ನರ್ಸಿಂಗ್ ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ; ಸಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಅಮಾನತು

ನರ್ಸಿಂಗ್ ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ; ಸಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಅಮಾನತು
ಸಿಮ್ಸ್ ಆಸ್ಪತ್ರೆ

2 ಪ್ರತ್ಯೇಕ ಪ್ರಕರಣಗಳಲ್ಲಿ 6 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯ 6 ಸಿಬ್ಬಂದಿ ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

TV9kannada Web Team

| Edited By: Ayesha Banu

Jan 06, 2022 | 1:48 PM

ಮೈಸೂರು: ನರ್ಸಿಂಗ್ ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ ಆರೋಪಕ್ಕೆ ಸಂಬಂಧಿಸಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್ರನ್ನು ಅಮಾನತುಗೊಳಿಸಲಾಗಿದೆ. ಆಸ್ಪತ್ರೆ ಡೀನ್ ಡಾ.ಸಂಜೀವ್ ಡಾ.ಮಹೇಶ್ವರ್ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಾರದ ಹಿಂದೆ ನರ್ಸಿಂಗ್ ವಿದ್ಯಾರ್ಥಿನಿಯೊಂದಿಗೆ ಡಾ.ಮಹೇಶ್ವರ್ ಅನುಚಿತ ವರ್ತನೆ ತೋರಿದ್ದರು. ಈ ಸಂಬಂಧ ನರ್ಸಿಂಗ್ ವಿದ್ಯಾರ್ಥಿನಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆಸ್ಪತ್ರೆ ಡೀನ್ ಡಾ.ಸಂಜೀವ್, ಡಾ.ಮಹೇಶ್ವರ್ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಆಂತರಿಕ ತನಿಖಾ ಸಮಿತಿ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

2 ಪ್ರತ್ಯೇಕ ಪ್ರಕರಣಗಳಲ್ಲಿ 6 ಪೊಲೀಸ್ ಸಿಬ್ಬಂದಿ ಅಮಾನತು ಇನ್ನು ಮತ್ತೊಂದೆಡೆ 2 ಪ್ರತ್ಯೇಕ ಪ್ರಕರಣಗಳಲ್ಲಿ 6 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯ 6 ಸಿಬ್ಬಂದಿ ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಒಂದು ಕಡೆ ಪೋಕ್ಸೋ ಕೇಸ್‌ನಲ್ಲಿ ಲೋಪ ಎಸಗಿದ ಪ್ರಕರಣದಲ್ಲಿ ಪಿಎಸ್‌ಐ ಸಸ್ಪೆಂಡ್ ಮಾಡಲಾಗಿದೆ. ಮಹಿಳಾ ಠಾಣೆಯ ಪಿಎಸ್‌ಐ ರೋಸಮ್ಮ ಅಮಾನತುಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧವೇ ದೂರು ಬಂದಾಗ ಪಿಎಸ್‌ಐ ರೋಸಮ್ಮ ನಿರ್ಲಕ್ಷ್ಯ ವಹಿಸಿದ್ದರು.ಜುಲೈ 27 ರಂದು ಕಂಕನಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ​ ರೋಸಮ್ಮ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ್ದರು ಎಂಬ ಆರೋಪವಿದೆ. ಪಿಎಸ್ಐ​ ಕರ್ತವ್ಯ ಲೋಪದ ಕುರಿತು ಕೇಂದ್ರ ಉಪವಿಭಾಗ ಎಸಿಪಿ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪೊಲೀಸ್ ‌ಕಮೀಷನರ್ ಅಮಾನತು ಆದೇಶ ಹೊರಡಿಸಿದ್ದಾರೆ.

ಇನ್ನು ಮತ್ತೊಂದು ಕಡೆ ಪೊಲೀಸ್ ಠಾಣೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದ ಹಿನ್ನೆಲೆ ಮಹಿಳಾ ಠಾಣೆಯ ಐವರು ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮದ್ಯಪಾನ ಮಾಡಿ ಅನುಚಿತ ವರ್ತನೆ ಹಿನ್ನೆಲೆ ಪುರುಷ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಇಬ್ಬರು ಎಎಸ್ಸೈ, ಇಬ್ಬರು ಹೆಡ್ ಕಾನ್ಸ್‌ಟೇಬಲ್, ಒಬ್ಬ ಕಾನ್ಸ್‌ಟೇಬಲ್ ಅಮಾನತುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಎಸಿಪಿ ಹಾಗೂ ಡಿಸಿಪಿ ವರದಿಯನ್ವಯ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಶಬರಿಮಲೆ ದೇವಾಲಯ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ ಬಿಂದು ಅಮ್ಮಿನಿ ಮೇಲೆ ಹಲ್ಲೆ; ಕೆಳಗೆ ಬೀಳುವವರೆಗೂ ಹೊಡೆದ ಎಂದ ಹೋರಾಟಗಾರ್ತಿ

Follow us on

Related Stories

Most Read Stories

Click on your DTH Provider to Add TV9 Kannada