ಇಂದೇ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಮುಂಭಾಗ ಬಂದಿಳಿದ ಚಂದ್ರಯಾನ ಉಪಗ್ರಹ! ಭಲೇ ವಿದ್ಯಾರ್ಥಿಗಳೇ!
ಚಂದ್ರಯಾನ 3 ಯಶಸ್ವಿಯಾಗಲೆಂದು ವಿದ್ಯಾರ್ಥಿಗಳು ಇಂದು ಸೋಮವಾರ ಶ್ರೀಕಂಠೇಶ್ವರನಿಗೆ ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ದಕ್ಷಿಣಕಾಶಿ ನಂಜನಗೂಡಿನಲ್ಲಿ ದೇಗುಲದ ಮುಂಭಾಗದಲ್ಲಿ ತ್ರಿ ಡಿ ಎಫೆಕ್ಟ್ ಚಿತ್ರ ಬಿಡಿಸಿದ್ದಾರೆ. ನಂಜನಗೂಡಿನ A9 ಆರ್ಟ್ ಸ್ಟುಡಿಯೋ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಚಂದ್ರಯಾನದ ಉಪಗ್ರಹ ಶ್ರೀಕಂಠೇಶ್ವರನ ದೇಗುಲದ ಮುಂಭಾಗದಲ್ಲಿ ಬಂದಿಳಿದ ಮಾದರಿಯಲ್ಲಿ ತ್ರಿ ಡಿ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.
ಮೈಸೂರು, ಆಗಸ್ಟ್ 21: ಎಲ್ಲವೂ ಅಂದುಕೊಂಡಂತೆ ಸರಿಯಾಗಿ ಮತ್ತು ಯೋಜಿಸಿದಂತೆ ನಡೆದರೆ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈನಲ್ಲಿ ನಾಳಿದ್ದು (ಆಗಸ್ಟ್ 23 ಬುಧವಾರ) ಇಳಿಯುತ್ತದೆ. ಭಾರತದ ಮೂರನೇ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ವಿಕ್ರಮ್ ಲ್ಯಾಂಡರ್ ಎಲ್ಲಾ ಸಂವೇದಕಗಳು ಮತ್ತು ಅದರ ಎರಡು ಎಂಜಿನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೂ ಸಹ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಈಗಾಗಲೇ ಹೇಳಿದ್ದಾರೆ. ಇದರಿಂದ ಭಾರತದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಇಸ್ರೋ ಸಂಸ್ಥೆಯ ತವರು ಕರ್ನಾಟಕದಲ್ಲೂ ಶಾಲಾ ಮಕ್ಕಳು (Students) ಸೇರಿದಂತೆ ಎಲ್ಲರೂ ಹೆಚ್ಚು ಕೌತುಕದಿಂದ ಕಾಯುತ್ತಿದ್ದು, ಸಂಭ್ರಮದ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಮಧ್ಯೆ, ಚಂದ್ರಯಾನ 3 ಯಶಸ್ವಿಯಾಗಲೆಂದು ವಿದ್ಯಾರ್ಥಿಗಳು ಇಂದು ಸೋಮವಾರ ಶ್ರೀಕಂಠೇಶ್ವರನಿಗೆ ( Nanjangud Srikanteshwara) ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ದಕ್ಷಿಣಕಾಶಿ ನಂಜನಗೂಡಿನಲ್ಲಿ ದೇಗುಲದ ಮುಂಭಾಗದಲ್ಲಿ ತ್ರಿ ಡಿ ಎಫೆಕ್ಟ್ ಚಿತ್ರ ಬಿಡಿಸಿದ್ದಾರೆ. ನಂಜನಗೂಡಿನ A9 ಆರ್ಟ್ ಸ್ಟುಡಿಯೋ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಚಂದ್ರಯಾನದ ಉಪಗ್ರಹ (ಬಾಹ್ಯಾಕಾಶ ನೌಕೆ) ಶ್ರೀಕಂಠೇಶ್ವರನ ದೇಗುಲದ ಮುಂಭಾಗದಲ್ಲಿ ಬಂದಿಳಿದ ಮಾದರಿಯಲ್ಲಿ ತ್ರಿ ಡಿ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಚಂದ್ರಯಾನ-3 ರ (Chandrayaan-3) ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ (Vikram lander module) ಜುಲೈ 14 ರಂದು ಭೂಮಿಯಿಂದ ಹಾರಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
