AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Break up: ದಿಶಾ ಪಟಾನಿ-ಟೈಗರ್​ ಶ್ರಾಫ್​ ಬ್ರೇಕಪ್​ಗೆ ಸಿಲ್ಲಿ ಕಾರಣ; ಬಿಟೌನ್​ ಅಂಗಳದಲ್ಲಿ ಹರಿದಾಡಿದೆ ಗಾಸಿಪ್​

Disha Patani Tiger Shroff Break up: ಕತ್ರಿನಾ ಕೈಫ್​, ಆಲಿಯಾ ಭಟ್​ ಮುಂತಾದ ನಟಿಯರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದೇ ರೀತಿ ತಾವು ಕೂಡ ಮದುವೆ ಆಗಬೇಕು ಎಂಬ ಹಂಬಲ ದಿಶಾ ಪಟಾನಿ ಮನದಲ್ಲಿ ಮೂಡಿದೆ. ಆದರೆ ಅದಕ್ಕೊಂದು ವಿಘ್ನ ಎದುರಾಗಿದೆ.

Break up: ದಿಶಾ ಪಟಾನಿ-ಟೈಗರ್​ ಶ್ರಾಫ್​ ಬ್ರೇಕಪ್​ಗೆ ಸಿಲ್ಲಿ ಕಾರಣ; ಬಿಟೌನ್​ ಅಂಗಳದಲ್ಲಿ ಹರಿದಾಡಿದೆ ಗಾಸಿಪ್​
ಟೈಗರ್ ಶ್ರಾಫ್, ದಿಶಾ ಪಟಾನಿ
TV9 Web
| Edited By: |

Updated on: Jul 30, 2022 | 8:15 AM

Share

ಬಾಲಿವುಡ್​ನಲ್ಲಿ ಪ್ರಣಯ ಪಕ್ಷಿಗಳಿಗೆ ಲೆಕ್ಕವಿಲ್ಲ. ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರೆ ಸಾಕು, ಆ ನಟ-ನಟಿಯರ ನಡುವೆ ಲವ್​ ಬೆಳೆದುಬಿಡುತ್ತದೆ. ಆದರೆ ಆ ಸಂಬಂಧ ಹೆಚ್ಚು ದಿನ ಉಳಿದುಕೊಳ್ಳುವುದು ಅಪರೂಪ. ನಟ ಟೈಗರ್​ ಶ್ರಾಫ್ (Disha Patani)​ ಮತ್ತು ನಟಿ ದಿಶಾ ಪಟಾನಿ (Tiger Shroff) ಅವರು ಕಳೆದ 6 ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರು ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂಬ ಮಾಹಿತಿ ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ಬ್ರೇಕಪ್​ (Break up) ಮಾಡಿಕೊಂಡಿವೆ ಎನ್ನುತ್ತಿವೆ ಮೂಲಗಳು. ಅಷ್ಟಕ್ಕೂ ಇಬ್ಬರ ನಡುವಿನ ಪ್ರೀತಿ ಅಂತ್ಯವಾಗಲು ಕಾರಣ ಏನು? ಮದುವೆ ಪ್ರಸ್ತಾಪ! ಹೌದು, ಹೀಗೊಂದು ಗಾಸಿಪ್​ ಬಿ-ಟೌನ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಹಿಂದಿ ಚಿತ್ರರಂಗದಲ್ಲಿ ಅನೇಕ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕತ್ರಿನಾ ಕೈಫ್​, ಆಲಿಯಾ ಭಟ್​ ಮುಂತಾದ ನಟಿಯರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದೇ ರೀತಿ ತಾವು ಕೂಡ ಮದುವೆ ಆಗಬೇಕು ಎಂಬ ಹಂಬಲ ದಿಶಾ ಪಟಾನಿ ಮನದಲ್ಲಿ ಮೂಡಿದೆ. ಆದರೆ ಅದಕ್ಕೆ ಟೈಗರ್​ ಶ್ರಾಫ್​ ಕಡೆಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಗುಸುಗುಸು ಹಬ್ಬಿದೆ.

ಗರ್ಲ್​ಫ್ರೆಂಡ್​ ದಿಶಾ ಪಟಾನಿಯ ಆಸೆಗೆ ಇಂಬು ನೀಡಲು ಟೈಗರ್​ ಶ್ರಾಫ್​ ಈಗಲೇ ಸಿದ್ಧರಿಲ್ಲವಂತೆ. ಹಾಗಾಗಿ ಇಷ್ಟು ಬೇಗ ಮದುವೆ ಆಗುವುದು ಬೇಡ ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಮೂಡಿದೆ. ಆ ಕಾರಣದಿಂದಲೇ ಬ್ರೇಕಪ್​ ನಿರ್ಧಾರಕ್ಕೆ ಬರಲಾಗಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿ​ದ್ದಾರೆ. ಆದರೆ ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ
Image
ಬ್ರೇಕಪ್​ ಬೆನ್ನಲ್ಲೇ ಅನನ್ಯಾ ಪಾಂಡೆಗೆ ಮತ್ತೆ ಲವ್​? ಸ್ಟಾರ್ ಹೀರೋ ಜತೆ ರಿಲೇಶನ್​ಶಿಪ್​
Image
‘ವೈಯಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ’; ಬ್ರೇಕಪ್​ನಿಂದ ಚೇತರಿಸಿಕೊಂಡ ಕಿಯಾರಾ ಅಡ್ವಾಣಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ಬಾಲಿವುಡ್​ನಲ್ಲಿ ಟೈಗರ್​ ಶ್ರಾಫ್​ ಅವರಿಗೆ ಸಖತ್​ ಬೇಡಿಕೆ ಇದೆ. ಆ್ಯಕ್ಷನ್​ ಹೀರೋ ಆಗಿ ಅವರು ಮಿಂಚುತ್ತಿದ್ದಾರೆ. ಈಗ ಅವರಿಗೆ 32 ವರ್ಷ ವಯಸ್ಸು. ಇಷ್ಟು ಬೇಗ ಮದುವೆ ಆಗಿ ಸಂಸಾರ ಆರಂಭಿಸಲು ಟೈಗರ್​ ಶ್ರಾಫ್​ ಸಿದ್ಧರಿಲ್ಲ. ಆದರೆ ಮದುವೆಗೆ ದಿಶಾ ಪಟಾನಿ ಅವಸರ ಮಾಡುತ್ತಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಕಿರಿಕ್​ ಆಗಿದೆ ಎನ್ನಲಾಗಿದೆ.

ಇನ್ನು, ದಿಶಾ ಪಟಾನಿ ಕೂಡ ಬಹುಬೇಡಿಕೆ ಹೊಂದಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರು ಅಭಿನಯಿಸಿರುವ ‘ಏಕ್​ ವಿಲನ್​ ರಿಟರ್ನ್ಸ್​’ ಚಿತ್ರ ಜುಲೈ 29ರಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್