ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ

ಬಿಡಿಎನ ಪ್ರತಿಷ್ಠಿತ ಬಡಾವಣೆ ಅಂತ ಕರೆಸಿಕೊಳ್ತಿರೋ ಶಿವರಾಮಕಾರಂತ ಬಡಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಹೋರಾಟದ ಹಾದಿ ಹಿಡಿದಿದ್ದ ರೈತರಿಗೆ ಬಿಡಿಎ ಕೊಟ್ಟ ಸುಳಿವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಗಣಪತಿ ಹಬ್ಬದ ಬಳಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡೋ ಸಾಧ್ಯತೆಯಿದೆ.

ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ
ಬಿಡಿಎ
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: Sep 16, 2023 | 6:51 AM

ಬೆಂಗಳೂರು, ಸೆ.16: ಸದಾ ಗೊಂದಲದ ಗೂಡಾಗಿದ್ದ ಶಿವರಾಮ ಕಾರಂತ ನಿವಾಸಿಗಳಿಗೆ(Shivaram Karanth Layout) ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಗಣಪತಿ ಹಬ್ಬದ(Ganesh Chaturthi 2023) ಬಳಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡೋ ಸಾಧ್ಯತೆಯಿದೆ. ಕಳೆದ ಮೂರು ವರ್ಷಗಳಿಂದ ನಿವೇಶನಕ್ಕಾಗಿ ಓಡಾಡ್ತಿದ್ದವ್ರಿಗೆ ಬಿಡಿಎ(BDA) ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಬಿಡಿಎನ ಪ್ರತಿಷ್ಠಿತ ಬಡಾವಣೆ ಅಂತ ಕರೆಸಿಕೊಳ್ತಿರೋ ಶಿವರಾಮಕಾರಂತ ಬಡಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಹೋರಾಟದ ಹಾದಿ ಹಿಡಿದಿದ್ದ ರೈತರಿಗೆ ಬಿಡಿಎ ಕೊಟ್ಟ ಸುಳಿವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೌದು 2008 ರಲ್ಲಿ 3456 ಎಕರೆ ಜಮೀನನ್ನ ಬಿಡಿಎ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿತ್ತು. ಆದ್ರೆ 2008 ರ ಆಧಾರದ ಮೇಲೆ ಪರಿಹಾರ ನೀಡೋಕೆ ಮಾಡಿದ್ದ ನಿರ್ಧಾರದ ವಿರುದ್ಧ ಭೂಮಿ ನೀಡಿದ ರೈತರು ಅಸಮಧಾನ ವ್ಯಕ್ತಪಡಿಸಿದ್ರು. ಹಾಗೆನೇ ನೊಟಿಫಿಕೇಷನ್‌ಗೂ ಮೊದಲೆ ಕಟ್ಟಡ ನಿರ್ಮಿಸಿದ್ದವ್ರು ಕೋರ್ಟ್ ಮೆಟ್ಟಿಲೇರಿದ್ರು. ಇದನ್ನ ಪರಿಗಣಿಸಿದ ಸುಪ್ರೀಂ ನ್ಯಾ. ಚಂದ್ರಶೇಖರ್ ಸಮಿತಿ ರಚನೆ ಮಾಡಿ ವಿವಾದ ಇತ್ಯರ್ಥ ಪಡಿಸುವಂತೆ ಸೂಚನೆ ಕೊಟ್ಟಿತ್ತು. ಅದರಂತೆ ಸತತ ಮೂರು ವರ್ಷ ಪರಿಶೀಲನೆ ನಡೆಸಿದ ಸಮಿತಿ ಲೇಔಟ್ ವಿಚಾರದಲ್ಲಿ ಎದ್ದಿದ್ದ ಎಲ್ಲಾ ಗೊಂದಲಗಳನ್ನೂ ನಿವಾರಣೆ ಮಾಡಿದೆ.

ಇದನ್ನೂ ಓದಿ: ಶಿವರಾಮ ಕಾರಂತ ಬಿಡಿಎ ಜಾಗದಲ್ಲಿ ಮರಗಳ ಮೇಲೆ ಪ್ರಭಾವಿಗಳ ಕಣ್ಣು, ನೂರಾರು ಮರಗಳನ್ನು ಕ್ಷಣಾರ್ಧದಲ್ಲಿ ಕೊಚ್ಚಿಹಾಕಿದರು

ಇನ್ನು ನ್ಯಾಮೂರ್ತಿ ಚಂದ್ರಶೇಖರ್ ಸಮಿತಿ ರಚನೆಯಾದ ಬಳಿಕ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಇದ್ದ ಎಲ್ಲಾ ಗೊಂದಲಗಳನ್ನ ಬಗೆಹರಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ನ್ಯಾ. ಚಂದ್ರಶೇಖರ್, 2008 ರಲ್ಲಿ ಶಿವರಾಮಕಾರಂತ ಬಡಾವಣೆಗೆ ನಿರ್ಮಾಣಕ್ಕಾಗಿ 3456 ಅಧಿಸೂಚನೆ ಹೊರಡಿಸಲಾಗಿತ್ತು. 2018 ಕ್ಕೂ ಮೊದಲು ಕಟ್ಟಡಗಳನ್ನ ನಿರ್ಮಾಣ ಮಾಡಿದ್ದವುಗಳನ್ನ ಸಕ್ರಮ ಮಾಡ್ಬೇಕು ಅಂತ ಸೂಚನೆ ಕೊಟ್ಟ ಹಿನ್ನಲೆಯಲ್ಲಿ 7724 ಅರ್ಜಿ ಸಲ್ಲಿಕೆಯಾಗಿದ್ವು, ಇದ್ರಲ್ಲಿ ಅಳೆದು ತೂಗಿದ ಸಮಿತಿ 7714 ಅರ್ಜಿಗಳ ಪೈಕಿ 5171 ಅರ್ಜಿಗಳನ್ನ ಸಕ್ರಮ ಮಾಡಿದೆ. ಉಳಿದ ಅರ್ಜಿಗಳನ್ನ ವಜಾ ಮಾಡಿದ್ದು, ಬಡಾವಣೆ ನಿರ್ಮಾಣಕ್ಕೆ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. 5171 ಅರ್ಜಿಗಳಷ್ಟೇ ಅಲ್ದೇ ಬಿಡಿಎ ಅನುಮೋದನೆಗೊಳಿಸಿದ 13 ಖಾಸಗಿ ಬಡಾವಣೆಗಳನ್ನೂ ಸಕ್ರಮಗೊಳಿಸಿದೆ. 3456 ಎಕರೆ ವಿಸ್ತೀರ್ಣದಲ್ಲಿ ಸುಮಾರು 34000 ನಿವೇಶನ ನಿರ್ಮಾಣದ ಗುರಿಯನ್ನ ಬಿಡಿಎ ಹೊಂದಿದ್ದು, ಇದ್ರಲ್ಲಿ ಶೇಕಡಾ 15 ರಷ್ಟು ಜಾಗ ಪಾರ್ಕ್ ಉದ್ಯಾನವನ ನಿರ್ಮಾಣಕ್ಕೆ ಮೀಸಲು ಇಡಬೇಕೆಂದೂ ಸಮಿತಿ ಶಿಫಾರಸ್ಸು ಮಾಡಿದೆ.

ಕಳೆದ 15 ವರ್ಷಗಳಿಂದ ವಾದ ವಿವಾದಗಳಿಂದಲೇ ಖ್ಯಾತಿಗಳಿಸಿದ್ದ ಶಿವರಾಮಕಾರಂತ ಬಡಾವಣೆಯ ಗೊಂದಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಗಣಪತಿ ಹಬ್ಬದ ಬಳಿಕ ನಿವೇಶನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ