ಗಣೇಶ ಮೂರ್ತಿ ಸ್ಥಾಪಿಸುವವರಿಗೆ ಹಣ ನೀಡುವುದಾಗಿ ಘೋಷಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರೆ 5 ಸಾವಿರ ರೂ, ಬೇರೆ ಗಣೇಶ ಪೂರ್ತಿ ಪ್ರತಿಷ್ಠಾಪಿಸಿದರೆ ಎರಡೂವರೆ ಸಾವಿರ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಗಣೇಶ ಮೂರ್ತಿ ಸ್ಥಾಪಿಸುವವರಿಗೆ ಹಣ ನೀಡುವುದಾಗಿ ಘೋಷಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on:Aug 24, 2021 | 6:03 PM

ವಿಜಯಪುರ: ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರಿಗೆ ವೈಯಕ್ತಿಕವಾಗಿ ಹಣ ನೀಡುವುದಾಗಿ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ. ಗಣೇಶ ಮೂರ್ತಿ ಸ್ಥಾಪಿಸುವ ಗಜಾನನ ಉತ್ಸವ ಮಂಡಳಿಗಳಿಗೆ ಹಣ ನೀಡುವುದಾಗಿ ಅವರು ಘೋಷಿಸಿದ್ದಾರೆ. ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರೆ 5 ಸಾವಿರ ರೂ, ಬೇರೆ ಗಣೇಶ ಪೂರ್ತಿ ಪ್ರತಿಷ್ಠಾಪಿಸಿದರೆ ಎರಡೂವರೆ ಸಾವಿರ ನೀಡುವುದಾಗಿ ಅವರು ಘೋಷಿಸಿದ್ದಾರೆ. ಸಿದ್ದೇಶ್ವರ ಸಂಸ್ಥೆ ಕೌಂಟರ್​ನಲ್ಲಿ ಮನವಿ ಸಲ್ಲಿಸಲು ಅವರು ಸೂಚಿಸಿದ್ದಾರೆ.

ಇದಕ್ಕಾಗಿಯೇ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯಲ್ಲಿ ತೆರೆಯಲಾದ ಕೌಂಟರ್ನಲ್ಲಿ ಮನವಿ ಸಲ್ಲಿಸಿ ಹಣ ಪಡೆಯಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ಗಣಪತಿ ಇಡಲು ಪೊಲೀಸರ ಪರವಾನಗಿ, ಕೆಇಬಿ ಪರವಾನಗಿ ಸೇರಿದಂತೆ ಇತರೆ ಇಲಾಖೆಗಳ ಅನುಮತಿ ಸುರಳಿತವಾಗಿ ಸಿಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದೇ ವಿಚಾರವಾಗಿ ಸಿಎಂ ಜೊತೆಗೆ ಮಾತನಾಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಯಾರೂ ವಿಚಲಿತರಾಗದೇ ಶಾಂತಿಯುತ ಹಾಗೂ ಸಾಮಾಜಿಕ ಅಂತರದ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕೆಂದು ಅವರು ಮಾಧ್ಯಮ ಪ್ರಕಟನೆಯಲ್ಲಿ‌ ಮನವಿ ಮಾಡಿದ್ದಾರೆ.

ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ ಕೊವಿಡ್ ನೆಪದಲ್ಲಿ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ನಡೆಯಲ್ಲ. ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡೆಯಲ್ಲ. ಮೋಹರಂ‌‌‌ ಸೇರಿ ಎಲ್ಲ ಹಬ್ಬಕ್ಕೂ ನಿರ್ಬಂಧ ಅನ್ವಯವಾಗಲಿ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ‌‌ ಬಸನಗೌಡ ಪಾಟೀಲ್ ಯತ್ನಾಳ್ ಆಗಸ್ಟ್ 13ರಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡೆಯಲ್ಲ. ಹಿಂದೂಗಳಿಗೆ ಮಾತ್ರ ನಿರ್ಬಂಧ ಹಾಕಿದರೆ ಅದನ್ನು ಉಲ್ಲಂಘಿಸುತ್ತೇವೆ ಎಂದು ಬಸನಗೌಡ ಯತ್ನಾಳ್ ಸರ್ಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಹಲವು ನಿರ್ಬಂಧ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಯತ್ನಾಳ್ ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೊವಿಡ್ ಮೂರನೆಯ ಅಲೆ ಭಯಾನಕವಾಗಿದೆ ಎಂಬ ಆತಂಕವಿದೆ. ಹೀಗಾಗಿ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಭಂದಗಳನ್ನ ವಿಧಿಸಿದೆ. ಜನರ ರಕ್ಷಣೆಗಾಗಿ ನಿರ್ಭಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನ ಎಲ್ಲರೂ ಪಾಲಿಸುತ್ತೇವೆ. ಆದರೆ ಕೊವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ನಡೆಯಲ್ಲ. ಮೋಹರಂ‌‌‌ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳಿಗೂ ನಿರ್ಭಂದಗಳು ಅನ್ವಯವಾಗಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರದಲ್ಲಿ‌ ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ ಅಂದುಕೊಂಡಿದ್ದೇನೆ. ಕೇವಲ ಹಿಂದೂಗಳಿಗೆ ಮಾತ್ರ ನಿರ್ಬಂಧ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಇದನ್ನೂ ಓದಿ: 

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

Covid Vaccine: 12 ವರ್ಷ ಮೇಲ್ಪಟ್ಟವರಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ; ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲ ಆದ್ಯತೆ

(MLA Basanagouda Patil Yatnal announces personal pay for one who establish public Ganesh statue)

Published On - 5:48 pm, Tue, 24 August 21