- Kannada News Sports Commonwealth games PV Sindhu and Kidambi Srinath 5-0 victory vs Pakistan in Mixed Team Badminton in CWG 2022
PV Sindhu: ಮೊದಲ ಮ್ಯಾಚ್ನಲ್ಲೇ ಪಾಕ್ ಆಟಗಾರ್ತಿಗೆ ಮಣ್ಣು ಮುಕ್ಕಿಸಿದ ಪಿವಿ ಸಿಂಧು: ಭರ್ಜರಿ ಗೆಲುವು
CWG 2022: ಬಹುನಿರೀಕ್ಷಿತ ಕಾಮಲ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮೊದಲ ದಿನವೇ ಪರಾಕ್ರಮ ಮೆರೆದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ನಡೆದ ಎಲ್ಲ ಕ್ರೀಡೆಯಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಎ ವಿಭಾಗದ ಬ್ಯಾಡ್ಮಿಂಟನ್ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಕೆಡವಿತು.
Updated on:Jul 30, 2022 | 8:09 AM

ಬಹುನಿರೀಕ್ಷಿತ ಕಾಮಲ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಮೊದಲ ದಿನವೇ ಪರಾಕ್ರಮ ಮೆರೆದಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧ ನಡೆದ ಎಲ್ಲ ಕ್ರೀಡೆಯಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಎ ವಿಭಾಗದ ಬ್ಯಾಡ್ಮಿಂಟನ್ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಕೆಡವಿತು.

ಮಿಶ್ರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಬಿ. ಸುಮೀತ್ ರೆಡ್ಡಿ 21-9, 21-12 ಅಂತರದ ಗೆಲುವು ಒಲಿಸಿಕೊಂಡರು. ಬಳಿಕ ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ 21-16, 22-20 ಅಂತರದಿಂದ ಮುಹಮ್ಮದ್ ಅಲಿ ಅವರನ್ನು ಕೆಡವಿದರು.

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪಾಕಿಸ್ತಾನಿ ಮಹೂರ್ ಶೆಹಜಾದಿ ಅವರನ್ನು ಸೋಲಿಸಿ ಕಾಮನ್ ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲೇ ಸಿಂಧು 21-7, 21-6 ಸೆಟ್ ಗಳಿಂದ ಮಹೂರ್ ಶೆಹಜಾದಿ ಅವರನ್ನು ಸೋಲಿಸಿದರು.

ಇನ್ನು ಪುರುಷರ ಡಬಲ್ಸ್ ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ 21-12, 21-9 ಅಂತರದಿಂದ ಮುರಾದ್ ಅಲಿ-ಮುಹಮ್ಮದ್ ಇರ್ಫಾನ್ ವಿರುದ್ಧ ಗೆಲುವು ಸಾಧಿಸಿದರು.

ಇತ್ತ ಪುರುಷರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವ ಥಾಪ ಅಮೋಘ ಆರಂಭ ಪಡೆದರು. 63.5 ಕೆಜಿ ವಿಭಾಗದಲ್ಲಿ ಪಾಕಿಸ್ಥಾನದ ಸುಲೇಮಾನ್ ಬಲೋಕ್ ಅವರನ್ನು 5-0 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 5 ಬಾರಿಯ ಏಷ್ಯನ್ ಚಾಂಪಿಯನ್ ಶಿಪ್ ಪದಕ ವಿಜೇತ ಶಿವ ಥಾಮ ಅವರಿಗೆ ಪಾಕಿಸ್ಥಾನಿ ಎದುರಾಳಿ ಯಾವ ರೀತಿಯಲ್ಲೂ ಸಾಟಿಯಾಗಲಿಲ್ಲ.

ಈಜು ಸರ್ಧೆಯಲ್ಲಿ ಭಾರತದ ಶ್ರೀಹರಿ ನಟರಾಜನ್ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು. 54.68 ಸೆಕೆಂಡ್ ಗಳಲ್ಲಿ ದೂರವನ್ನು ಕ್ರಮಿಸಿದ ಶ್ರೀಹರಿ ಹೀಟ್ ನಲ್ಲಿ 3ನೇ ಹಾಗೂ ಒಟ್ಟಾರೆ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಭಾರತ ಮಹಿಳಾ ಹಾಕಿ ತಂಡ ಕೂಡ ಭರ್ಜರಿ ಶುಭಾರಂಭ ಮಾಡಿದೆ. ಗುರ್ಜಿತ್ ಕೌರ್ ಗಳಿಸಿದ ಸೊಗಸಾದ ಎರಡು ಗೋಲುಗಳ ಬಲದಿಂದ ಸವಿತಾ ಪೂನಿಯಾ ನಾಯಕತ್ವದ ಭಾರತ 5-0ಯಿಂದ ತನಗಿಂತ ಕೆಳ ರ‍್ಯಾಂಕಿನ ಘಾನಾ ವಿರುದ್ಧ ಜಯಭೇರಿ ಮೊಳಗಿಸಿತು.
Published On - 8:09 am, Sat, 30 July 22
