ಮೈಸೂರು: ನಕಲಿ ಸಿಗರೇಟ್, ಹನ್ಸ್ ಉತ್ಪನ್ನಗಳ ದಾಸ್ತನು ಮೇಲೆ ಸಿಸಿಬಿ ಪೊಲೀಸರ ದಾಳಿ; ನಾಲ್ವರು ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2024 | 8:27 PM

ನಕಲಿ ದಂಧೆಕೋರರ ಹಾವಳಿ ಮೀತಿಮೀರಿದ್ದು, ಇಂದು(ಶನಿವಾರ) ಸಾಂಸ್ಕೃತೀಕ ನಗರಿ ಮೈಸೂರಿನಲ್ಲಿ ನಕಲಿ ಸಿಗರೇಟ್ ಮತ್ತು ಹನ್ಸ್ ಉತ್ಪನ್ನಗಳ ದಾಸ್ತನು ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಬರೋಬ್ಬರಿ 70 ಲಕ್ಷ ಮೌಲ್ಯದ ಐಟಿಸಿ ಕಂಪನಿಯ ನಕಲಿ ಸಿಗರೇಟ್ ಹಾಗೂ ಹನ್ಸ್ ವಶಕ್ಕೆ‌ ಪಡೆದಿದ್ದಾರೆ.

ಮೈಸೂರು, ಜು.27: ನಕಲಿ ದಂಧೆಕೋರರ ಹಾವಳಿ ಮೀತಿಮೀರಿದ್ದು, ಈ ಕುರಿತು ಎಷ್ಟೇ ಕಠಿಣ ಕ್ರಮಕೈಗೊಂಡರು ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ನಕಲಿ ಸಿಗರೇಟ್ ಮತ್ತು ಹನ್ಸ್ ಉತ್ಪನ್ನಗಳ ದಾಸ್ತನು ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಬರೋಬ್ಬರಿ 70 ಲಕ್ಷ ಮೌಲ್ಯದ ಐಟಿಸಿ ಕಂಪನಿಯ ನಕಲಿ ಸಿಗರೇಟ್ ಹಾಗೂ ಹನ್ಸ್ ವಶಕ್ಕೆ‌ ಪಡೆದಿದ್ದಾರೆ. ಹೌದು, ಮೈಸೂರು(Mysore) ನಗರದ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ವರ ಆರೋಪಿಗಳು ವಶಕ್ಕೆ

ಇಟ್ಟಿಗೆಗೂಡಿನ ಅರುಣಾಚಲಂ ಸ್ಟ್ರೀಟ್​ನಲ್ಲಿರುವ ಮನೆಯೊಂದರಲ್ಲಿ ನಕಲಿ ಸಿಗರೇಟ್ ಸಂಗ್ರಹಿಸಿದ್ದರು. ಈ ಹಿನ್ನಲೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಆತನ ಮಾಹಿತಿ ಮೇರೆಗೆ ನಂಜನಗೂಡಿನ ರಿಂಗ್ ರಸ್ತೆಯ ಕೋಟೆಹುಂಡಿ ಫ್ಯಾಕ್ಟರಿ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ತಂಬಾಕು ಹಾಗೂ ನಕಲಿ ಉತ್ಪನ್ನಗಳ ಪರಿಕಾರಗಳನ್ನ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ಸಂಬಂಧ ನಾಲ್ವರ ಆರೋಪಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ನಕಲಿ ಕ್ಯಾನ್ಸರ್ ಔಷಧಿ ಮಾರಾಟ; ಭಾರತೀಯ ಮೂಲದ ವ್ಯಕ್ತಿಯ ಬಂಧನ

ರಭಸದಿಂದ ಹರಿಯುತ್ತಿರುವ ನದಿಯಲ್ಲಿ ಯುವಕರ ಹುಚ್ಚಾಟ

ಮೈಸೂರು: ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಯುವಕರ ಹುಚ್ಚು ಸಾಹಸ ಹೆಚ್ಚುತ್ತಿದೆ. ಟಿ ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಸೇತುವೆಯಿಂದ ತುಂಬಿ ಹರಿಯುತ್ತಿರುವ ನದಿಗೆ ಡೈವ್ ಹೊಡೆದು ಪುಂಡಾಟ ಮೆರೆಯುತ್ತಿದ್ದಾರೆ.
ಜಲಾಶಯಗಳು ತುಂಬುತ್ತಿದ್ದಂತೆಯೇ ನದಿಗಳು ಕೂಡ ತುಂಬಿ ಹರಿಯುತ್ತಿದೆ. ಯುವಕರ ಹುಚ್ಚು ಸಾಹಸದಿಂದ ಅನಾಹುತ ಸಂಭವಿಸುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sat, 27 July 24

Follow us on