ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ಶಾಸ್ತ್ರಕ್ಕೆ ಕುಳಿತ ವರ: ಮೈಸೂರಲ್ಲೊಂದು ಅಪರೂಪ ಮದುವೆ

ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿ ದಿ‌.ರಮೇಶ್​ ಮೈಸೂರು ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನಲ್ಲಿ ಯತೀಶ್ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ.

ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ಶಾಸ್ತ್ರಕ್ಕೆ ಕುಳಿತ ವರ: ಮೈಸೂರಲ್ಲೊಂದು ಅಪರೂಪ ಮದುವೆ
ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ಶಾಸ್ತ್ರಕ್ಕೆ ಕುಳಿತ ವರ: ಮೈಸೂರಲ್ಲೊಂದು ಅಪರೂಪ ಮದುವೆ
Updated By: ಗಂಗಾಧರ​ ಬ. ಸಾಬೋಜಿ

Updated on: May 07, 2022 | 7:38 PM

ಮೈಸೂರು: ತಂದೆಯ ಮೇಣದ ಪ್ರತಿಮೆ ಮುಂದೆ ವರ ಮದುವೆ ಶಾಸ್ತ್ರಕ್ಕೆ ಕುಳಿತಿರುವಂತಹ ಅವರೂಪದ ಮದುವೆಯೊಂದು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ತಂದೆಯನ್ನ‌‌ ಕಳೆದುಕೊಂಡಿದ್ದರಿಂದ ತನ್ನ ಮದುವೆಯಲ್ಲಿ ತಂದೆಯ ಮೇಣದ ಪ್ರತಿಮೆಯನ್ನು ಮಗ ಮಾಡಿಸಿದ್ದಾನೆ. ನಂಜನಗೂಡು ತಾಲೂಕಿನ ಮಲ್ಕುಂಡಿಯ ವಧು ಡಾ.ಅಪೂರ್ವ ಜೊತೆ ಡಾ.ಯತೀಶ್​ ಮದುವೆಯಾಗುತ್ತಿದ್ದು, ವರ ಯತೀಶ್ ತಂದೆ ರಮೇಶ್, ಕಳೆದ ಒಂದು ವರ್ಷದ ಹಿಂದೆ ಕೋವಿಡ್​ನಿಂದ ಮೃತಪಟ್ಟಿದರು. ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿ ದಿ‌.ರಮೇಶ್​ ಮೈಸೂರು ಜೆ.ಎಸ್.ಎಸ್ ಆಯುರ್ವೇದ ಕಾಲೇಜಿನಲ್ಲಿ ಯತೀಶ್ ಎಂ.ಡಿ ವ್ಯಾಸಂಗ ಮಾಡುತ್ತಿದ್ದಾರೆ. ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದಿದ್ದು, ಮದುವೆ ಶಾಸ್ತ್ರಗಳಲ್ಲಿ ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ವರ ಪೂಜೆಗೆ ಕುಳಿತಿದ್ದಾನೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.