ಮೈಸೂರು ವಿ.ವಿಯ ಬಿ.ಎಡ್​ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷಾ ಶುಲ್ಕ ಕಡಿತಗೊಳಿಸಿದ ಆಡಳಿತ ಮಂಡಳಿ

|

Updated on: Jan 02, 2021 | 9:51 PM

ಜನವರಿ ತಿಂಗಳಲ್ಲಿ ಬಿ.ಎಡ್​ನ ಎರಡು ಹಾಗೂ ನಾಲ್ಕನೇ ಸೆಮಿಸ್ಟರ್​ ಪರೀಕ್ಷೆ ನಡೆಯಲಿದೆ. ಈ ಪರೀಕ್ಷಾ ಶುಲ್ಕವನ್ನು ಶೇ. 50 ಕಡಿಮೆ ಮಾಡುವ ಆದೇಶ ಹೊರಡಿಸಿದೆ. ಬಿ.ಎಡ್​ ಪರೀಕ್ಷಾ ಶುಲ್ಕ 1300 ರೂ. ಶುಲ್ಕ ಇದೆ. ರಿಯಾಯಿತಿ ಸಿಕ್ಕ ನಂತರ ಇದರ ಬೆಲೆ 650 ರೂಪಾಯಿ ಆಗಲಿದೆ.

ಮೈಸೂರು ವಿ.ವಿಯ ಬಿ.ಎಡ್​ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷಾ ಶುಲ್ಕ ಕಡಿತಗೊಳಿಸಿದ ಆಡಳಿತ ಮಂಡಳಿ
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಕೊರೊನಾ ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಪಾಲಕರಿಂದ ಆಗ್ರಹ ಕೇಳಿ ಬಂದಿತ್ತು. ಈ ಮಧ್ಯೆ, ಮೈಸೂರು ವಿಶ್ವವಿದ್ಯಾಲಯ ಬಿ.ಎಡ್​ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.

ಜನವರಿ ತಿಂಗಳಲ್ಲಿ ಬಿ.ಎಡ್​ ಪದವಿಯ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್​ಗಳ​ ಪರೀಕ್ಷೆ ನಡೆಯಲಿದೆ. ಈಗ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪರೀಕ್ಷಾ ಶುಲ್ಕವನ್ನು ಶೇ. 50ರಷ್ಟು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಸದ್ಯ,  ಬಿ.ಎಡ್​ ಪರೀಕ್ಷಾ ಶುಲ್ಕ 1,300 ರೂ. ಇದ್ದು ಇದೀಗ ರಿಯಾಯಿತಿ ನಂತರ 650 ರೂಪಾಯಿಗೆ ಇಳಿದಿದೆ.

ಪ್ರಾಯೋಗಿಕ ಪರೀಕ್ಷೆ ಸೇರಿ ಒಂದು ವಿಷಯಕ್ಕಾದರೆ ಪರೀಕ್ಷಾ ಶುಲ್ಕ 770 ರೂಪಾಯಿ ಇದೆ. ರಿಯಾಯಿತಿ ನಂತರ ಈ ಶುಲ್ಕ 385 ರೂಪಾಯಿ ಆಗಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಕ್ಕೆ ಪರೀಕ್ಷಾ ಶುಲ್ಕ 440 ರೂಪಾಯಿ ಇದ್ದು, ರಿಯಾಯಿತಿ ಬಳಿಕ 220 ರೂಪಾಯಿ ಆಗಲಿದೆ. ಈ ಶುಲ್ಕ ಇಳಿಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯ ಆಗಲಿದೆ ಎಂದು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

 

CBSE ಪರೀಕ್ಷಾ ದಿನಾಂಕ ಪ್ರಕಟ: ಮೇ 4 ರಿಂದ ಪರೀಕ್ಷೆ ಆರಂಭ, ಜುಲೈ 15 ರೊಳಗೆ ಫಲಿತಾಂಶ ಪ್ರಕಟ