Mysore News: ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ

ಮಾಜಿ ಶಾಸಕನ ಪುತ್ರ ಹಾಗೂ ಪತ್ರಕರ್ತನ ಪುತ್ರನ ನಡುವೆ ಗಲಾಟೆ ನಡೆದಿರುವ ಘಟನೆ ಮೈಸೂರಿನ ಖಾಸಗಿ ಹೋಟೆಲ್ ಬಳಿ ನಡೆದಿದೆ.

Mysore News: ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ
ಮಾಜಿ ಶಾಸಕನ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ

Updated on: Jun 26, 2023 | 1:34 PM

ಮೈಸೂರು: ಮಾಜಿ ಶಾಸಕ ಸಾ.ರಾ ಮಹೇಶ್ (SR Mahesh) ಪುತ್ರ ಸಾ.ರಾ ಜಯಂತ್ ಹಾಗೂ ಪತ್ರಕರ್ತ ಟಿ ಗುರುರಾಜ್ ಅವರ ಪುತ್ರನ ನಡುವೆ ಗಲಾಟೆ ನಡೆದಿರುವ ಘಟನೆ ಮೈಸೂರಿನ (Mysore) ಖಾಸಗಿ ಹೋಟೆಲ್ (Hotel) ಬಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇಬ್ಬರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.