ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್

ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್

ಕಿರಣ್ ಹನುಮಂತ್​ ಮಾದಾರ್
|

Updated on: Jul 27, 2024 | 4:05 PM

ಬೆಂಗಳೂರಿಗೆ ನಾಯಿ (dog) ಮಾಂಸ ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ‘ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್​ (Abdul Razack) ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು, ಜು.27: ಬೇರೆ ರಾಜ್ಯದಿಂದ ಬೆಂಗಳೂರಿಗೆ ನಾಯಿ (d0g) ಮಾಂಸ ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್​ (Abdul Razack) ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಲೈಸೆನ್ಸ್ ಇಲ್ಲದ ಹಿನ್ನಲೆ ಅವರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಸದ್ಯ 12 ಜನರಿಗೆ ಮಾಂಸ ಮಾರಾಟದ ಲೈಸೆನ್ಸ್ ಕೊಟ್ಟಿದ್ದೇವೆ. ಅವರನ್ನ ಭೇಟಿ ನೀಡಿ ಮಾಹಿತಿ ನೀಡೋಕೆ ಹೇಳಿದ್ದೇವೆ. ಒಂದು ವೇಳೆ ಇಂದು ಆ 12 ಜನ ಹಾಜರಾಗದಿದ್ರೆ ನೋಟಿಸ್ ಕೊಡುತ್ತೇವೆ. ಸದ್ಯ ಮೇಲ್ನೋಟಕ್ಕೆ ನಾಯಿ ಮಾಂಸ ಎಂದು ಕಂಡುಬಂದಿಲ್ಲ. ಸ್ಯಾಂಪಲ್​ಗಳನ್ನ ಲ್ಯಾಬ್​ಗೆ ಕಳಿಸಿದ್ದೇವೆ. ರಿಪೋರ್ಟ್ ಬಂದ ಮೇಲೆ ಖಂಡಿತ ಕ್ರಮ ಆಗುತ್ತದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ