ವಯಸ್ಕರಿಗೆ 2ನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ; ಆರೋಗ್ಯ ಸಚಿವ ಸುಧಾಕರ್ ಟ್ವೀಟ್
ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರವೆಂದರೆ ಲಸಿಕೆ (Vaccine). ಲಸಿಕೆ ಪಡೆದವರು ಕೊರೊನಾದಿಂದ ಪಾರಾಗಬಹುದು. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಅಂತ ಸರ್ಕಾರ ತಿಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಆತಂಕ ಶುರುವಾಗಿದೆ. ಹೀಗಾಗಿ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೊಳಿಸಿದೆ. ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರವೆಂದರೆ ಲಸಿಕೆ (Vaccine). ಲಸಿಕೆ ಪಡೆದವರು ಕೊರೊನಾದಿಂದ ಪಾರಾಗಬಹುದು. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಅಂತ ಸರ್ಕಾರ ತಿಳಿಸಿದೆ. ಈ ನಡುವೆ ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗಿದ್ದು, ವಯಸ್ಕರಿಗೆ 2ನೇ ಡೋಸ್ ನೀಡಿಕೆಯಲ್ಲಿ ದೇಶದಲ್ಲೇ ರಾಜ್ಯ 3ನೇ ಸ್ಥಾನ ಪಡೆದಿದೆ.
ಇಡೀ ದೇಶದಲ್ಲಿ ವಯಸ್ಕರಿಗೆ 2ನೇ ಡೋಸ್ ನೀಡಿಕೆಯಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ ಅಂತ ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr K Sudhakar) ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡಿರುವ ಸಚಿವರು, ರಾಜ್ಯದಲ್ಲಿ ವಯಸ್ಕರ ಪೈಕಿ ಶೇ.80 ಮಂದಿಗೆ ಎರಡೂ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಡೋಸ್ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಅಂತ ತಿಳಿಸಿದ್ದಾರೆ.
8️⃣0️⃣% of adult population in Karnataka is now fully vaccinated with both doses!
Karnataka stands 3️⃣rd in the country for second dose coverage among large states.#COVID19 #Omicron #vaccination @BSBommai @mansukhmandviya @narendramodi
— Dr Sudhakar K (@mla_sudhakar) January 6, 2022
ವಿದೇಶಗಳಿಂದ ಬಂದವರಿಗೆ ಕೊರೊನಾ ಪಾಸಿಟಿವ್ ದೇವನಹಳ್ಳಿ: ವಿದೇಶಗಳಿಂದ ಕೆಐಎಬಿಗೆ ಬಂದಿದ್ದ 6 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇಂಗ್ಲೆಂಡ್‌ನಿಂದ ಬಂದಿದ್ದ ಐವರು, ದುಬೈನಿಂದ ಬಂದಿದ್ದ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ. ಏರ್‌ಪೋರ್ಟ್‌ನಲ್ಲಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಸೋಂಕಿತರಿಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ
ಹನಿಟ್ರ್ಯಾಪ್ ಮಾಡಿ ಯುವಕರನ್ನ ಐಸಿಸ್ಗೆ ಸೇರಿಸಿದ್ದ ದೀಪ್ತಿ ಮಾರ್ಲ, ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಯಲು
Published On - 10:10 am, Thu, 6 January 22