ಹನಿಟ್ರ್ಯಾಪ್ ಮಾಡಿ ಯುವಕರನ್ನ ಐಸಿಸ್ಗೆ ಸೇರಿಸಿದ್ದ ದೀಪ್ತಿ ಮಾರ್ಲ, ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಯಲು
ವೈದ್ಯೆ ದೀಪ್ತಿ ಅಲಿಯಾಸ್ ಮರಿಯಂ ಹನಿಟ್ರ್ಯಾಪ್ ಮೂಲಕ ಯುವಕರನ್ನ ಮತಾಂತರಗೊಳಿಸಿ ಐಸಿಸ್ ಸೇರಿಸಿರೋದು ತನಿಖೆ ವೇಳೆ ಬಯಲಾಗಿದೆ. ಅಲ್ದೆ, ಇದಿನಬ್ಬ ಮೊಮ್ಮಗ ಅಬ್ದುಲ್ ಮದುವೆಯಾಗಿ ಇಸ್ಲಾಂಗೆ ದೀಪ್ತಿ ಮತಾಂತರಗೊಂಡಿದ್ದಳು. ತನ್ನ ಪತಿ ಅಬ್ದುಲ್ ಸೋದರ ಅಮರ್ ಅಬ್ದುಲ್ ಸೂಚನೆಗಳಂತೆ ಐಸಿಸ್ ಪರ ಕೆಲಸ ಮಾಡುತ್ತಿದ್ದಳು.
ಮಂಗಳೂರು: ಕಳೆದ ವರ್ಷದ ಆಗಸ್ಟ್ 4 ರಂದು ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ, ಸಾಹಿತಿ ದಿವಂಗತ ಇದಿನಬ್ಬ ಪುತ್ರನ ಮನೆ ಮೇಲೆ ಎನ್ಐಎ ದಾಳಿ ನಡೆಸಿತ್ತು. ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟಿರುವ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ಇದಿನಬ್ಬ ಮೊಮ್ಮಗನಾದ ಅಮರ್ ಅಬ್ದುಲ್ ರೆಹಮಾನ್ ನನ್ನು ಬಂಧಿಸಿತ್ತು. ಅದ್ರ ಭಾಗವಾಗಿ ಮೊನ್ನೆ ಎನ್ಐಎ ಮತ್ತೆ ದಾಳಿ ಮಾಡಿತ್ತು. ಇದಿನಬ್ಬ ಮಗ ಬಿ.ಎಂ.ಭಾಷಾ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂನನ್ನು ಬಂಧಿಸಿತ್ತು. ದೆಹಲಿಗೆ ಕರೆದೊಯ್ದು ವಿಚಾರಣೆ ಮಾಡಿದಾಗ ದೀಪ್ತಿಯಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ದೀಪ್ತಿ ಸ್ಫೋಟಕ ರಹಸ್ಯ ವೈದ್ಯೆ ದೀಪ್ತಿ ಅಲಿಯಾಸ್ ಮರಿಯಂ ಹನಿಟ್ರ್ಯಾಪ್ ಮೂಲಕ ಯುವಕರನ್ನ ಮತಾಂತರಗೊಳಿಸಿ ಐಸಿಸ್ ಸೇರಿಸಿರೋದು ತನಿಖೆ ವೇಳೆ ಬಯಲಾಗಿದೆ. ಅಲ್ದೆ, ಇದಿನಬ್ಬ ಮೊಮ್ಮಗ ಅಬ್ದುಲ್ ಮದುವೆಯಾಗಿ ಇಸ್ಲಾಂಗೆ ದೀಪ್ತಿ ಮತಾಂತರಗೊಂಡಿದ್ದಳು. ತನ್ನ ಪತಿ ಅಬ್ದುಲ್ ಸೋದರ ಅಮರ್ ಅಬ್ದುಲ್ ಸೂಚನೆಗಳಂತೆ ಐಸಿಸ್ ಪರ ಕೆಲಸ ಮಾಡುತ್ತಿದ್ದಳು. ಅಲ್ದೆ, ದೀಪ್ತಿ, 15 ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನ ಹೊಂದಿದ್ದಾಳೆ. ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್ನನ್ನು ಮತಾಂತರ ಮಾಡಿ ಐಎಸಿಸ್ ಸೇರಿಸಿ ಕೆಲಸ ಮಾಡುವಂತೆ ಮಾಡಿದ್ದಳು. ಮಾದೇಶ್ನನ್ನು ಹನಿಟ್ರ್ಯಾಪ್ ಮಾಡಲು 10 ಲಕ್ಷ ಖರ್ಚು ಮಾಡಿದ್ದಳು. ಶಾಕಿಂಗ್ ಅಂದ್ರೆ, ಈವರೆಗೆ ದೀಪ್ತಿ 10 ಯುವಕರನ್ನ ಐಸಿಸ್ಗೆ ಸೇರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಇದಿಷ್ಟೇ ಅಲ್ದೆ, ಈ ಹಿಂದೆ ದೀಪ್ತಿ ಐಸಿಎಸ್ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಳು. ಐಸಿಸ್‌ನ ತ್ವರಿತ ಪಿತೂರಿಯ ಕಿಂಗ್‌ಪಿನ್ ಅಂತಲೂ ಎನ್ಐಎ ಅಧಿಕೃತವಾಗಿ ಮಾಹಿತಿ ನೀಡಿದೆ. ಒಟ್ನಲ್ಲಿ, ಐಸಿಎಸ್ ಭಯೋತ್ಪಾದಕಿಯ ಬಣ್ಣ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ವೈದ್ಯೆ ದೀಪ್ತಿ ಎನ್ಐಎ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, 10 ಯುವಕರನ್ನು ಐಸಿಸ್ ಸೇರಿಸಿರೋದು ಗೊತ್ತಾಗಿದೆ.
ಇದನ್ನೂ ಓದಿ: ಮಾಜಿ ಶಾಸಕ ದಿ.ಇದಿನಬ್ಬ ಕುಟುಂಬಕ್ಕೆ ಐಸಿಸ್ ನಂಟು ಪ್ರಕರಣ; ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಂಧನ