ಕೊರೊನಾ ಸಂಖ್ಯೆಯಲ್ಲಿ ಮತ್ತೆ ಏರಿಕೆ: ರಾಜ್ಯದಲ್ಲಿ ಹೊಸದಾಗಿ 2 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ, ನಾಲ್ವರ ಸಾವು

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಬೆಂಗಳೂರು, ಕಲಬುರಗಿ, ಕೊಪ್ಪಳ, ರಾಯಚೂರಲ್ಲಿ ತಲಾ ಒಬ್ಬರು ಕೊರೊನಾಗೆ ಸಾವನ್ನಪ್ಪಿದ್ದಾರೆ.

ಕೊರೊನಾ ಸಂಖ್ಯೆಯಲ್ಲಿ ಮತ್ತೆ ಏರಿಕೆ: ರಾಜ್ಯದಲ್ಲಿ ಹೊಸದಾಗಿ 2 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ, ನಾಲ್ವರ ಸಾವು
ಕೊರೊನಾ
TV9kannada Web Team

| Edited By: Ayesha Banu

Jul 29, 2022 | 10:09 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ(Coronavirus) ಪ್ರಕರಣಗಳು ಹಾವು ಏಣಿ ಆಟ ಆಡುತ್ತಿದೆ. ಕೆಲ ದಿನಗಳಿಂದ ಏರಿಕೆ ಕಂಡಿದ್ದ ಕೊರೊನಾ ನಿನ್ನೆ ಕಮ್ಮಿಯಾಗಿತ್ತು. ಆದ್ರೆ ಇಂದು ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಹಾಗೂ ಕೊರೊನಾ ಸಾವುಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 2,130 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿಂದು 1,615 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಬೆಂಗಳೂರು, ಕಲಬುರಗಿ, ಕೊಪ್ಪಳ, ರಾಯಚೂರಲ್ಲಿ ತಲಾ ಒಬ್ಬರು ಕೊರೊನಾಗೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 9,866 ಇದೆ. ಹಾಗೂ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 6.51ರಷ್ಟಿದೆ.

ಒಂದೇ ಸಿರಿಂಜ್ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ, ಇದರಲ್ಲಿ ನನ್ನ ತಪ್ಪೇನಿದೆ ಎಂದ ಆರೋಗ್ಯ ಕಾರ್ಯಕರ್ತ

ಒಂದೇ ಸಿರಿಂಜ್ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ವರದಿಯಾಗಿದೆ. ಅಧಿಕಾರಿಗಳು ಕೇವಲ ಒಂದೇ ಸಿರಿಂಜ್ ಕಳುಹಿಸಿದ್ದಾರೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ನಲ್ಲಿ ಲಸಿಕೆ ಹಾಕಲು ಇಲಾಖೆಯ ಮುಖ್ಯಸ್ಥರು ಹೇಳಿದ್ದಾರೆ ಇದರಲ್ಲಿ ನನ್ನ ತಪ್ಪೇನಿದೆ ಎಂದು ಆರೋಗ್ಯ ಕಾರ್ಯಕರ್ತ ಪ್ರಶ್ನಿಸಿದ್ದಾರೆ.

1990ರ ದಶಕದಿಂದಲೂ ಎಚ್‌ಐವಿ ಹರಡಲು ಆರಂಭಿಸಿದಾಗಿನಿಂದ ಒಬ್ಬರಿಗೆ ಒಂದು ಸಿರಿಂಜ್ನಂತೆ ಬಳಕೆ ಮಾಡಬೇಕು, ಒಂದೇ ಸಿರಿಂಜ್ ಇಬ್ಬರಿಗೆ ಬಳಕೆ ಮಾಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.

ಆದರೆ ಈ ವ್ಯಕ್ತಿ 30 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ನಲ್ಲಿ ಲಸಿಕೆ ನೀಡಿದ್ದಾರೆ. ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಕೇಳಿದಾಗ ನನಗೆ ಅದು ತಿಳಿದಿದೆ.

ಅದಕ್ಕಾಗಿಯೇ ನಾನು ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಅಧಿಕಾರಿಯನ್ನು ಕೇಳಿದೆ ಮತ್ತು ಅವರು ಹೌದು ಎಂದು ಹೇಳಿದರು. ಇದರಲ್ಲಿ ನನ್ನ ತಪ್ಪೇನಿದೆ ಅವರು ಹೇಳಿದ್ದನ್ನು ನಾನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada