ಮೈಸೂರು: ಅರಮನೆಯಲ್ಲಿ ನಡೆಯುವ ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ (Mysore Dasara) ಸಿದ್ಧತೆಗಳು ನಡೆಯುತ್ತಿವೆ. ದಸರಾ ಗಜಪಯಣಕ್ಕೂ ತಯಾರಿಗಳು ನಡೆಯುತ್ತಿದ್ದು, ಆಗಸ್ಟ್ 7ರಂದು ಗಜಪಡೆ ಮೈಸೂರಿಗೆ ಆಗಮಿಸಲಿದೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು (Elephants) ಆಗಮಿಸುತ್ತವೆ. ಬಳಿಕ ಎರಡನೇ ಹಂತದಲ್ಲಿ 5 ಅಥವಾ 6 ಆನೆಗಳು ಆಗಮಿಸುತ್ತವೆ. ಸದ್ಯ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಹೊಸ ಆನೆಗಳಾದ ಗಣೇಶ, ಭೀಮ, ಸುಗ್ರೀವಾ, ಅಜಯ, ಮಹೇಂದ್ರ ಬರುವ ಸಾಧ್ಯತೆಯಿದೆ.
ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭ:
ಜುಲೈ 20ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ದಸರಾ ಮಹೋತ್ಸವದ ಕುರಿತು ಸಭೆ ನಡೆಸಿದ್ದರು. ಸಭೆ ಬಳಿಕ ಮಾತನಾಡಿದ್ದ ಬೊಮ್ಮಾಯಿ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ನಿರ್ಧರಿಸಿದ್ದೇವೆ. ಈ ಬಾರಿ ದಸರಾ ಬಗ್ಗೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ದಸರಾ ಬ್ರ್ಯಾಂಡ್ ನೇಮ್ ಆಗಬೇಕು, ವಿಶ್ವದಾದ್ಯಂತ ಪ್ರಚಾರ ಮಾಡಲಾಗುತ್ತೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅಕ್ಟೋಬರ್ 5ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ವೈದ್ಯರಿಗೂ ಕಾಡುತ್ತಿದೆ ನಿರುದ್ಯೋಗ ಸಮಸ್ಯೆ! ಆರೋಗ್ಯ ಇಲಾಖೆಯ ನಿರ್ಲಕ್ಷಕ್ಕೆ ವೈದ್ಯರಿಗಿಲ್ಲ ಜಾಬ್
ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಲು ವ್ಯವಸ್ಥೆ ಮಾಡಬೇಕಿದೆ. ಗಜಪಯಣ ಮಾವುತರಿಗೆ ಗೌರವ ಕಾಣಿಕೆ ಕೊಟ್ಟು ಕಾರ್ಯಕ್ರಮ ಮಾಡಬೇಕು. ವಸ್ತು ಪ್ರದರ್ಶನ 15 ದಿನ ಮೊದಲೇ ಪ್ರಾರಂಭಕ್ಕೆ ಸೂಚಿಸಲಾಗಿದೆ. ಸ್ಥಳೀಯ ಕಲಾಕಾರರಿಗೆ ಹೆಚ್ಚಿನ ಒತ್ತು ಕೊಡಬೇಕು. ದಿವಸಕ್ಕೆ ಒಬ್ಬರಾದರೂ ಕೂಡ ರಾಷ್ಟ್ರೀಯ ಕಲಾಕಾರರನ್ನು ಮುಖ್ಯ ಆಕರ್ಷಣೆಯಾಗಿ ಕರೆಯುವ ಉದ್ದೇಶವಿದೆ. ಶ್ರೀರಂಗಪಟ್ಟಣ ಚಾಮರಾಜನಗರದಲ್ಲೂ ವೈಭವದ ದಸರಾ ಆಯೋಜಿಸಲಾಗುತ್ತೆ. ಮುಂದಿನ ಒಂದು ವಾರದ ಒಳಗಡೆ ಟೂರಿಸ್ಟ್ ಸರ್ಕ್ಯೂಟ್ ಅಂತ ಆದೇಶ ಮಾಡುತ್ತಿದ್ದೇವೆ. ಮೈಸೂರು ಹಾಗೂ ಹಂಪಿ ಟೂರಿಸ್ಟ್ ಸರ್ಕ್ಯೂಟ್ ಚಾಲನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
Published On - 8:33 am, Sat, 30 July 22