ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
‘ನನಗೆ ಏನಾದರೂ ಕೊರೊನಾ ಬಂದಿದೆಯಾ’ ಎಂದು ಗಿಲ್ಲಿ ನಟ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 21ರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಸಂಚಿಕೆಯ ಪ್ರೋಮೋ ಇಲ್ಲಿದೆ. ಕಲರ್ಸ್ ಕನ್ನಡ ಚಾನೆಲ್ ಹಾಗೂ ಜಿಯೋ ಹಾಟ್ ಸ್ಟಾರ್ ಒಟಿಟಿಯಲ್ಲಿ ಪೂರ್ತಿ ಸಂಚಿಕೆಯನ್ನು ನೋಡಬಹುದು.
ಕೊರನಾ ವೈರಸ್ ಹಾವಳಿ ಹೆಚ್ಚಿದಾಗ ಜನಜೀವನ ಅಸ್ತವ್ಯಸ್ತ ಆಗಿತ್ತು. ಬಿಗ್ ಬಾಸ್ ಶೋ ಕೂಡ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಈಗ ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 21ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ತಮ್ಮ ಎದುರು ಇರುವ ಆಹಾರವನು ತಿಂದು, ಅದೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಚಟುವಟಿಕೆಯಲ್ಲಿ ಗಿಲ್ಲಿ ನಟ (Gilli Nata) ಹಿಂದೆ ಬಿದ್ದಿದ್ದಾರೆ. ರುಚಿ ಮತ್ತು ವಾಸನೆ ಗ್ರಹಿಸಲು ಗಿಲ್ಲಿ ಸೋತಿದ್ದಾರೆ. ‘ನನಗೆ ಏನಾದರೂ ಕೊರೊನಾ ಬಂದಿದೆಯಾ’ ಎಂದು ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಹೇಳಿದ ಈ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ. ಈ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಕಲರ್ಸ್ ಕನ್ನಡ’ ಚಾನೆಲ್ ಮತ್ತು ‘ಜಿಯೋ ಹಾಟ್ ಸ್ಟಾರ್’ ಒಟಿಟಿಯಲ್ಲಿ ಪೂರ್ತಿ ಸಂಚಿಕೆ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

