ಆಪರೇಷನ್ ಹಸ್ತಕ್ಕೆ ಮತ್ತೊಬ್ಬ ಕಾಂಗ್ರೆಸ್​ ಶಾಸಕನ ವಿರೋಧ: ರಾಜಕೀಯ ನಿವೃತ್ತಿಗೆ ಮುಂದಾದ ತನ್ವೀರ್ ಸೇಠ್

| Updated By: Rakesh Nayak Manchi

Updated on: Aug 22, 2023 | 9:47 AM

ಕರ್ನಾಟಕದಲ್ಲಿ ಆಪರೇಷನ್ ಹಸ್ತ ಆರಂಭಗೊಂಡಿದ್ದು, ನಿನ್ನೆಯಷ್ಟೇ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್ ಅವರ ಬೆಂಬಲಿಗರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಲಾಗಿತ್ತು. ಈ ನಡುವೆ ಆಪರೇಷನ್ ಹಸ್ತಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಶಿರಸಿ ಶಾಸಕರ ನಂತರ ಇದೀಗ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆಪರೇಷನ್ ಹಸ್ತಕ್ಕೆ ಮತ್ತೊಬ್ಬ ಕಾಂಗ್ರೆಸ್​ ಶಾಸಕನ ವಿರೋಧ: ರಾಜಕೀಯ ನಿವೃತ್ತಿಗೆ ಮುಂದಾದ ತನ್ವೀರ್ ಸೇಠ್
ಆಪರೇಷನ್ ಹಸ್ತಕ್ಕೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಿರೋಧ
Follow us on

ಮೈಸೂರು, ಆಗಸ್ಟ್ 22: ಕರ್ನಾಟಕದಲ್ಲಿ ಆಪರೇಷನ್ ಹಸ್ತ ಆರಂಭಗೊಂಡಿದ್ದು, ನಿನ್ನೆಯಷ್ಟೇ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್ ಅವರ ಬೆಂಬಲಿಗರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಲಾಗಿತ್ತು. ಈ ನಡುವೆ ಆಪರೇಷನ್ ಹಸ್ತಕ್ಕೆ (Operation Hasta) ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ್ ನಂತರ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ (Tanveer Sait) ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಈಗಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಯಾವುದೂ ಸರಿಯಿಲ್ಲ. ಹೀಗಾಗಿಯೇ ನಾನು ರಾಜಕೀಯ ನಿವೃತ್ತಿಗೆ ಮುಂದಾಗಿದ್ದೇನೆ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಬಗ್ಗೆ ಶಾಸಕ ತನ್ವೀರ್​ ಸೇಠ್​ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆಂಬ ವಿಚಾರಕ್ಕೆ ಆಕ್ರೋಶ ಹೊರಹಾಕಿದ ತನ್ವೀರ್​ ಸೇಠ್, ಪಕ್ಷಾಂತರ ಮಾಡುವವರ ವಿರುದ್ಧ ಎಷ್ಟೇ ಕಾನೂನು ಬಿಗಿ ಮಾಡಿದರೂ ರಾಜೀನಾಮೆ ನೀಡಿ ಚುನಾವಣೆಗೆ ಹೋಗುವವರಿಗೆ ಏನು ಮಾಡಲಾಗುತ್ತಿಲ್ಲ ಎಂದರು. ಅಲ್ಲದೆ, ನಾವು ಯಾವುದೇ ಆಪರೇಷನ್​​ಗೆ ಕೈ ಹಾಕುವುದಿಲ್ಲ. ನಾವು ಆಪರೇಷನ್​ ಹಸ್ತ ಮಾಡಲ್ಲ, ನಮಗೆ ಅದರ ಅವಶ್ಯಕತೆ ಇಲ್ಲ. ಜನರು ಬದಲಾವಣೆ ಬಯಸಿ ನಮಗೆ 135 ಸ್ಥಾನ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: BJP Core Committee Meeting: ಕಾಂಗ್ರೆಸ್​​ನ ಆಪರೇಷನ್ ಹಸ್ತಕ್ಕೆ ಪರ್ಯಾಯವಾಗಿ ಮಹತ್ವದ ನಿರ್ಧಾರ ಕೈಗೊಂಡ ಬಿಜೆಪಿ

ಎಸ್​ಟಿ ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಮಾತನಾಡಿದ ತನ್ವೀರ್ ಸೇಠ್, ಅವರು ಕ್ಷೇತ್ರದ ಕೆಲಸದ ವಿಚಾರಕ್ಕೆ ಭೇಟಿಯಾಗಿದ್ದಾರೆ. ಪಕ್ಷ ಸೇರುವ ಉಹಾಪೋಹದ ವಿಚಾರಕ್ಕೆ ಸೋಮಶೇಖರ್ ಅವರೇ ಉತ್ತರ ಕೊಡಬೇಕು ಎಂದರು.

ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ಬರುವ ವಿಚಾರವಾಗಿ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಶಾಸಕ, ನಾವು ಯಾರಿಗೂ ಆಹ್ವಾನ ಕೊಟ್ಟಿಲ್ಲ. ಪಕ್ಷಕ್ಕೆ ಬರುವವರು ನಮ್ಮ ಬಳಿ ಮಾತನಾಡಿಲ್ಲ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದರು. 15 ಹಾಲಿ, ಮಾಜಿ ಶಾಸಕರು ಪಕ್ಷಕ್ಕೆ ಬರುವ ವಿಚಾರವಾಗಿ ನೀಡಿದ ಹೇಳಿಕೆ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರೇ ಉತ್ತರಿಸಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Tue, 22 August 23