CWG 2022, IND vs AUS: ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್; ಉಭಯ ತಂಡಗಳು ಹೀಗಿವೆ

India Vs Australia T20 Women Match: ಬಹಳ ದಿನಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಮರಳಿದೆ. ಇದಕ್ಕೂ ಮುನ್ನ 1998ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್‌ ಸೇರ್ಪಡೆಗೊಂಡಿತ್ತು, ನಂತರ ಈ ವರ್ಷ ಮಹಿಳಾ ಕ್ರಿಕೆಟ್‌ಗೆ ಸ್ಥಾನ ಸಿಕ್ಕಿತ್ತು.

CWG 2022, IND vs AUS: ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್; ಉಭಯ ತಂಡಗಳು ಹೀಗಿವೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Jul 29, 2022 | 3:39 PM

ಭಾರತ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಮೊದಲ ಎದುರಾಳಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಬಹಳ ದಿನಗಳ ನಂತರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಮರಳಿದೆ. ಇದಕ್ಕೂ ಮುನ್ನ 1998ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್‌ ಸೇರ್ಪಡೆಗೊಂಡಿತ್ತು, ನಂತರ ಈ ವರ್ಷ ಮಹಿಳಾ ಕ್ರಿಕೆಟ್‌ಗೆ ಸ್ಥಾನ ಸಿಕ್ಕಿತ್ತು.

ಮೇಘನಾ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ತಮ್ಮ ಬೌಲಿಂಗ್‌ನಿಂದ ಸಾಕಷ್ಟು ಪ್ರಭಾವಭೀರಿ ಈ ಪಂದ್ಯಾವಳಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಒಡಿಐ ವಿಚಾರಕ್ಕೆ ಬಂದರೆ ಕಳೆದ ವರ್ಷವಷ್ಟೇ ಅವರು ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಈ ಎರಡೂ ಚೊಚ್ಚಲ ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು. ಮೇಘನಾ 14 ODI ಪಂದ್ಯಗಳನ್ನು ಆಡಿ, ಅಷ್ಟೇ ಸಂಖ್ಯೆಯ ವಿಕೆಟ್ಗಳನ್ನು ಪಡೆದಿದ್ದಾರೆ.

ಭಾರತ ತಂಡದಲ್ಲಿ ಮೂವರು ಸ್ಪಿನ್ನರ್‌ಗಳು

ಇದನ್ನೂ ಓದಿ
Image
CWG 2022: ಕಾಮನ್‌ವೆಲ್ತ್ ಗೇಮ್ಸ್ ಅದ್ಧೂರಿ ಆರಂಭ ಹೇಗಿತ್ತು ಗೊತ್ತಾ? ಫೋಟೋ ನೋಡಿ
Image
CWG 2022 Schedule Day 1: ಕಾಮನ್​ವೆಲ್ತ್ ಗೇಮ್ಸ್ ಮೊದಲ ದಿನ ಭಾರತ ಯಾವ್ಯಾವ ಸ್ಪರ್ಧೆಗಳಲ್ಲಿ ಅಖಾಡಕ್ಕಿಳಿಯಲಿದೆ ಗೊತ್ತಾ?
Image
CWG 2022: ಕಾಮನ್​ವೆಲ್ತ್ ಗೇಮ್ಸ್ ಆರಂಭದ ಮೊದಲ ದಿನವೇ ಭಾರತ-ಪಾಕಿಸ್ತಾನ ಮುಖಾಮುಖಿ..!

ಇಬ್ಬರು ವೇಗದ ಬೌಲರ್‌ಗಳಿಗೆ ಅವಕಾಶ ನೀಡಿರುವ ಭಾರತ ತಂಡವು ತನ್ನ ಪ್ಲೇಯಿಂಗ್-11 ರಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡಿದೆ. ಟಾಸ್ ಸಮಯದಲ್ಲಿ, ಹರ್ಮನ್‌ಪ್ರೀತ್, “ವಿಕೆಟ್ ಉತ್ತಮವಾಗಿ ಕಾಣುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಈ ತಂಡವು ತುಂಬಾ ಪಾಸಿಟಿವ್​ ಆಗಿ ಕಾಣುತ್ತಿದೆ. ನಾವು ಮೂವರು ಸ್ಪಿನ್ನರ್‌ಗಳು, ಇಬ್ಬರು ಮಧ್ಯಮ ವೇಗಿಗಳೊಂದಿಗೆ ಆಡುತ್ತಿದ್ದೇವೆ ಎಂದಿದ್ದಾರೆ.

ಎರಡೂ ತಂಡಗಳು ಹೀಗಿವೆ

ಆಸ್ಟ್ರೇಲಿಯಾ: ಮೆಗ್ ಲೆನ್ನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೈನ್ಸ್, ಆಶ್ಲೇ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಎಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಮೇಘನಾ ಸಿಂಗ್, ರೇಣುಕಾ ಠಾಕೂರ್.

Published On - 3:34 pm, Fri, 29 July 22