ಚಲುರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಯಾವ ಪಕ್ಷದಲ್ಲಿದ್ರು? ಸಚಿವ ರವಿ ವಾಗ್ದಾಳಿ
ರಾಯಚೂರು: ಕಾಂಗ್ರೆಸಿನವರದು ಗರತಿ ರಾಜಕಾರಣ ಎಂದು ಸಚಿವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಆರು ಜನ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆದಿತ್ತು. ಸಿ. ಭೈರೆಗೌಡರ ಸಿ.ಡಿಯನ್ನ ವೀರಪ್ಪಮೊಯಿಲಿ ಮೂಲಕ ಬಹಿರಂಗಪಡಿಸಲಾಗಿತ್ತು. 1999-2004ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಜೆಡಿಯು ಶಾಸಕರನ್ನ ತೆಕ್ಕೆಗೆ ಹಾಕೊಂಡಿತ್ತು. ಇದು ಯಾವ ಸೀಮೆ ರಾಜಕಾರಣ. ಕಾಂಗ್ರೆಸಿನವರದೇನು ಗರತಿ ರಾಜಕಾರಣನಾ? ಎಂದು ಸಚಿವ ರವಿ ಪ್ರಶ್ನಿಸಿದರು. ಚಲುರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್, ಶ್ರೀನಿವಾಸ ಯಾವ ಪಕ್ಷದಲ್ಲಿದ್ರು. […]
ರಾಯಚೂರು: ಕಾಂಗ್ರೆಸಿನವರದು ಗರತಿ ರಾಜಕಾರಣ ಎಂದು ಸಚಿವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಆರು ಜನ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆದಿತ್ತು. ಸಿ. ಭೈರೆಗೌಡರ ಸಿ.ಡಿಯನ್ನ ವೀರಪ್ಪಮೊಯಿಲಿ ಮೂಲಕ ಬಹಿರಂಗಪಡಿಸಲಾಗಿತ್ತು. 1999-2004ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಜೆಡಿಯು ಶಾಸಕರನ್ನ ತೆಕ್ಕೆಗೆ ಹಾಕೊಂಡಿತ್ತು. ಇದು ಯಾವ ಸೀಮೆ ರಾಜಕಾರಣ. ಕಾಂಗ್ರೆಸಿನವರದೇನು ಗರತಿ ರಾಜಕಾರಣನಾ? ಎಂದು ಸಚಿವ ರವಿ ಪ್ರಶ್ನಿಸಿದರು.
ಚಲುರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್, ಶ್ರೀನಿವಾಸ ಯಾವ ಪಕ್ಷದಲ್ಲಿದ್ರು. ಇವರನ್ನೆಲ್ಲ ಕಾಂಗ್ರೆಸ್ಗೆ ಸೇರಸಿಕೊಳ್ಳಲಿಲ್ವಾ? ಈವಾಗ ಕಾಂಗ್ರೆಸ್ ಪಕ್ಷ ಬಿಜೆಪಿ ಬಗ್ಗೆ ಮಾತಾಡ್ತಿದೆ. ಭೂತದ ಬಾಯಲ್ಲಿ ಭಗವದ್ಗಿತೆ ಬಂದಂಗಾಯ್ತು. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಅವರು ಕಿಡಿಕಾರಿದರು.