ಮೈಸೂರು: ವ್ಯಸನ ಮುಕ್ತ ಕೇಂದ್ರದ ಅಕೌಂಟ್​ ಹ್ಯಾಕ್​ ಮಾಡಿ 40 ಲಕ್ಷ ರೂ. ವಂಚನೆ

| Updated By: ವಿವೇಕ ಬಿರಾದಾರ

Updated on: Sep 17, 2023 | 9:48 AM

ಮಂಡ್ಯ ಮೂಲದ ವ್ಯಕ್ತಿ ವ್ಯಸನ ಮುಕ್ತನಾಗಲು ಮೈಸೂರಿನ ಬಸವಮಾರ್ಗ ಫೌಂಡೇಶನ್​​ ಬಂದು ವ್ಯಸನ ಮುಕ್ತನಾಗಿ, ಬಳಿಕ ಕೇಂದ್ರದ ಅಕೌಂಟ್​ ಹ್ಯಾಕ್​ ಮಾಡಿ 40 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.

ಮೈಸೂರು: ವ್ಯಸನ ಮುಕ್ತ ಕೇಂದ್ರದ ಅಕೌಂಟ್​ ಹ್ಯಾಕ್​ ಮಾಡಿ 40 ಲಕ್ಷ ರೂ. ವಂಚನೆ
ಸಾಂದರ್ಭಿಕ ಚಿತ್ರ
Follow us on

ಮೈಸೂರು ಸೆ.17: ನಗರದ ಬಸವಮಾರ್ಗ ಫೌಂಡೇಶನ್​​ ಬ್ಯಾಂಕ್​ ಅಕೌಂಟ್​​ ಹ್ಯಾಕ್​ ಮಾಡಿ, 40 ಲಕ್ಷ ರೂ. ವಂಚನೆ (Fraud) ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಮಂಡ್ಯ (Mandya) ಮೂಲದ ವಿಶಾಲ್ ರಾಜ್ ವಂಚನೆ ಮಾಡಿದ ಆರೋಪಿ. ಬಸವಮಾರ್ಗ ಫೌಂಡೇಶನ್ ವ್ಯಸನ ಮುಕ್ತವಾಗಿಸುವ (Addiction Free Center) ಕೇಂದ್ರವಾಗಿದೆ. ಈ ಕೇಂದ್ರಕ್ಕೆ 2022ರ ಆಗಸ್ಟ್​ನಲ್ಲಿ ವ್ಯಸನ ಮುಕ್ತನಾಗಲು ವಿಶಾಲ್ ರಾಜ್ ಬಂದಿದ್ದನು. ವ್ಯಸನ ಮುಕ್ತನಾದ ಬಳಿಕ ವಿಶಾಲ್ ರಾಜ್ ಇಲ್ಲಿಯೇ ಕೆಲಸ ಕೊಡಿ ಎಂದು ಫೌಂಡೇಶನ್​​ ಮಾಲಿಕರ ಬಳಿ ಕೇಳಿಕೊಂಡಿದ್ದನು.

ಇದೇ ವೇಳೆ ಫೌಂಡೇಶನ್​​​ನ ಅಕೌಂಟೆಂಟ್​​ ಕೆಲಸ ಬಿಟ್ಟಿದ್ದನು. ಈ ಜಾಗಕ್ಕೆ ವಿಶಾಲ್ ರಾಜ್​​ನನ್ನು ನೇಮಕ ಮಾಡಿಕೊಳ್ಳಲಾಯಿತು. ಬಳಿಕ ವಿಶಾಲ್​ ರಾಜ್​ ಹಳೆ ಅಕೌಂಟ್ ಗೋಕುಲ್ ರಾಜ್​​ನಿಂದ ನೆರವು ಪಡೆದು 2022ರ ಜೂನ್ 17 ರಿಂದ ‌ಜುಲೈ 24 ರ ವರೆಗೆ 37.90 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಕೆಲ ದಿನಗಳ ನಂತರ ಫೌಂಡೇಶನ್​ ಮಾಲಿಕರಿಗೆ ಅನುಮಾನ ಬಂದು ಅಕೌಂಟ್ ಪರಿಶೀಲಿಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಟ್ರಸ್ಟಿ ಬಸವರಾಜ್ ಹೆಬ್ಬಾಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ವಿಶಾಲ್ ರಾಜ್ ಎಸ್ಕೇಪ್‌ ಆಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್​ನಿಂದ ವಂಚನೆ; ಸಹೋದರಿಯ ಆತ್ಮಹತ್ಯೆಗೆ ನ್ಯಾಯ ಕೊಡಿಸುವಂತೆ ಗೃಹ ಸಚಿವರಿಗೆ ಪತ್ರ

ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೆ ವಂಚನೆ ಮಾಡುತ್ತಿದ ಖತರ್ನಾಕ್ ಗ್ಯಾಂಗ್ ಅಂದರ್

ಗದಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೆ ವಂಚನೆ ಮಾಡುತ್ತಿದ ಖತರ್ನಾಕ್ ಗ್ಯಾಂಗ್ ಅನ್ನು ಮುಂಡರಗಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಟಗೇರಿ ಮೂಲದ ರವಿ ಮಾಕಾಪೂರ, ವಿಜಯನಗರ ಜಿಲ್ಲೆಯ ಸತೀಶ ಸೂರಣಗಿ ಬಂಧಿತ ಆರೋಪಿಗಳು. ಇನ್ನು ಪ್ರಕರಣದ ಪ್ರಮುಖ ಆರೋಪಿ ಯಶ್ ಪ್ರಕಾಶ್ ಬಾಕಳೆ ಪರಾರಿಯಾಗಿದ್ದಾನೆ.

ಆರೋಪಿಗಳು IDFC ಬ್ಯಾಂಕ್​ನಲ್ಲಿ 90 ಗ್ರಾಮ ನಕಲಿ ಚಿನ್ನ ಅಡವಿಟ್ಟು 3.80 ಲಕ್ಷ ರೂ. ಸಾಲ ಪಡೆದಿದ್ದರು. ಇದಾದ ನಂತರ ಆರೋಪಿಗಳು ಇತ್ತೀಚಿಗೆ ಮುಂಡರಗಿ ಪಟ್ಟಣದ ಎಸ್.ಬಿ.ಐ ಬ್ಯಾಂಕ್​​ನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ನಿರ್ಧರಿಸಿದ್ದರು. ಅದರಂತೆ 110 ಗ್ರಾಮ ಚಿನ್ನ ಅಡವಿಟ್ಟು ಹಣ ಪಡೆಯಲು ಬ್ಯಾಂಕ್​ ಹೋಗಿದ್ದರು. ಬ್ಯಾಂಕ್​ನಲ್ಲಿ ​ಬಂಗಾರ ನೀಡಿದ್ದಾರೆ.​​ ಚಿನ್ನವನ್ನು ಅಧಿಕಾರಿ ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ.

ತಕ್ಷಣ ಬ್ಯಾಂಕ್​ ಅಧಿಕಾರಿ ಮುಂಡರಗಿ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟು 170 ಗ್ರಾಮ ನಕಲಿ ಚಿನ್ನ ವಶವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ