆ ಸಿಮ್​ ಬಳಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್​ ಹೇಳಿದರು.

ಭತ್ತ ಬೆಳೆದಿದ್ದರೂ ಖರೀದಿ ಮಾಡದ ಸರ್ಕಾರ, ದಲ್ಲಾಳಿಗಳು: ಹತಾಶೆಯಿಂದ ರೈತ ಆತ್ಮಹತ್ಯೆಗೆ ಶರಣು

Published On - 5:44 pm, Sat, 9 January 21

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು