Updated on: Jul 12, 2022 | 7:46 PM
ನಟಿ ಅನನ್ಯಾ ಪಾಂಡೆ ಹಾಗೂ ಇಶಾನ್ ಕಟ್ಟರ್ ನಡುವೆ ಪ್ರೀತಿ ಮೊಳೆತು, ಬ್ರೇಕಪ್ ಆಗಿರುವ ವಿಚಾರ ಬಹುತೇಕರಿಗೆ ಗೊತ್ತಿದೆ. ಅದು ಈಗ ಮುಗಿದ ಅಧ್ಯಾಯ. ಸದ್ಯ ಅವರು ‘ಲೈಗರ್’ ಚಿತ್ರದ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರ ರಿಲೇಶನ್ಶಿಪ್ ಸ್ಟೇಟಸ್ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ.
ನಟಿ ಅನನ್ಯಾ ಪಾಂಡೆ ಅವರು ಈಗ ಆದಿತ್ಯ ರಾಯ್ ಕಪೂರ್ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.
ಅನನ್ಯಾ ಪಾಂಡೆ ಹಾಗೂ ಆದಿತ್ಯಾ ರಾಯ್ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಈಗ ಈ ಗೆಳೆತನ ಪ್ರೀತಿಗೆ ತಿರುಗಿದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಈವರೆಗೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಆದರೂ ಹೀಗೊಂದು ಸುದ್ದಿ ಹುಟ್ಟಿಕೊಂಡಿದೆ ಎಂದರೆ ಇದರಲ್ಲಿ ಏನೋ ಇರಲೇಬೇಕು ಎಂದು ಅನನ್ಯಾ ಪಾಂಡೆ ಫ್ಯಾನ್ಸ್ ಊಹಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ಹೀರೋ ಆಗಿರುವ ‘ಲೈಗರ್’ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿ. ಈ ಚಿತ್ರದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜುಲೈ 11ರಂದು ರಿಲೀಸ್ ಆದ ಈ ಚಿತ್ರದ ‘ಅಕ್ಡಿ ಪಕ್ಡಿ’ ಹಾಡು ಸಖತ್ ಸೆನ್ಸೇಶನ್ ಸೃಷ್ಟಿ ಮಾಡಿದೆ.