2020-21ರ ಕಾರ್ಮಿಕ ಸಮೀಕ್ಷೆ ಪ್ರಕಾರ ದೇಶದಲ್ಲಿ ನಿರುದ್ಯೋಗ ದರ ಕುಸಿತ; ಏನಿದು ಲೆಕ್ಕಾಚಾರ?
ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ, 2020-21ರಲ್ಲಿ ನಿರುದ್ಯೋಗ ದರವು ಶೇಕಡಾ 3.9 ರಷ್ಟಿದ್ದರೆ, ಮಹಿಳೆಯರಲ್ಲಿ ಶೇಕಡಾ 2.1 ರಷ್ಟಿತ್ತು.
ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ 2020-21 (ಜುಲೈ-ಜೂನ್) ನಲ್ಲಿ ಕಾರ್ಮಿಕ ಸೂಚಕಗಳು ತೀಕ್ಷ್ಣವಾದ, ಸರ್ವಾಂಗೀಣ ಸುಧಾರಣೆಯನ್ನು ದಾಖಲಿಸಿವೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಜುಲೈ 2020 ರಿಂದ ಜೂನ್ 2021 ರವರೆಗೆ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (Periodic Labour Force Survey -PLFS) ವಾರ್ಷಿಕ ವರದಿಯು ನಿರುದ್ಯೋಗ ದರವು ಸಾಮಾನ್ಯ ಸ್ಥಿತಿಯ ಪ್ರಕಾರ (ಸಮೀಕ್ಷೆಯ ಹಿಂದಿನ ಕಳೆದ 365 ದಿನಗಳ ಉಲ್ಲೇಖದ ಅವಧಿ) 2019-20 ರಲ್ಲಿ 4.8 ಶೇಕಡಾದಿಂದ 4.2 ಶೇಕಡಾಕ್ಕೆ ಕಡಿಮೆಯಾಗಿದೆ ಎಂದು ತೋರಿಸಿದೆ. ಪ್ರಸ್ತುತ ಸಾಪ್ತಾಹಿಕ ಸ್ಥಿತಿಯ ಪ್ರಕಾರ (ಒಂದು ವಾರದ ಉಲ್ಲೇಖ ಅವಧಿ) – ಉದ್ಯೋಗಗಳ ಮೇಲೆ ಸಂಭವನೀಯ ಹೊಡೆತದ ನಿರೀಕ್ಷೆಗಳಿಗೆ ವಿರುದ್ಧವಾಗಿ -2020-21 ರಲ್ಲಿ ನಿರುದ್ಯೋಗ ದರವು 8.8 ಶೇಕಡಾದಿಂದ 7.5 ಶೇಕಡಾಕ್ಕೆ ಕಡಿಮೆಯಾಗಿದೆ. ಅದೇ ವೇಳೆ ಒಟ್ಟಾರೆ ಉದ್ಯೋಗದ ಪರಿಸ್ಥಿತಿಯು ಸುಧಾರಣೆಯನ್ನು ತೋರಿಸಿದೆ. ಈ ಸುಧಾರಣೆ ಹೆಚ್ಚಾಗಿ ಕಡಿಮೆ-ಗುಣಮಟ್ಟದ, ಪಾವತಿಸದ ಕೆಲಸದಲ್ಲಿ ಕಂಡುಬಂದಿದೆ.
2020-21 ರಲ್ಲಿ ನಿರುದ್ಯೋಗ ದರ 4.2 ಶೇಕಡಾ ಆಗಿದ್ದು ಮೊದಲ ಪಿಎಲ್ಎಫ್ಎಸ್ 2017-18 ರಲ್ಲಿ ನಿರುದ್ಯೋಗ ದರ 6.1 ಶೇಕಡಾ ಎಂದು ತೋರಿಸಿದೆ. ವರದಿಯ ಪ್ರಕಾರ, ಕಾರ್ಮಿಕರ ಭಾಗವಹಿಸುವಿಕೆ ದರ (LFPR), ಅಥವಾ ಕಾರ್ಮಿಕರಾಗಿ ಕೆಲಸ ಮಾಡುವವರು ಅಥವಾ ಕೆಲಸ ಮಾಡಲು ಬಯಸುವವರು ಅಥವಾ ಲಭ್ಯವಿರುವವರು, 2020-21 ರಲ್ಲಿ 39.3 ಪ್ರತಿಶತದಷ್ಟು ನಾಲ್ಕು ವರ್ಷಗಳಲ್ಲಿ ಅತ್ಯಧಿಕವಾಗಿದ್ದು, ಕಾರ್ಮಿಕರ ಜನಸಂಖ್ಯೆಯ ಅನುಪಾತದಂತೆ ( WPR) 36.3 ಶೇಕಡಾ ಆಗಿದೆ. ಡಬ್ಲ್ಯುಪಿಆರ್ ಅನ್ನು ಜನಸಂಖ್ಯೆಯಲ್ಲಿ ಉದ್ಯೋಗಿಗಳ ಶೇಕಡಾವಾರು ಎಂದು ವ್ಯಾಖ್ಯಾನಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ, 2020-21ರಲ್ಲಿ ನಿರುದ್ಯೋಗ ದರವು ಶೇಕಡಾ 3.9 ರಷ್ಟಿದ್ದರೆ, ಮಹಿಳೆಯರಲ್ಲಿ ಶೇಕಡಾ 2.1 ರಷ್ಟಿತ್ತು. ನಗರ ಪ್ರದೇಶಗಳಲ್ಲಿ, ಮಹಿಳೆಯರ ನಿರುದ್ಯೋಗ ದರವು ಶೇಕಡಾ 8.6 ರಷ್ಟಿದ್ದರೆ, ಪುರುಷರಲ್ಲಿ ಶೇಕಡಾ 6.1 ರಷ್ಟಿದೆ.
ಕೃಷಿ ಸಂಬಂಧಿ ಕೆಲಸಗಳು, ವೇತನ ರಹಿತ ಕೆಲಸಗಳಲ್ಲಿ ಏರಿಕೆ
ಒಟ್ಟಾರೆ ಉದ್ಯೋಗದ ಪರಿಸ್ಥಿತಿಯು ಸುಧಾರಣೆಯನ್ನು ತೋರಿಸಿದರೆ, ಕಡಿಮೆ-ಗುಣಮಟ್ಟದ, ವೇತನವಿಲ್ಲದ ಕೆಲಸದಲ್ಲಿ ಏರಿಕೆ ಕಂಡುಬಂದಿದೆ. 2019-20 ರಲ್ಲಿ 15.9 ಶೇಕಡಾ ಮತ್ತು 2018-19 ರಲ್ಲಿ ಶೇಕಡಾ 13.3 ರಿಂದ ಶೇಕಡಾ 17.3 ಕ್ಕೆ ಏರುವ ಮೂಲಕ 2020-21 ರಲ್ಲಿ ಸಂಬಳವಿಲ್ಲದ ಸ್ವಯಂ ಉದ್ಯೋಗಿ ವರ್ಗದ ಉದ್ಯೋಗವು ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದ ವೇತನ ರಹಿತ ಉದ್ಯೋಗವು 2020-21 ರಲ್ಲಿ 21.3 ಕ್ಕೆ ಏರಿಕೆಯನ್ನು ತೋರಿಸಿದೆ. ಹಿಂದಿನ ವರ್ಷ ಇದು ಶೇ 20.0 ಆಗಿತ್ತು. ಆದರೆ ನಗರ ಪ್ರದೇಶಗಳಿಗೆ ಈ ದರ 5.7 ಶೇಕಡಾದಿಂದ 6.3 ಶೇಕಡಾಕ್ಕೆ ಏರಿಕೆಯಾಗಿದೆ.
2020-21 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ವೇತನವಿಲ್ಲದ ಸ್ವಯಂ ಉದ್ಯೋಗವು ಶೇಕಡಾ 42.8 ಕ್ಕೆ ಏರಿಕೆಯಾಗಿದೆ, ಇದು ವರ್ಷದ ಹಿಂದೆ ಶೇಕಡಾ 42.3 ಆಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಪುರುಷರಿಗೆ ವೇತನವಿಲ್ಲದ ಸ್ವಯಂ ಉದ್ಯೋಗವು ಶೇಕಡಾ 10.4 ರಿಂದ ಶೇಕಡಾ 11.0 ಕ್ಕೆ ಏರಿದೆ.
ನಗರ ಪ್ರದೇಶಗಳಲ್ಲಿ, ಮಹಿಳೆಯರಿಗೆ ಪಾವತಿಸದ ಸ್ವಯಂ ಉದ್ಯೋಗವು 2019-20 ರಲ್ಲಿ 11.1 ಶೇಕಡಾದಿಂದ 2020-21 ರಲ್ಲಿ ಶೇಕಡಾ 12.4 ಕ್ಕೆ ಗಮನಾರ್ಹ ಹೆಚ್ಚಳವನ್ನು ತೋರಿಸಿದ್ದು, ಪುರುಷರಲ್ಲಿ ಇದು ಶೇಕಡಾ 4.1 ರಿಂದ ಶೇಕಡಾ 4.5 ಕ್ಕೆ ಹೆಚ್ಚಾಗಿದೆ.
ಪಿಎಲ್ಎಫ್ಎಸ್ ದತ್ತಾಂಶವು ಕೃಷಿಯಲ್ಲಿ ತೊಡಗಿರುವ ಕಾರ್ಮಿಕರ ಪಾಲು 2020-21 ರಲ್ಲಿ ಏರಿಕೆಯನ್ನು ತೋರಿಸಿದೆ 2019-20 ರಲ್ಲಿ 45.6 ಶೇಕಡಾ ಇದ್ದದ್ದು 2020-21 ರಲ್ಲಿ 46.5 ಶೇಕಡಾ ಆಗಿದೆ. 2018-19 ರಲ್ಲಿ ಇದು ಶೇಕಡಾ 42.5 ಆಗಿತ್ತು.
2004-05 ರ ನಂತರದ ವೇಗವನ್ನು ಪಡೆದ ಕೃಷಿಯಿಂದ ದೂರ ಹೋಗುವ ಕಾರ್ಮಿಕರ ಚಲನೆಯು ಆರ್ಥಿಕ ಮಂದಗತಿ ಮತ್ತು ಸಾಂಕ್ರಾಮಿಕ ರೋಗದಿಂದ ಸ್ಥಗಿತಗೊಂಡಿದೆ ಎಂದು ಇದು ಸೂಚಿಸುತ್ತದೆ. ನಗರಗಳಿಂದ ಹಳ್ಳಿಗಳಿಗೆ ಕಾರ್ಮಿಕರ ಹಿಮ್ಮುಖ ವಲಸೆಯು ಕೃಷಿ ವಲಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿತ್ತು.
ಕೃಷಿ ಉದ್ಯೋಗದ ಪಾಲು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಿಗೆ ಹೆಚ್ಚು ಕಂಡುಬಂದಿದೆ. ನಗರ ಪ್ರದೇಶಗಳಲ್ಲಿ, 2019-20 ರಲ್ಲಿ 5.0 ಪ್ರತಿಶತದಿಂದ 2020-21 ರಲ್ಲಿ ಪುರುಷ ಉದ್ಯೋಗವು 5.3 ಶೇಕಡಾಕ್ಕೆ ಏರಿದೆ, ಆದರೆ 2020-21 ರಲ್ಲಿ ಮಹಿಳೆಯರಿಗೆ 8.2 ಶೇಕಡಾದಿಂದ 10.4 ಶೇಕಡಾಕ್ಕೆ ಏರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೃಷಿ ಉದ್ಯೋಗದಲ್ಲಿ ಕ್ರಮವಾಗಿ ಶೇಕಡಾ 53.8 ಮತ್ತು ಶೇಕಡಾ 75.4 ಕ್ಕೆ ಏರಿಕೆ ಕಂಡಿದೆ. ಹಿಂದಿನ ವರ್ಷದಲ್ಲಿ ಇದು ಶೇಕಡಾ 55.4 ಮತ್ತು ಶೇಕಡಾ 75.7 ರಿಂದ ಆಗಿತ್ತು.