ಕರ್ನಾಟಕದಲ್ಲಿ ವೈದ್ಯರಿಗೂ ಕಾಡುತ್ತಿದೆ ನಿರುದ್ಯೋಗ ಸಮಸ್ಯೆ! ಆರೋಗ್ಯ ಇಲಾಖೆಯ ನಿರ್ಲಕ್ಷಕ್ಕೆ ವೈದ್ಯರಿಗಿಲ್ಲ ಜಾಬ್
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದಾದ ವೈದ್ಯರಿಗೆ ಆರೋಗ್ಯ ಇಲಾಖೆ ಕೌನ್ಸಲಿಂಗ್ನ ಪದೇ ಪದೇ ಮುಂದೂಡುತ್ತಿದೆ. ಹೀಗಾಗಿ ಎಂಬಿಬಿಎಸ್, ಎಂಡಿ, ಎಂಎಸ್ ಪಾಸ್ ಆದವರಿಗೆ ರಾಜ್ಯದಲ್ಲಿ ಕೆಲಸ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ನಿರುದ್ಯೋಗ (Unemployment) ಸಮಸ್ಯೆ ತಾಂಡವಾಡುತ್ತಿದ್ದು, ಯುವ ಜನತೆ ಕೆಲಸ (Job) ಇಲ್ಲದೆ ಪರದಾಡುತ್ತಿದ್ದಾರೆ. ಈ ಸಮಸ್ಯೆ ಇದೀಗ ವೈದ್ಯರಿಗೂ ಕಾಡುತ್ತಿದ್ದು, ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸುಮಾರು 2,500ಕ್ಕೂ ಹೆಚ್ಚು ವೈದ್ಯರು ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದಾದ ವೈದ್ಯರಿಗೆ ಆರೋಗ್ಯ ಇಲಾಖೆ ಕೌನ್ಸಲಿಂಗ್ನ ಪದೇ ಪದೇ ಮುಂದೂಡುತ್ತಿದೆ. ಹೀಗಾಗಿ ಎಂಬಿಬಿಎಸ್, ಎಂಡಿ, ಎಂಎಸ್ ಪಾಸ್ ಆದವರಿಗೆ ರಾಜ್ಯದಲ್ಲಿ ಕೆಲಸ ಇಲ್ಲ. ಅಲ್ಲದೆ ಸ್ಪೆಷಲಿಸ್ಟ್ ಡಾಕ್ಟರ್ಗಳು ಕಳೆದ 3 ತಿಂಗಳಿನಿಂದ ಮನೆಯಲ್ಲಿಯೇ ಕುಳಿತಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಪರೀಕ್ಷೆ ಮುಗಿದು, ಫಲಿತಾಂಶ ಬಂದರೂ ಇನ್ನು ಕೌನ್ಸಲಿಂಗ್ ನಡೆದಿಲ್ಲ. ಮೇ ತಿಂಗಳಲ್ಲಿ ಪರೀಕ್ಷೆ ಮುಗಿದಿದೆ. ಎಂಬಿಬಿಎಸ್, ಎಂಸ್ ಮುಗಿಸಿದ್ದರೂ ಕೌನಲ್ಸಿಂಗ್ ನಡೆಸಲು ಇಲಾಖೆ ಮೀನಾಮೇಷ ಎಣಿಸುತ್ತಿದೆ. ಆಗಸ್ಟ್ 4ಕ್ಕೆ ಕೌನ್ಸಲಿಂಗ್ ನಡೆಯಬೇಕಿತ್ತು. ಆದರೆ ಕೌನ್ಸಲಿಂಗ್ನ ಮುಂದೂಡಲಾಗಿದೆ.
ಇದನ್ನೂ ಓದಿ: NTPC’s Floating Solar Plant Launch: ವಿದ್ಯುತ್ ವಲಯದ ಪರಿಷ್ಕೃತ ವಿತರಣಾ ವಲಯ ಯೋಜನೆಗೆ ಇಂದು ಪ್ರಧಾನಿ ಮೋದಿ ಚಾಲನೆ
ಕೆಲವರ ನೋಂದಣಿ ಆಗಿಲ್ಲ ಎಂದು ನೆಪವೊಡ್ಡಿ ಕೌನ್ಸಲಿಂಗ್ನ ಮುಂದೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೇರಳ, ಮಹಾರಾಷ್ಟ್ರ ಮಾದರಿ ಅನುಸರಿಸಲು ಒತ್ತಾಯಿಸುತ್ತಿದ್ದಾರೆ. ಮೆರಿಟ್ನಲ್ಲಿ ವೈದ್ಯಕೀಯ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಬಾಂಡ್ ಇರುತ್ತದೆ. ಬಾಂಡ್ ಪ್ರಕಾರ ವೈದ್ಯಕೀಯ ಅಭ್ಯಾಸ ಮುಗಿಯುತ್ತಿದಂತೆ ಅವರೆಲ್ಲ ಸರ್ಕಾರಿ ಸೇವೆ ಸಲ್ಲಿಸಬೇಕು. ಕೇರಳ, ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳು ಕೊನೆ ವರ್ಷದಲ್ಲಿ ಇರುವ ಹೊತ್ತಿಗೆ ಕೆಲಸ ಸಿಕ್ಕಿ ಬಿಡುತ್ತದೆ. ಆದರೆ ಕರ್ನಾಟಕದಲ್ಲಿ ವೈದ್ಯರ ನೇಮಕಾತಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ.
ಬಾಂಡ್ ಇರುವ ಕಾರಣ ಖಾಸಗಿ ಆಸ್ಪತ್ರೆಗಳಲ್ಲೂ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಇತ್ತ ಸರ್ಕಾರ ಕೌನ್ಸಲಿಂಗ್ ನಡೆಸದ ಹಿನ್ನೆಲೆ ಸರ್ಕಾರಿ ಅಸ್ಪತ್ರೆಗಳಲ್ಲಿಯೂ ಕೆಲಸ ನಿರ್ವಹಿಸಲಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ವೈದ್ಯಕೀಯ ಸೇವೆ ನೀಡಬೇಕಾದ ವೈದ್ಯರು ಮನೆಯಲ್ಲೇ ಕಾಲ ಕಳೆಯುವಂತಾಗಿದೆ.
ಇದನ್ನೂ ಓದಿ: ಕೊರೊನಾ ಸಂಖ್ಯೆಯಲ್ಲಿ ಮತ್ತೆ ಏರಿಕೆ: ರಾಜ್ಯದಲ್ಲಿ ಹೊಸದಾಗಿ 2 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ, ನಾಲ್ವರ ಸಾವು
Published On - 8:14 am, Sat, 30 July 22