Cheteshwar Pujara: ಸುದ್ದಿಗೋಷ್ಠಿಯಲ್ಲಿ ಪೂಜಾರ ಕೊಟ್ಟ ಪೆಟ್ಟಿಗೆ ಬಾಯಿ ಮುಚ್ಚಿದ ಟೀಕಾಕಾರರು: ಅಷ್ಟಕ್ಕೂ ಹೇಳಿದ್ದೇನು?
South Africa vs India: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ನ ಮೂರನೇ ದಿನದಾಟ ಮುಗಿದ ಬಳಿಕ ಮಾತನಾಡಿದ ಚೇತೇಶ್ವರ್ ಪೂಜಾರ, ನನಗೆ ಮತ್ತು ಅಜಿಂಕ್ಯಾ ರಹಾನೆಗೆ ಫಾರ್ಮ್ ಎಂಬುದು ತಾತ್ಕಾಲಿಕ ಅನುಭವ ಎಂಬುದು ಶಾಶ್ವತ ಎಂದು ಹೇಳಿದ್ದಾರೆ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯದ ಫಲಿತಾಂಶ ಇಂದು ಹೊರಬೀಳಲಿದೆ. ಹರಿಣಗಳ ಗೆಲುವಿಗೆ 122 ರನ್ಗಳ ಅವಶ್ಯಕತೆಯಿದ್ದರೆ ಇತ್ತ ಟೀಮ್ ಇಂಡಿಯಾ ಗೆಲ್ಲಬೇಕಾದರೆ ಆಫ್ರಿಕಾದ 8 ವಿಕೆಟ್ ಕಬಳಿಸಲೇ ಬೇಕಿದೆ. ಹೀಗಾಗಿ ನಾಲ್ಕನೇ ದಿನದಾಟದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮೂರನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಟೀಕಾಕಾರರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಸತತ ಕಳಪೆ ಆಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡಕ್ಕೆ ಆಧಾರವಾದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 3ನೇ ವಿಕೆಟಿಗೆ 144 ಎಸೆತಗಳಿಂದ 111 ರನ್ ಪೇರಿಸಿದರು. ದಿನದಾಟ ಮುಗಿದ ಬಳಿಕ ಮಾತನಾಡಿದ ಪೂಜಾರ, ನನಗೆ ಮತ್ತು ರಹಾನೆಗೆ ಫಾರ್ಮ್ ಎಂಬುದು ತಾತ್ಕಾಲಿಕ, ಅನುಭವ ಎಂಬುದು ಶಾಶ್ವತ ಎಂದು ಹೇಳಿದ್ದಾರೆ. “ನಾನು ಮತ್ತು ರಹಾನೆ ಆತ್ಮವಿಶ್ವಾಸವುಳ್ಳ ಆಟಗಾರರು. ನಾವಿಬ್ಬರು ಒಂದು ಪಂದ್ಯಕ್ಕಾಗಿ ಸಾಕಷ್ಟು ಶ್ರಮವಹಿಸುತ್ತೇವೆ. ಈ ಹಿಂದೆ ತಂಡಕ್ಕೆ ಆಧಾರವಾಗಿದ್ದೇವೆ. ಮ್ಯಾನೇಜ್ಮೆಂಟ್ ನಮ್ಮ ಮೇಲೆ ನಂಬಿಕೆ ಇಟ್ಟಿದೆ,” ಎಂದು ಹೇಳಿದ್ದಾರೆ.
Pro Kabaddi: ಪ್ರೊ ಕಬಡ್ಡಿಯಲ್ಲಿ ಮತ್ತೊಂದು ರೋಚಕ ಕದನ: 36-35 ಅಂಕಗಳಿಂದ ಗೆದ್ದ ದಬಂಗ್ ಡೆಲ್ಲಿ
South Africa vs India: ಇಂದೇ ನಿರ್ಧಾರವಾಗಲಿದೆ 2ನೇ ಟೆಸ್ಟ್ ಭವಿಷ್ಯ: ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ
(Cheteshwar Pujara said after south africa vs india second test day 3 form is temporary but class is permanent)