ಮೈಸೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕಠಿಣ ನಿಯಮಗಳನ್ನ ಜಾರಿಗೆ ತಂದಿದ್ದು, ಹೊರ ರಾಜ್ಯದಿಂದ ಬರುವವರು ಆರ್ಟಿಪಿಸಿಆರ್ ಟೆಸ್ಟ್ ವರದಿಯನ್ನು ಕಡ್ಡಾಯವಾಗಿ ತೋರಿಸಬೇಕು ಅಂತ ಸರ್ಕಾರ ತಿಳಿಸಿದೆ. ಈ ನಡುವೆ ವ್ಯಕ್ತಿಯೊಬ್ಬ ಕೊವಿಡ್ ವರದಿಯನ್ನು ಎಡಿಟ್ ಮಾಡಿಕೊಂಡು ಬಂದಿದ್ದಾನೆ. ಕ್ಯೂ ಆರ್ ಸ್ಕ್ಯಾನ್ ಮಾಡಿದಾಗ ನಕಲು ಪತ್ತೆಯಾಗಿದೆ. ಬಾವಲಿ ಚೆಕ್ ಪೋಸ್ಟ್ನಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಕೊವಿಡ್ ವರದಿ ಎಡಿಟ್ ಮಾಡಿರುವುದು ತಿಳಿದುಬಂದಿದೆ.
ಹೊರ ರಾಜ್ಯದಿಂದ ಒಂದೇ ಕಾರಿನಲ್ಲಿ ಮೂವರು ಬಂದಿದ್ದಾರೆ. ಇದರಲ್ಲಿ ಒಬ್ಬರ ರಿಪೋರ್ಟ್ನ ಎಡಿಟ್ ಮಾಡಿಕೊಂಡು ಬಂದಿದ್ದಾರೆ. ಸ್ಕ್ಯಾನ್ ಮಾಡಿದಾಗ ಒಂದೇ ವರದಿ ಹೆಸರನ್ನು ಎಡಿಟ್ ಮಾಡಿಕೊಂಡು ಬಂದಿರುವುದು ಪತ್ತೆಯಾಗಿದೆ. ಹೀಗಾಗಿ ಬಾವಲಿ ಚೆಕ್ ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.
ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಹೊರ ರಾಜ್ಯದಿಂದ ಬರುತ್ತಿರುವ ಪ್ರತಿಯೊಬ್ಬ ಸವಾರರನ್ನ ತಪಾಸಣೆ ಮಾಡುತ್ತಿದ್ದಾರೆ. ಬಸ್ ಹಾಗೂ ಇತರೆ ವಾಹನಗಳಲ್ಲಿ ಬರುವ ಪ್ರತಿಯೊಬ್ಬರಿಗೂ ತಪಾಸಣೆ ನಡೆಸಲಾಗುತ್ತಿದೆ. ನಕಲು ವರದಿ ತಂದು ರಾಜ್ಯಕ್ಕೆ ಬರಲು ಯತ್ನಿಸುತ್ತಿರುವ ಹಿನ್ನೆಲೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ತಪಾಸಣೆ ನಡೆಸುತ್ತಿದ್ದಾರೆ. ವರದಿ ಇಲ್ಲದೆ ಬರುವಂತ ಪ್ರಯಾಣಿಕರನ್ನ ಸಿಬ್ಬಂದಿಗಳು ವಾಪಸ್ಸು ಕಳುಹಿಸುತ್ತಿದ್ದಾರೆ.
ಸಿಬ್ಬಂದಿ ಜೊತೆ ಪ್ರಯಾಣಿಕರ ವಾಗ್ವಾದ
ವಿಜಯಪುರ: ಮಹಾರಾಷ್ಟ್ರದ ಗಡಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಮುಂದುವರಿದಿದೆ. ಈ ವೇಳೆ ತಪಾಸಣೆ ಮಾಡುವ ಸಿಬ್ಬಂದಿಗಳ ಜೊತೆ ಪ್ರಯಾಣಿಕರು ವಾಗ್ವಾದ ಮಾಡುತ್ತಿದ್ದಾರೆ. ಸಿಬ್ಬಂದಿ ಜೊತೆ ವಾಗ್ವಾದ ಮಾಡುತ್ತಿದ್ದ ಪ್ರಯಾಣಿಕರನ್ನ ತಹಶೀಲ್ದಾರ್ ತರಾಟೆಗೆ ತಗೆದುಕೊಂಡರು.
ಇದನ್ನೂ ಓದಿ
ಜಮ್ಮು ಮತ್ತು ಕಾಶ್ಮೀರ ಹಿಮಾವೃತ: ಹಿಮಕುಸಿತದ ಎಚ್ಚರಿಕೆ ನೀಡಿದ ಐಎಂಡಿ, ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಒತ್ತಾಯ
ನರ್ಸಿಂಗ್ ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ; ಸಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಅಮಾನತು