ಮೈಸೂರು: ಕಳೆದ ಯುವ ದಸರಾ ವೇದಿಕೆಯಲ್ಲಿ ಕನ್ನಡ ರ‍್ಯಾಪರ್ ಗಾಯಕ ಚಂದನ್‌ಶೆಟ್ಟಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿ ಭಾರಿ ಸುದ್ದಿಯಾಗಿದ್ದರು. ಆ ಘಟನೆಗೆ ಭಾರಿ ವಿರೋಧಗಳು ಕೂಡ ಕೇಳಿ ಬಂದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿ ಚಂದನ್ ಶೆಟ್ಟಿಗೆ ವಾರ್ನ್ ಮಾಡಿದ್ದಾರೆ.
ಎಲ್ಲಾ ಕಲಾವಿದರಿಗೂ ಇದು ಅನ್ವಯ:
ಜನರ ಮುಂದೆ ಅಟ್ರಾಕ್ಟ್ ಮಾಡಲು ಈ ರೀತಿ ನಡೆದುಕೊಂಡೆ ಬೇರೆ ಉದ್ದೇಶ ಇಲ್ಲ ಎಂದು ಚಂದನ್ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಬಗ್ಗೆ ವಿವರಣೆ ಕೊಟ್ಟ ಚಂದನ್ ಶೆಟ್ಟಿಗೆ ಮೈಸೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ವಾರ್ನಿಂಗ್ ಮಾಡಿದ್ದಾರೆ. ಈ ರೀತಿಯ ವರ್ತನೆ ಮರುಕಳಿಸಿದರೆ ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ. ಚಂದನ್ ಶೆಟ್ಟಿ ಮಾತ್ರವಲ್ಲ ಸರ್ಕಾರಿ ವೇದಿಕೆಯನ್ನು ಖಾಸಗಿ ಕ್ಷಣಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಇದು ಅನ್ವಯ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮೈಸೂರು ಎಸ್ಪಿ ತಿಳಿಸಿದ್ದಾರೆ.
Published On - 1:04 pm, Wed, 6 November 19