ಮೈಸೂರು: ಮೈಸೂರಿನ ಗ್ರಾಹಕರ ಹಕ್ಕುಗಳ ಕಾರ್ಯಕರ್ತ ಶೇಖರ್ ಎಸ್. ಅಯ್ಯರ್ ಅವರು ಇತ್ತೀಚೆಗೆ ಆಸ್ಟ್ರಿಯಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತೆರಳಬೇಕಿದ್ದ ರೈಲು ತಡವಾಗಿ ಬಂದಿದ್ದು ಈ ಸಂಬಂಧ ಆಸ್ಟ್ರಿಯ ರಾಷ್ಟ್ರೀಯ ರೈಲ್ವೆ ಕಂಪನಿಯಿಂದ ಪರಿಹಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಗ್ರಹಕರ ಪರಿಷತ್ತಿನ (ಎಂಜಿಪಿ) ಸಂಚಾಲಕರೂ ಆಗಿರುವ ಅಯ್ಯರ್ ಅವರು ಮತ್ತು ಅವರ ಪತ್ನಿ ಡಿಸೆಂಬರ್ 13 ರಂದು ಆಸ್ಟ್ರಿಯದ ವಿಯೆನ್ನಾದಿಂದ ಇಟಲಿಯ ರೋಮ್‌ಗೆ ಪ್ರಯಾಣ ಬೆಳೆಸಲಿದ್ದ ರೈಲು ಎರಡು ಗಂಟೆಗಳ ಕಾಲ ತಡವಾಗಿತ್ತು. ರೈಲಿಗಾಗಿ ಕಾದು ಕುಳಿತ ಅಯ್ಯರ್ ರೈಲ್ವೆ ಇಲಾಖೆಯ ವಿರುದ್ಧ ಸಿಡಿದೆದಿದ್ದಾರೆ. ರೈಲು ತಡ ಮಾಡಿದಕ್ಕಾಗಿ, ಸಮಯ ಹರಣ ಮಾಡಿದಕ್ಕಾಗಿ ರೈಲ್ವೆ ಇಲಾಖೆಯ ಸೇವೆಯ ವಿರುದ್ಧ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: Train Cancelled: ಮಾರ್ಚ್ 16 ರಂದು ಹಲವು ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಯ್ಯರ್ ಅವರು, ಆಸ್ಟ್ರಿಯ ರಾಷ್ಟ್ರೀಯ ರೈಲ್ವೆ ಕಂಪನಿಯಿಂದ ಪರಿಹಾರವನ್ನು ಪಡೆಯಲು ಮೂರು ಇಮೇಲ್ಗಳು ಮತ್ತು ಒಂದು ತಿಂಗಳು ಕಾಯಬೇಕಾಯ್ತು. ಆದರೆ ಪರಿಹಾರ ಸಿಕ್ತು. ಜನರಿಗೆ ತಮ್ಮ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಇರಬೇಕು. ತಮ್ಮ ಹಕ್ಕುಗಳನ್ನು ಬಳಸಿಕೊಳ್ಳಬೇಕು ಎಂದರು. ಇನ್ನು ಆಸ್ಟ್ರಿಯದ ರಾಷ್ಟ್ರೀಯ ರೈಲ್ವೆ ಕಂಪನಿ – OBB ಯಲ್ಲಿ ಮಧ್ಯಸ್ಥಿಕೆ ಪ್ರಾಧಿಕಾರದ ಬಗ್ಗೆ ವಿಚಾರಿಸಿರುವುದಾಗಿ ಹೇಳಿದರು. ಮಧ್ಯಸ್ಥಿಕೆ ಪ್ರಾಧಿಕಾರಕ್ಕೆ ಇಮೇಲ್ ದೂರನ್ನು ಸಲ್ಲಿಸಿ ಅವರು ಭಾರತಕ್ಕೆ ಮರಳಿದ ನಂತರ ಸುಮಾರು ಒಂದು ತಿಂಗಳ ಬಳಿಕ ಪರಿಹಾರದ ಮೊತ್ತವನ್ನು ಪಡೆದರು.
ಯುರೋಗಳಲ್ಲಿ ನೀಡಲಾದ ಪರಿಹಾರದ ಮೊತ್ತವು ಸುಮಾರು ₹ 11,000 ರೂ ಆಗಿದೆ. ಅಯ್ಯರ್ ಅವರು ಬುಧವಾರ ಮೈಸೂರಿನಲ್ಲಿ ಎಂಜಿಪಿ ಮತ್ತು ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (ಬಿಐಎಂಎಸ್) ಆಯೋಜಿಸಿದ್ದ ವಿಶ್ವ ಗ್ರಾಹಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗಿಯಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:04 am, Thu, 16 March 23