AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಮೈಸೂರು ರಸ್ತೆ ಎಕ್ಸಪ್ರೆಸ್​ ವೇ ಅಲ್ಲ ಪ್ರವೇಶ ನಿಯಂತ್ರಿತ ಹೆದ್ದಾರಿ: ಎನ್​ಹೆಚ್​ಎಐ

ಬೆಂಗಳೂರು-ಮೈಸೂರು 100 ಕಿಮೀ ವೇಗದ ಮಿತಿ ಇರುವ ರಾಷ್ಟ್ರೀಯ ಹೆದ್ದಾರಿ ಹೊರತು ಸದ್ಯ ಬಿಂಬಿತವಾಗಿರುವ 120 ಕಿಮೀ ವೇಗದಲ್ಲಿ ವಾಹನ ಓಡಿಸುವ ಎಕ್ಸಪ್ರೆಸ್​ ವೇ ಅಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಬೆಂಗಳೂರು-ಮೈಸೂರು ರಸ್ತೆ ಎಕ್ಸಪ್ರೆಸ್​ ವೇ ಅಲ್ಲ ಪ್ರವೇಶ ನಿಯಂತ್ರಿತ ಹೆದ್ದಾರಿ: ಎನ್​ಹೆಚ್​ಎಐ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ
ವಿವೇಕ ಬಿರಾದಾರ
|

Updated on:Aug 04, 2023 | 11:21 AM

Share

ಬೆಂಗಳೂರು: ಬೆಂಗಳೂರು-ಮೈಸೂರು  ರಸ್ತೆ 100 ಕಿಮೀ ವೇಗದ ಮಿತಿ ಇರುವ ರಾಷ್ಟ್ರೀಯ ಹೆದ್ದಾರಿ ಹೊರತು ಸದ್ಯ ಬಿಂಬಿತವಾಗಿರುವ 120 ಕಿಮೀ ವೇಗದಲ್ಲಿ ವಾಹನ ಓಡಿಸುವ ಎಕ್ಸಪ್ರೆಸ್​ ವೇ ಅಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI ) ಸ್ಪಷ್ಟಪಡಿಸಿದೆ. ಅಗಸ್ಟ್​ 1 ರಿಂದ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ಮೋಟಾರು ರಹಿತ ವಾಹನಗಳಿಗೆ ನಿರ್ಬಂಧಿಸಿದ್ದನ್ನು ಪ್ರಯಾಣಿಕರು ಪ್ರಶ್ನಿಸಿದ ನಂತರ ಎನ್​ಹೆಚ್​ಎಐ ಈ ಸ್ಪಷ್ಟೀಕರಣ ನೀಡಿದೆ.

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಗರಿಷ್ಠ ವೇಗದ ಮಿತಿ 100 ಕಿಮೀ ಆಗಿದೆ. ದೇಶದ ಇತರ ಕಡೆಗಳಲ್ಲಿ ಇರುವ ಎಕ್ಸ್​ಪ್ರೆಸ್​​ವೇಯಂತೆ ಇದು ಕೂಡ ಎಂದು ಜನರು ಗೊಂದಲ ಮಾಡಿಕೊಂಡು ಗರಿಷ್ಠ ವೇಗದ ಮಿತಿ ಗಂಟೆಗೆ 120 ಕಿಮೀ ಇದೆ ಎಂದು ಭಾವಿಸಿದ್ದಾರೆ. ನಮ್ಮ ಅಧಿಸೂಚನೆಗಳು ಇದು ಪ್ರವೇಶ ನಿಯಂತ್ರಿತ ಹೆದ್ದಾರಿ ಹೊರತು ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಸ್ಪಷ್ಟವಾಗಿ ಹೇಳುತ್ತವೆ. ಹೆದ್ದಾರಿಯನ್ನು 100 ಕಿಮೀ ಗರಿಷ್ಠ ವೇಗ ಮಿತಿಗಾಗಿ ವಿನ್ಯಾಸಗೊಳಿಸಲಾಗಿದೆ, 120 ಕಿಮೀ ಅಲ್ಲ. ಮೂಲಸೌಕರ್ಯವು ಎಕ್ಸ್‌ಪ್ರೆಸ್‌ವೇಯಂತೆ ಕಾಣುವುದರಿಂದ, ಜನರು ಇದನ್ನು ಎಕ್ಸ್‌ಪ್ರೆಸ್‌ವೇ ಎಂದು ಕರೆಯುತ್ತಿರಬಹುದು ಎಂದು ಎನ್​ಹೆಚ್​ಎಐ ಪ್ರಾದೇಶಿಕ ಅಧಿಕಾರಿ ವಿವೇಕ್​ ಜೈಸ್ವಾಲ್​ ಸ್ಪಷ್ಟನೆ ನೀಡಿದ್ದಾರೆ.

ಆಟೋಗಳು, ಬೈಕ್‌ಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳ ವೇಗದ ಮಿತಿಯು 80 ಗಂಟೆಗೆ ಕಿಮೀ ಇರುತ್ತದೆ. ಹೀಗಾಗಿ ಹೆದ್ದಾರಿಯಲ್ಲಿ ನಿರ್ಭಂದಿಸಲಾಗಿದೆ. ಹೆದ್ದಾರಿ ಉದ್ಘಾಟನೆ ಒಂದು ದಿನ ಮೊದಲು ಪ್ರಧಾನಿಯವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಫೋಸ್ಟ್​್ ಮಾಡಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕೂಡ ಯೋಜನೆಯ ಪ್ರಗತಿಯ ಬಗ್ಗೆ ನವೀಕರಿಸುವಾಗ ಮತ್ತು ಅದರ ವೈಶಿಷ್ಟ್ಯಗಳ ವಿವರಗಳನ್ನು ಹಂಚಿಕೊಳ್ಳುವಾಗ ಎಕ್ಸ್‌ಪ್ರೆಸ್‌ವೇ ಎಂದು ಕರೆದಿದ್ದರು.

ಇದನ್ನೂ ಓದಿ: NHAI ಅಧಿಕಾರಿಗಳ ನಿರ್ಲಕ್ಷ್ಯ, ಬೆಂಗಳೂರು-ಮೈಸೂರು ಹೆದ್ದಾರಿಗೆ ಅವಳಡಿಸಿದ್ದ ಎಎನ್​ಪಿಆರ್ ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್

ರಸ್ತೆ ಉದ್ಘಾಟನೆಗೂ ಮುನ್ನ ರಾಜ್ಯದಲ್ಲಿನ ಬಿಜೆಪಿ ಸರ್ಕಾರವು ಪ್ರಕಟಿಸಿದ ಜಾಹೀರಾತುಗಳಲ್ಲಿ ಇದು ಎಕ್ಸ್‌ಪ್ರೆಸ್‌ವೇ ಎಂದು ಉಲ್ಲೇಖಿಸಲಾಗಿದೆ. ರಸ್ತೆಯಲ್ಲಿ ವೇಗವಾಗಿ ಚಲಿಸುವವರಿಗೆ ದಂಡ ವಿಧಿಸಲು ಪೊಲೀಸರು AI ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಅಲ್ಲದೇ ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಹೊಸ ಆರು ಪಥಗಳ ಬೆಂಗಳೂರುಮೈಸೂರು ರಸ್ತೆ ಎಕ್ಸ್‌ಪ್ರೆಸ್‌ವೇ ಅಲ್ಲ. ಇದು ಪ್ರವೇಶ-ನಿಯಂತ್ರಿತ NH-275 ಮತ್ತು NHAI ನಿಂದ ನಿರ್ವಹಿಸಲ್ಪಡುತ್ತದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Fri, 4 August 23

ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಮಾಂಗಲ್ಯ ಭಾಗ್ಯದ ಅರ್ಥವೇನು, ಸ್ತ್ರೀಯರಿಗೆ ಇದು ಶ್ರೀರಕ್ಷೆ ಹೇಗೆ?
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಈ ರಾಶಿಯವರು ಇಂದು ಸ್ವಂತ ಉದ್ಯೋಗದಲ್ಲಿ ಅಧಿಕ ಲಾಭ ಪಡೆಯುವರು
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ: ನಟಿ ರಮ್ಯಾ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ