ಮೈಸೂರು: ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹತ್ವವೇನು? ಪ್ರಧಾನ ಅರ್ಚಕರು ವಿವರಿಸಿದ್ದಾರೆ ನೋಡಿ
ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲಿಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವದ ಸಂಭ್ರಮ. ಉತ್ಸವದ ಸಂಭ್ರಮ ಕಣ್ತುಂಬಿಸಿಕೊಳ್ಳಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಿದ್ದಾರೆ. ಮತ್ತೊಂದೆಡೆ, ಸಿಂಗಾರಗೊಂಡಿರುವ ಚಾಮುಂಡಿ ಬೆಟ್ಟ ಝಗಮಗಿಸುತ್ತಿದೆ. ಈ ಹೊತ್ತಿನಲ್ಲಿ ವರ್ಧಂತಿ ಉತ್ಸವದ ಮಹತ್ವದ ಬಗ್ಗೆ ದೇಗುಲದ ಪ್ರಧಾನ ಅರ್ಚಕ ಡಾ ಎನ್ ಶಶಿಶೇಖರ ದೀಕ್ಷಿತ್ ಮಾಹಿತಿ ನೀಡಿದ್ದು, ವಿಡಿಯೋ ಇಲ್ಲಿದೆ.
ಮೈಸೂರು, ಜುಲೈ 27: ‘‘ಚಾಮುಂಡೇಶ್ವರಿ ದೇವಿಯ ಹುಟ್ಟುಹಬ್ಬದ ಉತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ. ಇದನ್ನು ಸಂಸ್ಕೃತದಲ್ಲಿ ವರ್ಧಂತಿ ಎಂದು ಕರೆಯುತ್ತೇವೆ. ಆಷಾಢ ಮಾಸದ ಕೃಷ್ಣಪಕ್ಷ ರೇವತಿ ನಕ್ಷತ್ರದಂದು ಇಲ್ಲಿ ಚಾಮುಂಡೇಶ್ವರಿ ದೇವಿಯ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ಇದು ಇಲ್ಲಿನ ವಿಶೇಷ ಉತ್ಸವ’’ ಎಂದು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಡಾ ಎನ್ ಶಶಿಶೇಖರ ದೀಕ್ಷಿತ್ ತಿಳಿಸಿದರು. ಉತ್ಸವದ ಶುಭ ಸಂದರ್ಭದಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಉತ್ಸವದ ಮಹತ್ವ ಏನು ಎಂಬುದನ್ನು ವಿವರಿಸಿದ್ದಾರೆ.
ಉತ್ಸವದ ಪ್ರಯುಕ್ತ ಬೆಳಗ್ಗೆ 4.30ರಿಂದಲೇ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಭ್ಯಂಜನ ಸ್ನಾನ ಮಾಡಲಾಗಿದೆ. ನಾವು ಮಕ್ಕಳಿಗೆ ಯಾವ ರೀತಿ ಎಣ್ಣೆ ಸ್ನಾನ ಮಾಡಿಸುತ್ತೇವೆಯೋ ಅದೇ ರೀತಿ ದೇವಿಗೆ ಅಭ್ಯಂಜನ ಸ್ನಾನ ಮಾಡಿಸಲಾಗಿದೆ. ಇದು ಇಂದಿನ ವಿಶೇಷ. ಬೆಳಗ್ಗೆ 8.30ರಿಂದಲೇ ದೇಗುಲದಲ್ಲಿ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10.30ಕ್ಕೆ ರಾಜವಂಶದವರು ಬಂದು ಉತ್ಸವಕ್ಕೆ ಚಾಲನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಉತ್ಸವದ ಬಗ್ಗೆ ಅವರು ನೀಡಿರುವ ಇನ್ನಷ್ಟು ಮಾಹಿತಿ ಮೇಲಿನ ವಿಡಿಯೋದಲ್ಲಿದೆ.
ವರ್ಧಂತಿ ಉತ್ಸವದ ಸಂಭ್ರಮದಲ್ಲಿ ಚಾಮುಂಡೇಶ್ವರಿ ದೇಗುಲ: ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಚಾಮುಂಡೇಶ್ವರಿ ದೇಗುಲದಲ್ಲಿ ಆಷಾಢ ಶುಕ್ರವಾರಗಳ ವಿಶೇಷ ಪೂಜೆ ಹಾಗೂ ದೇವಿಯ ವರ್ಧಂತಿ ಉತ್ಸವ ನಡೆಯುತ್ತಿದೆ. ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಬೆಳಗ್ಗೆ 8.30ರಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅಭ್ಯಂಜನ ಸ್ನಾನ, ರುದ್ರಾಭಿಷೇಕ, ಪಂಚಾಮೃತಭಿಷೇಕ, ಕುಂಕುಮಾರ್ಚನೆ ಸೇವೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ