ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್​ನಿಂದ ವಂಚನೆ; ಸಹೋದರಿಯ ಆತ್ಮಹತ್ಯೆಗೆ ನ್ಯಾಯ ಕೊಡಿಸುವಂತೆ ಗೃಹ ಸಚಿವರಿಗೆ ಪತ್ರ

ಸಾಮಾಜಿಕ ಜಾಲತಾಣದ ಸ್ಟಾರ್​ ಅಬ್ರಾರ್ ಶೇಕ್ ನನ್ನ ಸಹೋದರಿಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಸಿಮ್ರಾನ್ ಬಾನು ಆರೋಪಿಸಿದ್ದಾರೆ.

ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್​ನಿಂದ ವಂಚನೆ; ಸಹೋದರಿಯ ಆತ್ಮಹತ್ಯೆಗೆ ನ್ಯಾಯ ಕೊಡಿಸುವಂತೆ ಗೃಹ ಸಚಿವರಿಗೆ ಪತ್ರ
ಪ್ರಾತಿನಿಧಿಕ ಚಿತ್ರ
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 15, 2023 | 8:06 PM

ಬೆಂಗಳೂರು, ಸೆ.15: ಸಾಮಾಜಿಕ ಜಾಲತಾಣದ ಪ್ರಭಾವಿ ಸ್ಟಾರ್​ ಅಬ್ರಾರ್ ಶೇಕ್ ಎಂಬಾತ ಯುವತಿಯೋರ್ವಳಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಘಟನೆ ಬೆಂಗಳೂರಿನ (Bengaluru) ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಸೆಪ್ಟೆಂಬರ್ 11 ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದೀಗ ಆತ್ಮಹತ್ಯೆಗೆ ಆತನೇ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿದೆ. ಮುಸ್ಕಾನ್ ಖಾನೂಮ್(27) ಆತ್ಮಹತ್ಯೆಗೆ ಶರಣಾದ ಯುವತಿ. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ ಹಿನ್ನೆಲೆ ಸಂತ್ರಸ್ತೆಯ ಸಹೋದರಿ ಸಿರಾನ್ ಬಾನು ಎಂಬುವವರು ಕರ್ನಾಟಕ ಗೃಹ ಸಚಿವರು, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ನನ್ನ ಸಹೋದರಿ ಮುಸ್ಕಾನ್ ಖಾನಮ್‌ಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದ. ಮತ್ತು ಆಕೆಯ ಜೊತೆ ವರ್ಷಗಳ ಕಾಲ ಸಂಬಂಧದಲ್ಲಿದ್ದು. ಇತ್ತೀಚೆಗೆ ಅವಳನ್ನು ನಿರ್ಲಕ್ಷಿಸಿದ್ದಾನೆ. ಇದರಿಂದ ಮನನೊಂದು ಮುಸ್ಕಾನ್ ಖಾನಮ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ಕುರಿತು ಪೊಲೀಸ್​ ಠಾಣೆಗೆ ದೂರು ನೀಡದಂತೆ ಅಬ್ರಾರ್ ಶೇಕ್ ಬೆದರಿಕೆ ಹಾಕಿದ್ದಾರೆ ಎಂದು ಸಿಮ್ರಾನ್ ಬಾನು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಇತ ನನ್ನ ಸಹೋದರಿಯ ಖಾಸಗಿ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಲೀಕ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ:ಗೆಳತಿಯಿಂದ ಅತ್ಯಾಚಾರ ಆರೋಪ, ಮನನೊಂದು ಫೇಸ್​ಬುಕ್​ ಲೈವ್​ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

“ಜೊತೆಗೆ ಅವರು ನನ್ನ ಸಹೋದರಿಯ ಆತ್ಮಹತ್ಯೆಗೆ ಶರಣಾದ ನಂತರ ಆತನ ಜೊತೆಗೆ ಮಾಡಿದ ಮೇಸೆಜ್​ ಹೊಂದಿದ್ದ ಫೋನ್​ನ್ನು ಕಳ್ಳತನ ಮಾಡಿದ್ದಾನೆ. ಆತ ಪ್ರಭಾವಿಯಾಗಿರುವ ಕಾರಣ ರಾಜಕಾರಣಿಗಳು ಮತ್ತು ರೌಡಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡು ನನಗೆ ಮತ್ತು ನನ್ನ ಪತಿಗೆ ಬೆದರಿಕೆ ಹಾಕಿದ್ದಾರೆ ಎಂದು ಸಿಮ್ರಾನ್ ಬಾನು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಇತ ಹಲವಾರು ಯುವತಿಯರಿಗೆ ಮದುವೆ ಆಗುವುದಾಗಿ ಸುಳ್ಳು ಭರವಸೆ ನೀಡಿ, ಅವರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದು, ನನ್ನ ತಂಗಿಯ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ