Mysore News: ಬೈಕ್​ಗೆ ಗೂಡ್ಸ್​​ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವು

|

Updated on: Jun 01, 2023 | 9:45 AM

ಅಪಘಾತಗಳನ್ನ ತಡೆಯಲು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ತಡೆಯಲಾಗುತ್ತಿಲ್ಲ. ಅದರಂತೆ ಹುಣಸೂರು ತಾಲೂಕಿನ ಬಿಳಿಗೆರೆಗಾಯ ಬಳಿ ಬೈಕ್​ಗೆ ಗೂಡ್ಸ್​​ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

Mysore News: ಬೈಕ್​ಗೆ ಗೂಡ್ಸ್​​ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವು
ಅಪಘಾತ
Follow us on

ಮೈಸೂರು: ಅಪಘಾತಗಳನ್ನ ತಡೆಯಲು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ತಡೆಯಲಾಗುತ್ತಿಲ್ಲ. ಅದರಂತೆ ಹುಣಸೂರು (Hunsur) ತಾಲೂಕಿನ ಬಿಳಿಗೆರೆಗಾಯ ಬಳಿ ಬೈಕ್​ಗೆ ಗೂಡ್ಸ್​​ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಹೇಬ್(24) ಮೃತ ವ್ಯಕ್ತಿ. ಇನ್ನು ಹಿಂಬದಿ ಸವಾರ ಜುನೇದ್‌ಗೆ ಗಾಯಗಳಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರ್ನಿಚರ್​ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಫರ್ನಿಚರ್​ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಅಜೀಂ ಎಂಬುವರಿಗೆ ಸೇರಿದ ಸಂಗಮ್ ಡೆಕೋರೇಷನ್​ & ಫರ್ನಿಚರ್​ ಅಂಗಡಿ ಇದಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ. ಈ ಕುರಿತು ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಕಾರು ಟಿಟಿ ವಾಹನ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

ಡಿವೈಡರ್​ಗೆ ಮಿನಿ ಲಾರಿ ಡಿಕ್ಕಿ, ತಾಯಿ-ಮಗ ಸ್ಥಳದಲ್ಲೇ ಸಾವು

ಕೊಪ್ಪಳ: ತಾಲೂಕಿನ ಮಂಗಳಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಡಿವೈಡರ್​ಗೆ ಮಿನಿ ಲಾರಿ ಡಿಕ್ಕಿಯಾಗಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳಾದ ರೇಣುಕಮ್ಮ(50), ಪ್ರಭು(25) ಮೃತರು. ಇನ್ನುಳಿದ 6 ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಬೆಂಗಳೂರು: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದ ನೀಲಾದ್ರಿ ಬಳಿ ನಡೆದಿದೆ. ಟ್ವೀನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಹಿಂಭಾಗದಲ್ಲಿರುವ ಕಲ್ಲಿನ ಕ್ವಾರೆಯಲ್ಲಿ ಈಜಲು ಹೋಗಿದ್ದ ಇಬ್ಬರೂ ಬಾಲಕರು, ನಿನ್ನೆ(ಮೇ.30) ಸಂಜೆ ಈಜಲು ಹೋಗಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದ್ದು, ಕಿರಣ್ ಮತ್ತು ಫೈಜಲ್ ಇಬ್ಬರು 13 ವರ್ಷದ ಬಾಲಕರು ಮೃತಪಟ್ಟಿದ್ದಾರೆ. ಇನ್ನು ನಿನ್ನೆಯಿಂದ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ಹುಡುಕುತ್ತಿದ್ದು ಇನ್ನು ಪತ್ತೆಯಾಗಿಲ್ಲ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ