ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶವಿದೆ, ನಮಗೂ ಗಣೇಶೋತ್ಸವಕ್ಕೆ ಅವಕಾಶ ಕೊಡಿ: ಸಿಎಂ ಬೊಮ್ಮಾಯಿಗೆ ಸಂಸದ ಪ್ರತಾಪ್ ಒತ್ತಾಯ

| Updated By: preethi shettigar

Updated on: Aug 25, 2021 | 11:45 AM

ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುತ್ತಾ ಇದ್ದಾರೆ ಅಲ್ವಾ? ಚರ್ಚ್​ಗಳಲ್ಲಿ ಭಾನುವಾರ ಪ್ರಾರ್ಥನೆ ನಡಯುತ್ತಿದೆ ಅಲ್ವಾ? ಅಲ್ಲಿ ಅವಕಾಶ ಮಾಡುಕೊಟ್ಟಿದ್ದೀರಿ ಎನ್ನುವುದಾದರೆ ಗಣೇಶೋತ್ಸವಕ್ಕೂ ಅವಕಾಶ ಕೊಡಲಿ ಎಂದು ಹೇಳಿಕೆ ನೀಡಿದ್ದಾರೆ.

ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶವಿದೆ, ನಮಗೂ ಗಣೇಶೋತ್ಸವಕ್ಕೆ ಅವಕಾಶ ಕೊಡಿ: ಸಿಎಂ ಬೊಮ್ಮಾಯಿಗೆ ಸಂಸದ ಪ್ರತಾಪ್ ಒತ್ತಾಯ
ಸಂಸದ ಪ್ರತಾಪ್ ಸಿಂಹ
Follow us on

ಮೈಸೂರು: ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುತ್ತಾ ಇದ್ದಾರೆ ಅಲ್ವಾ? ಚರ್ಚ್​ಗಳಲ್ಲಿ ಭಾನುವಾರ ಪ್ರಾರ್ಥನೆ ನಡಯುತ್ತಿದೆ ಅಲ್ವಾ? ಅಲ್ಲಿ ಅವಕಾಶ ಮಾಡುಕೊಟ್ಟಿದ್ದೀರಿ ಎನ್ನುವುದಾದರೆ ಗಣೇಶೋತ್ಸವಕ್ಕೂ ಅವಕಾಶ ಕೊಡಲಿ ಎಂದು ಹೇಳಿಕೆ ನೀಡಿದ್ದಾರೆ.

ಕೊವಿಡ್ ನಿಯಮಾವಳಿ ಕಟ್ಟುನಿಟ್ಟಿನ ಅನುಷ್ಠಾನ ಮಾಡಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಡಿ. ಉತ್ಸವ ಎನ್ನುವುದು ನಡಿಯಬೇಕು. ಅದ್ದೂರಿಯಾಗಿ ನಡೆಯಬೇಕು ಎಂದು ಹೇಳುತ್ತಿಲ್ಲ. ಆದರೆ ಉತ್ಸವ ನಡೆಯಬೇಕು. ಬಸವರಾಜ ಬೊಮ್ಮಾಯಿ ಈ ಎಲ್ಲಾ ಅಂಶಗಳನ್ನು ಗಣನೆಗೆ ತಡಗೆದುಕೊಂಡಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ವಿಜಯಪುರ: ಗಣೇಶೋತ್ಸವ ಆಚರಿಸುವವರು ಅಂಜಬೇಡಿ: ವೈರಲ್ ಆಯ್ತು ಯತ್ನಾಳ್ ಹೇಳಿಕೆ
ಜಿಲ್ಲಾಸ್ಪತ್ರೆ ಆವರಣದಲ್ಲಿ ಆಗಸ್ಟ್ 21 ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ವಿಚಾರದಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲೇ ವಿಜಯಪುರ ನಗರ ವ್ಯಾಕ್ಸಿನೇಷನ್​ನಲ್ಲಿ ನಂಬರ್ ಒನ್ ಇದೆ. ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ. ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಕ್ಸ್​ಪರ್ಟ್​ ಯಾವ ಆಧರಾದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಜನ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಾರೆ. ಆದರೆ ಈಗ ಗಣಪತಿ ಹಬ್ಬಕ್ಕೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ಜನ ಇಷ್ಟೇ ಇರಬೇಕು, ಗಣಪತಿ ಕೂರಿಸುವಾಗ ಇಷ್ಟೇ ಜನ ಇರಬೇಕು ಅಂತೆಲ್ಲ ರೂಲ್ಸ್ ಮಾಡಿದ್ದಾರೆ ಅಂತ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್ ಹೇಳಿದ್ದರು.

ಎಸ್ಪಿ ಹಾಗೂ ಡಿಸಿ ಅವರು ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ. ಹೆಚ್ಚು ಅಂದರ ನನಗೆ ಗುಂಡು ಹಾಕಬಹುದು. ನಾ ಸತ್ತರು ಹೆಸರು ತಗೊಂಡು ಸಾಯಬೇಕು. ಅದಕ್ಕೆ ಸಿಎಂಗೆ ಕೂಡಾ ಹೇಳಿದ್ದೇನೆ ಗಣೇಶೋತ್ಸವಕ್ಕೆ ತೊಂದರೆ ಮಾಡಬಾರದು ಅಂತ. ಹತ್ತತ್ತು ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರಾ, ಗಣಪತಿ ಬಂದಾಗ ಮಾತ್ರ ಕೊರೊನಾ ನೆನಪಾಗುತ್ತಾ? ಎಂದು ಪ್ರಶ್ನಿಸಿದ ಗಣೇಶೋತ್ಸವಕ್ಕೆ 50 ಕಂಡಿಷನ್ ಹಾಕಿದ್ದಾರೆ. ಈ ಕುರಿತು ಬಸವರಾಜ್ ಬೊಮ್ಮಾಯಿ ಜೊತೆ ಮಾತನಾಡಿರುವೆ ಅಂತ ತಿಳಿಸಿದ್ದರು.

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ. ಸಿಎಂ ಅವರು ಡಿಸಿ ಹಾಗೂ ಎಸ್ಪಿ ಅವರಿಗೂ ಸಿಎಂ ಸೂಚನೆ ನೀಡಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುವವರು ಯಾರೂ ಅಂಜಕೂಡದು ಅಂತ ನಿನ್ನೆ ಯತ್ನಾಳ್ ಹೇಳಿಕೆ ನೀಡಿದ್ದು, ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ:
ಗಣೇಶ ಮೂರ್ತಿ ಸ್ಥಾಪಿಸುವವರಿಗೆ ಹಣ ನೀಡುವುದಾಗಿ ಘೋಷಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ? ಗಣೇಶೋತ್ಸವ ಆಚರಿಸುವವರು ಅಂಜಬೇಡಿ; ವೈರಲ್ ಆಯ್ತು ಯತ್ನಾಳ್ ಹೇಳಿಕೆ