ಶಿವಮೊಗ್ಗ: ಕೊರೊನಾ (Coronavirus) ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮೈಸೂರು – ತಾಳಗುಪ್ಪ ಪ್ಯಾಸೆಂಜರ್ ರೈಲು (Passenger Rail) ಸಂಚಾರ ಸ್ಥಗಿತಗೊಂಡಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಇದೇ ಜುಲೈ 25ರಿಂದ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಡುವ ರೈಲು, ರಾತ್ರಿ 11.30ಕ್ಕೆ ತಾಳಗುಪ್ಪ ತಲುಪುತ್ತದೆ. ಇನ್ನು ಮಾರನೇ ದಿನ ಬೆಳಿಗ್ಗೆ 6.10ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು, ಮಧ್ಯಾಹ್ನ 3.35 ಕ್ಕೆ ಮೈಸೂರು ತಲುಪುತ್ತದೆ. ರೈಲಿನಲ್ಲಿ 12 ಬೋಗಿಗಳು ಇರಲಿವೆ. ಇದರಲ್ಲಿ 10 ಸೆಕೆಂಡ್ ಕ್ಲಾಸ್ ಬೋಗಿಗಳು ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು.
16222 ಸಂಖ್ಯೆಯ ರೈಲು ಜುಲೈ 25ರಿಂದ ಆರಂಭಗೊಂಡು, ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ. ಅದೇ ದಿನ ರಾತ್ರಿ ರೈಲು 11.30 ಗಂಟೆಗೆ ತಾಳಗುಪ್ಪ ತಲುಪಲಿದೆ. ಇನ್ನು 16221 ಸಂಖ್ಯೆಯ ರೈಲು ಜುಲೈ 26ರಿಂದ ಆರಂಭಗೊಂಡು ಪ್ರತಿದಿನ ತಾಳಗುಪ್ಪಾದಿಂದ ಬೆಳಿಗ್ಗೆ 06.10 ಕ್ಕೆ ಹೊರಡುತ್ತದೆ. ಹಾಗೇ, ರೈಲು ಅದೇ ದಿನ ಮಧ್ಯಾಹ್ನ 03.35 ಕ್ಕೆ ಮೈಸೂರು ತಲುಪಲಿದೆ. ಮುಂದಿನ ಆದೇಶದವರೆಗೆ ಇದೇ ವೇಳಾಪಟ್ಟಿಯಲ್ಲಿ ರೈಲುಗಳು ಸಂಚರಿಸಲಿವೆ.
ಇದನ್ನೂ ಓದಿ: Sonia Gandhi: ನಾಳೆ ಇಡಿ ವಿಚಾರಣೆಗೆ ಸೋನಿಯಾ ಗಾಂಧಿ ಹಾಜರು; ಬೆಂಗಳೂರು ಸೇರಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಸಜ್ಜು
ರೈಲುಗಳು ಸಂಚರಿಸುವ ಸ್ಥಳಗಳು ಮತ್ತು ಸಮಯ ಹೀಗಿದೆ:
1. 16222 ಸಂಖ್ಯೆಯ ರೈಲು:
ಮೈಸೂರು – ಮಧ್ಯಾಹ್ನ 2 ಗಂಟೆಗೆ ಹೊರಡುತ್ತದೆ.
ಹಾಸನ – 4.28,
ಅರಸೀಕೆರೆ – ಸಂಜೆ 6 ಗಂಟೆ,
ಬೀರೂರು- 7 ಗಂಟೆ,
ತರೀಕೆರೆ – 7.39,
ಭದ್ರಾವತಿ – 8.03,
ಶಿವಮೊಗ್ಗ – 8.45,
ಆನಂದಪುರ – 10.14,
ಸಾಗರ- 10.44,
ತಾಳಗುಪ್ಪ- 11.30.
2. 16221 ಸಂಖ್ಯೆಯ ರೈಲು:
ತಾಳಗುಪ್ಪ – ಬೆಳಿಗ್ಗೆ 6.10,
ಸಾಗರ – 6.34,
ಆನಂದಪುರ- 7.06,
ಶವಮೊಗ್ಗ – 8.15,
ಭದ್ರಾವತಿ – 8.43,
ತರೀಕೆರೆ – 9.13,
ಬೀರೂರು – 10.03,
ಕಡೂರು – 10.15,
ಅರಸೀಕೆರೆ- 11.15,
ಹಾಸನ – 12.28,
ಮೈಸೂರು – 3.35.
ಇದನ್ನೂ ಓದಿ: Chamarajanagara News: ಹುಟ್ಟುಹಬ್ಬದ ಪ್ರಯುಕ್ತ ಬಿರಿಯಾನಿ ಊಟ: ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥ
Published On - 11:45 am, Wed, 20 July 22