ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್! ಹುಲಿ ಸೆರೆಗೆ ಈಗಲ್ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ
ಚಾಮರಾಜನಗರದಲ್ಲಿ ಇತ್ತೀಚೆಗೆ ಹುಲಿಗಳ ಹಾವಳಿ ಹೆಚ್ಚಿರುವ ಕಾರಣ, ಅರಣ್ಯ ಇಲಾಖೆಯು ಆಪರೇಷನ್ ಬೀಸ್ಟ್ ಹೆಸರಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಬಂಡೀಪುರ ಹುಲಿ ಮೀಸಲು ಅರಣ್ಯ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಮುಂದಾಗಿದ್ದು, ಈ ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಿಎಫ್ ಪ್ರಭಾಕರನ್ ಅವರ ಸೂಚನೆಯ ಮೇರೆಗೆ, ವಿಶೇಷವಾಗಿ ಟೈಗರ್ ಕೂಂಬಿಂಗ್‌ಗಾಗಿಯೇ ಸಿದ್ಧಪಡಿಸಲಾದ ಈಗಲ್ ಡ್ರೋನ್ ಕ್ಯಾಮೆರಾವನ್ನು ಬಳಸಲಾಗುತ್ತಿದೆ.
ಚಾಮರಾಜನಗರ, ಡಿಸೆಂಬರ್ 21: ಚಾಮರಾಜನಗರದಲ್ಲಿ ಇತ್ತೀಚೆಗೆ ಹುಲಿಗಳ ಹಾವಳಿ ಹೆಚ್ಚಿರುವ ಕಾರಣ, ಅರಣ್ಯ ಇಲಾಖೆಯು ಆಪರೇಷನ್ ಬೀಸ್ಟ್ ಹೆಸರಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಬಂಡೀಪುರ ಹುಲಿ ಮೀಸಲು ಅರಣ್ಯ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಮುಂದಾಗಿದ್ದು, ಈ ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಿಎಫ್ ಪ್ರಭಾಕರನ್ ಅವರ ಸೂಚನೆಯ ಮೇರೆಗೆ, ವಿಶೇಷವಾಗಿ ಟೈಗರ್ ಕೂಂಬಿಂಗ್‌ಗಾಗಿಯೇ ಸಿದ್ಧಪಡಿಸಲಾದ ಈಗಲ್ ಡ್ರೋನ್ ಕ್ಯಾಮೆರಾವನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತಿದೆ.
ಭೀಮನ ಬೀಡು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಚಲನವಲನವನ್ನು ಪತ್ತೆಹಚ್ಚಲು ಈ ಡ್ರೋನ್ ನೆರವಾಗುತ್ತಿದೆ. ಕಳೆದ ಎರಡು-ಮೂರು ದಿನಗಳಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಭೀಮನ ಬೀಡು ಗ್ರಾಮದ ಹೊರ ವಲಯದಲ್ಲಿನ ನೀರು ಹರಿಯುವ ಪ್ರದೇಶದಲ್ಲಿ ಹುಲಿಯ ಇರುವಿಕೆ ಈಗಾಗಲೇ ಖಚಿತವಾಗಿದೆ. ಈ ಹಿಂದೆ ಇದೇ ಡ್ರೋನ್ ಕ್ಯಾಮೆರಾದಿಂದ ಸಿಕ್ಕ ಮಾಹಿತಿ ಆಧಾರದ ಮೇಲೆ ನಾಲ್ಕು ವರ್ಷದ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

