ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್​ಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ

ವಯೋ ಸಹಜ ಕಾರಣಗಳಿಂದ ರಾಜೀವ್ ತಾರಾನಾಥ್ ಘಟಿಕೋತ್ಸವದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಇಂದು ಮೈಸೂರು ನಿವಾಸಕ್ಕೆ ಆಗಮಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್​ಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಪಂಡಿತ್ ರಾಜೀವ್ ತಾರಾನಾಥ್ಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು
Follow us
TV9 Web
| Updated By: sandhya thejappa

Updated on:Apr 27, 2022 | 2:18 PM

ಮೈಸೂರು:ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ (Rani Channamma University) ಇಂದು (ಏಪ್ರಿಲ್ 27) ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (Pandit Rajeev Taranath) ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆಯ ಪಂಡಿತ್ ರಾಜೀವ್ ತಾರಾನಾಥ್ ಅವರ ನಿವಾಸದಲ್ಲಿ ಪದವಿ ಪ್ರದಾನ ಮಾಡಲಾಗಿದೆ. ಮಾರ್ಚ್​ನಲ್ಲಿ ನಡೆದ ಘಟಿಕೋತ್ಸವದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು.

ವಯೋ ಸಹಜ ಕಾರಣಗಳಿಂದ ರಾಜೀವ್ ತಾರಾನಾಥ್ ಘಟಿಕೋತ್ಸವದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಇಂದು ಮೈಸೂರು ನಿವಾಸಕ್ಕೆ ಆಗಮಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಈ ವೇಳೆ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊಫೆಸರ್ ಎಂ ರಾಮಚಂದ್ರ ಗೌಡ, ಹಣಕಾಸು ಅಧಿಕಾರಿ ಪ್ರೊಫೆಸರ್ ಡಿ ಎನ್ ಪಾಟೀಲ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊಫೆಸರ್ ವೀರನಗೌಡ ಬಿ ಪಾಟೀಲ, ಕುಲಸಚಿವ ಪ್ರೊಫೆಸರ್ ಬಸವರಾಜ ಪದ್ಮಶಾಲಿ ಭಾಗಿಯಾಗಿದ್ದರು.

ಇನ್ನು ರಾಜೀವ್ ತಾರಾನಾಥ್​ಗೆ ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ ಹೀಗೆ ಅನೇಕ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿವೆ. 2013 ರಲ್ಲಿ ಪ್ರತಿಷ್ಟಿತ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಸಮ್ಮಾನ ಗೌರವ ಅವರಿಗೆ ಸಿಕ್ಕಿದೆ. ಜೊತೆಗೆ 2019ರಲ್ಲಿ ಪದ್ಮಶ್ರಿ ಪ್ರಶಸ್ತಿ ಕೂಡಾ ಲಭಿಸಿದೆ.

ರಾಜೀವ್ ತಾರಾನಾಥರು ಅಕ್ಟೋಬರ್ 17, 1932 ರಲ್ಲಿ ಜನಿಸಿದ್ದಾರೆ. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ಎಲ್ಲದಕ್ಕಿಂತ ಮಿಗಿಲಾಗಿ ಇವರ ನಮ್ಮ ಕರ್ನಾಟಕದವರೇ ಆಗಿದ್ದಾರೆ. ಇವರು ಕನ್ನಡ ಚಿತ್ರರಂಗಕ್ಕೆ ಸಂಗೀತದ ಮೂಲಕ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ

ಬೀದರ್​ನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಅವಳಿ ಸಹೋದರರ ಸೈಕಲ್ ಸವಾರಿ ಅಂತ್ಯ; ಮಹದೇಶ್ವರನ ದರ್ಶನ ಮಾಡಿ ವಿಶೇಷ ಪೂಜೆ

ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ದುರಂತ; ರೋಗಿಗಳೆಲ್ಲರೂ ಪ್ರಾಣಾಪಾಯದಿಂದ ಪಾರು

Published On - 2:00 pm, Wed, 27 April 22