ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ? ಗಣೇಶೋತ್ಸವ ಆಚರಿಸುವವರು ಅಂಜಬೇಡಿ; ವೈರಲ್ ಆಯ್ತು ಯತ್ನಾಳ್ ಹೇಳಿಕೆ

ಎಕ್ಸ್​ಪರ್ಟ್​ ಯಾವ ಆಧರಾದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಜನ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಾರೆ. ಆದರೆ ಈಗ ಗಣಪತಿ ಹಬ್ಬಕ್ಕೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ.

ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ? ಗಣೇಶೋತ್ಸವ ಆಚರಿಸುವವರು ಅಂಜಬೇಡಿ; ವೈರಲ್ ಆಯ್ತು ಯತ್ನಾಳ್ ಹೇಳಿಕೆ
ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ಜಿಲ್ಲಾಸ್ಪತ್ರೆ ಆವರಣದಲ್ಲಿ ನಿನ್ನೆ (ಆಗಸ್ಟ್ 21) ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Yatnal) ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಕೊರೊನಾ ವಿಚಾರದಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲೇ ವಿಜಯಪುರ ನಗರ ವ್ಯಾಕ್ಸಿನೇಷನ್​ನಲ್ಲಿ ನಂಬರ್ ಒನ್ ಇದೆ. ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ. ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಶನಿವಾರ, ರವಿವಾರ ಅಷ್ಟೇ ಕೊರೊನಾ ಬರುತ್ತಾ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಕ್ಸ್​ಪರ್ಟ್​ ಯಾವ ಆಧರಾದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಜನ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಾರೆ. ಆದರೆ ಈಗ ಗಣಪತಿ ಹಬ್ಬಕ್ಕೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ಜನ ಇಷ್ಟೇ ಇರಬೇಕು, ಗಣಪತಿ ಕೂರಿಸುವಾಗ ಇಷ್ಟೇ ಜನ ಇರಬೇಕು ಅಂತೆಲ್ಲ ರೂಲ್ಸ್ ಮಾಡಿದ್ದಾರೆ ಅಂತ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್ ಹೇಳಿದ್ದರು.

ಎಸ್ಪಿ ಹಾಗೂ ಡಿಸಿ ಅವರು ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ. ಹೆಚ್ಚು ಅಂದರ ನನಗೆ ಗುಂಡು ಹಾಕಬಹುದು. ನಾ ಸತ್ತರು ಹೆಸರು ತಗೊಂಡು ಸಾಯಬೇಕು. ಅದಕ್ಕೆ ಸಿಎಂಗೆ ಕೂಡಾ ಹೇಳಿದ್ದೇನೆ ಗಣೇಶೋತ್ಸವಕ್ಕೆ ತೊಂದರೆ ಮಾಡಬಾರದು ಅಂತ. ಹತ್ತತ್ತು ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರಾ, ಗಣಪತಿ ಬಂದಾಗ ಮಾತ್ರ ಕೊರೊನಾ ನೆನಪಾಗುತ್ತಾ? ಎಂದು ಪ್ರಶ್ನಿಸಿದ ಗಣೇಶೋತ್ಸವಕ್ಕೆ 50 ಕಂಡಿಷನ್ ಹಾಕಿದ್ದಾರೆ. ಈ ಕುರಿತು ಬಸವರಾಜ್ ಬೊಮ್ಮಾಯಿ ಜೊತೆ ಮಾತನಾಡಿರುವೆ ಅಂತ ತಿಳಿಸಿದ್ದರು.

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ. ಸಿಎಂ ಅವರು ಡಿಸಿ ಹಾಗೂ ಎಸ್ಪಿ ಅವರಿಗೂ ಸಿಎಂ ಸೂಚನೆ ನೀಡಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುವವರು ಯಾರೂ ಅಂಜಕೂಡದು ಅಂತ ನಿನ್ನೆ ಯತ್ನಾಳ್ ಹೇಳಿಕೆ ನೀಡಿದ್ದು, ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ

ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ: ಬಸನಗೌಡ ಪಾಟೀಲ ಯತ್ನಾಳ್ ಎಚ್ಚರಿಕೆ

ಮಾಸ್ಕ್ ಧರಿಸದವರಿಗೆ 250 ರೂ. ದಂಡ; ಹಬ್ಬಗಳ ಹಿನ್ನೆಲೆ ಬೆಂಗಳೂರಿಗರಿಗೆ ಹೊಸ ನಿಯಮ ಜಾರಿ

(Speaking in Vijayapura Basanagouda Yatnals statements are viral)

Click on your DTH Provider to Add TV9 Kannada