AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HC Mahadevappa: ನಂಜನಗೂಡು ಚುನಾವಣಾ ಕಣದಿಂದ ಹಿಂದೆ ಸರಿದ ಹೆಚ್​​ಸಿ ಮಹದೇವಪ್ಪ; ಧ್ರುವನಾರಾಯಣ್ ಮಗನಿಗೆ ಬೆಂಬಲ

ನಂಜನಗೂಡು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ಮಾಜಿ ಸಚಿವ ಹೆಚ್​​ಸಿ ಮಹದೇವಪ್ಪ ಮೈಸೂರಿನಲ್ಲಿ ‘ಟಿವಿ9’ಗೆ ತಿಳಿಸಿದರು. ನಂಜನಗೂಡಿಗೆ ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ ಅವರೇ ಅಭ್ಯರ್ಥಿ ಆಗಲಿ ಎಂದು ಅವರು ಹೇಳಿದರು.

ಗಣಪತಿ ಶರ್ಮಾ
|

Updated on:Mar 15, 2023 | 7:25 PM

Share

ಮೈಸೂರು: ನಂಜನಗೂಡು (Nanjangud) ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ಮಾಜಿ ಸಚಿವ ಹೆಚ್​​ಸಿ ಮಹದೇವಪ್ಪ (HC Mahadevappa) ಮೈಸೂರಿನಲ್ಲಿ ‘ಟಿವಿ9’ಗೆ ತಿಳಿಸಿದರು. ನಂಜನಗೂಡಿಗೆ ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ (Darshan Dhruvanarayan) ಅವರೇ ಅಭ್ಯರ್ಥಿ ಆಗಲಿ. ನಾನು ನಂಜನಗೂಡು ಅಭ್ಯರ್ಥಿ ಆಗುವುದಿಲ್ಲ. ಧ್ರುವನಾರಾಯಣ್ ಅವರ ಮೃತದೇಹ ನೋಡಿದಾಗಲೇ, ನಾನು ಚುನಾವಣೆಗೆ ನಿಲ್ಲಬಾರದು ಎಂಬ ನಿರ್ಧಾರ ಮಾಡಿದ್ದೆ. ಈ ಕುರಿತು ಇನ್ನೂ ಯಾರ ಜತೆಗೂ ಚರ್ಚಸಿಲ್ಲ ಎಂದು ಅವರು ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ, ಕಾಂಗ್ರೆಸ್​ ದೊಡ್ಡ ಇಕ್ಕಟ್ಟಿನಿಂದ ಪಾರಾದಂತಾಗಿದೆ.

ಧ್ರುವನಾರಾಯಣ್ ತೀರಿಕೊಂಡ ದಿನವೇ ಮಾನಸಿಕವಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೆ. ಆದರೆ, ಈ‌ ನಿರ್ಧಾರವನ್ನು ಪ್ರಕಟ ಮಾಡುವಾಗ ದರ್ಶನ್​ಗೆ ಸಾಂತ್ವನ ಹೇಳಿ ಘೋಷಿಸಬೇಕು ಎಂದುಕೊಂಡಿದ್ದೆ. ಜನರ ಹಿತ ಅಭಿವೃದ್ಧಿ, ಜೀವನ ಮೌಲ್ಯದ ಗೊತ್ತಿಲ್ಲದವರು ಸಾವಿನಲ್ಲೂ ರಾಜಕೀಯ ಮಾಡಿದರು. ಸಾವನ್ನು ಇನ್ನೊಬ್ಬರ ತಲೆಗೆ ಕಟ್ಟುವುದು ಎಲ್ಲಾ ಕಾಲದಲ್ಲೂ ನಡೆದಿದೆ. ಟೀಕೆ ಮಾಡುವವರು ಸಾವಿನಲ್ಲಿ ರಾಜಕೀಯ ಮಾಡಬಾರದು. ಸಾವನ್ನು ಬೇರೆಯವರ ತಲೆಗೆ ಕಟ್ಟದೆ ಅಭಿವೃದ್ಧಿ ಪರ ಕೆಲಸ ಮಾಡಲಿ. ಸಾವಲ್ಲಿ ಬೇಳೆ ಬೇಯಿಸಿಕೊಳ್ಳದ ಸದ್ಗುಣ ಟೀಕೆ ಮಾಡುವವರಿಗೆ ಬರಲಿ ಎಂದು ಅವರು ಹೇಳಿದ್ದಾರೆ.

ದರ್ಶನ್​ಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಧ್ರುವನಾರಾಯಣ್ ಹಾಗೂ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದರು ಮತ್ತು ಈಗಲೂ ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯ ಆಪ್ತರೂ ಆಗಿರುವ ಹೆಚ್​ಸಿ ಮಹದೇವಪ್ಪ ಕೂಡ ನಂಜನಗೂಡು ಟಿಕೆಟ್ ಆಕಾಂಕ್ಷಿಯಾಗಿರುವುದು ಕಾಂಗ್ರೆಸ್ ವರಿಷ್ಠರ ತಲೆನೋವಿಗೆ ಕಾರಣವಾಗಿತ್ತು.

ನನ್ನ ಮಗ ಬೇರೆಯಲ್ಲ, ದರ್ಶನ್ ಬೇರೆಯಲ್ಲ; ಮಹದೇವಪ್ಪ

ಪುತ್ರ ಸುನೀಲ್ ಬೋಸ್ ಜತೆಗೆ ಧ್ರುವನಾರಾಯಣ್ ಅವರ ಮನೆಗೆ ಬುಧವಾರ ಭೇಟಿ ನೀಡಿದ ಮಹದೇವಪ್ಪ, ದರ್ಶನ್ ಜತೆ ಮಾತುಕತೆ ನಡೆಸಿದ್ದಾರೆ. ಬಳಿಕ ತಮಗೆ ಮಗ ಸುನೀಲ್ ಬೇರೆಯಲ್ಲ ದರ್ಶನ್ ಬೇರೆಯಲ್ಲ ಎಂದು ಹೇಳಿದ್ದಾರೆ.

ರಾಮನಗರದ ಸುಗ್ಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಧ್ರುವನಾರಾಯಣ್ ಪುತ್ರ ದರ್ಶನ್​ಗೆ ಟಿಕೇಟ್ ನೀಡುವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಧ್ರುವನಾರಾಯಣ್ ಅಂತಿಮ ದರ್ಶನ ಪಡೆಯಲು ಖುದ್ದು ಮಲ್ಲಿಕಾರ್ಜುನ ಖರ್ಗೆ ಬಂದಿದ್ದರು. ಅಭಿಮಾನಿಗಳ ಆಕ್ರಂದನ ನೋಡಿದ್ದರು. ಅವರು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಧ್ರುವನಾರಾಯಣ ಅವರಿಗೆ ಪರ್ಯಾಯ ನಾಯಕ ಇಲ್ಲ. ಅವರು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದರು. ನಾನಂತೂ ಧ್ರುವನಾರಾಯಣ ಮಗನ ಪರ ವಾದಿಸುವ ವಕೀಲ, ಜಡ್ಜ್ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ನಾನಂತೂ ಧ್ರುವನಾರಾಯಣ ಮಗನ ಪರ ವಾದಿಸುವ ವಕೀಲ, ಜಡ್ಜ್ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ: ಡಿಕೆ ಶಿವಕುಮಾರ್

ಆರ್. ಧ್ರುವನಾರಾಯಣ ಮಾರ್ಚ್ 11ರಂದು ಹೃದಯ ಸ್ತಂಭನದಿಂದ ನಿಧನರಾಗಿದ್ದರು.

ಅದಕ್ಕೂ ಮುನ್ನ, ಧ್ರುವನಾರಾಯಣ್​ಗೆ ಟಿಕೆಟ್ ನೀಡುವ ಬಗ್ಗೆ ಡಿಕೆ ಶಿವಕುಮಾರ್ ಒಲವು ಹೊಂದಿದ್ದರು. ಆದರೆ ಮಹದೇವಪ್ಪಗೆ ಟಿಕೆಟ್​ ನೀಡುವ ಬಗ್ಗೆ ಸಿದ್ದರಾಮಯ್ಯ ಒಲವು ಹೊಂದಿದ್ದರು. ಇಬ್ಬರ ನಡುವೆಯೂ ಸಮನ್ವಯತೆ ಸಾಧಿಸಲಾಗದ ಹಿನ್ನೆಲೆಯಲ್ಲಿ ಇಬ್ಬರ ಹೆಸರನ್ನೂ ಶಿಫಾರಸು ಮಾಡಿ ದೆಹಲಿಗೆ ರವಾನಿಸಲಾಗಿತ್ತು. ಇಬ್ಬರ ಹೆಸರೂ ಇದ್ದ ಬಗ್ಗೆ ಧ್ರುವನಾರಾಯಣ ಕೊಂಚ ಬೇಸರಗೊಂಡಿದ್ದರು. ಕಾರ್ಯಾಧ್ಯಕ್ಷರಾಗಿದ್ದುಕೊಂಡು ತಮಗೆ ಟಿಕೆಟ್​ ಖಚಿತವಾಗದ ಬಗ್ಗೆ ಬೇಸರ ಹೊಂದಿದ್ದರು ಎನ್ನಲಾಗಿತ್ತು. ಅವರ ನಿಧನದ ನಂತರ ಮತ್ತೆ ಹೈಕಮಾಂಡ್​ಗೆ ನಂಜನಗೂಡು ಟಿಕೆಟ್​ ನಿರ್ಧಾರ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಮಹದೇವಪ್ಪ ಹೇಳಿಕೆ ಕೈ ಪಕ್ಷದ ಹೈಕಮಾಂಡ್​ ಅನ್ನು ನಿರಾಳಗೊಳಿಸಬಹುದು ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Wed, 15 March 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ